ಶಾರ್ಜಾ: ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಬೌಲಿಂಗ್ ದಾಳಿಯನ್ನು ಪುಡಿಗಟ್ಟಿದ ಡೆಲ್ಲಿ ಕ್ಯಾಪಿಟಲ್ನ ಯುವ ಪಡೆ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 228 ರನ್ಗಳ ಬೃಹತ್ ಮೊತ್ತ ದಾಖಲಿಸಿದೆ.
ಟಾಸ್ ಸೋತರು ಬ್ಯಾಟಿಂಗ್ ಇಳಿದ ಡೆಲ್ಲಿ ಶಾರ್ಜಾದ ಚಿಕ್ಕ ಬೌಂಡರಿ ಲಾಭ ಪಡೆದ ಡೆಲ್ಲಿ ಕ್ಯಾಪಿಟಲ್ ತಂಡ ಆರಂಭದಿಂದಲೇ ಅಬ್ಬರದ ಬ್ಯಾಟಿಂಗ್ ಆರಂಭಿಸಿತು.
ಇನ್ನಿಂಗ್ಸ್ ಆರಂಭಿಸಿ ಶಾ ಹಾಗೂ ಶಿಖರ್ ಧವನ್ ಮೊದಲ ವಿಕೆಟ್ಗೆ 5.5 ಓವರ್ಗಳಲ್ಲಿ 56 ರನ್ಗಳ ಜೊತೆಯಾಟ ನೀಡಿ ಭರ್ಜರಿ ಆರಂಭ ಒದಗಿಸಿಕೊಟ್ಟರು. ಧವನ್ 16 ಎಸೆತಗಳಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 26 ರನ್ಗಳಿಸಿ ಚಕ್ರವರ್ತಿ ಬೌಲಿಂಗ್ನಲ್ಲಿ ಔಟಾದರು.
ನಂತರ ಬಂದ ನಾಯಕ ಅಯ್ಯರ್ ಹಾಗೂ ಪೃಥ್ವಿ ಶಾ ಕೆಕೆಆರ್ ಬೌಲರ್ಗಳನ್ನು ಮನಬಂದಂತೆ ದಂಡಿಸಿದರು. ಈ ಯುವ ಜೋಡಿ ಕೇವಲ 41 ಎಸೆತಗಳಲ್ಲಿ 73 ರನ್ ಸೇರಿಸಿತು. ಅರ್ಧಶತಕ ಬಾರಿಸಿ ಮುನ್ನುಗ್ಗುತ್ತಿದ್ದ ಶಾ ನಾಗರಕೋಟಿ ಓವರ್ನಲ್ಲಿ ಗಿಲ್ಗೆ ಕ್ಯಾಚ್ ನೀಡಿ ಔಟಾದರು. ಈ ವೇಳೆಗೆ ಅವರು 41 ಎಸೆತಳೆನ್ನುದುರಿಸಿ 4 ಬೌಂಡರಿ ಹಾಗೂ 4 ಸಿಕ್ಸರ್ಗಳ ಸಹಿತ 66 ರನ್ ಸಿಡಿಸಿದ್ದರು.
ನಂತರ ನಾಯಕನ ಜೊತೆಗೂಡಿದ ಪಂತ್ 3ನೇ ವಿಕೆಟ್ ಜೊತೆಯಾಟದಲ್ಲಿ ಮತ್ತೆ 70 ರನ್ ಸೇರಿಸಿದರು. ಇದರಲ್ಲಿ ಪಂತ್ ಪಾಲು 38 ರನ್. ಅವರು 17 ಎಸೆತಗಳಲ್ಲಿ 5 ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿದ್ದರು.
ನಾಯಕ ಶ್ರೇಯಸ್ ಅಯ್ಯರ್ ಅಜೇಯ 88 ರನ್ಗಳಿಸಿದರು. ಅವರು ಕೇವಲ 38 ಎಸೆತಗಳಲ್ಲಿ 6 ಸಿಕ್ಸರ್ ಹಾಗೂ 7 ಬೌಂಡರಿ ಸಿಡಿಸಿದರು. ಹೆಟ್ಮೈರ್ ಕೂಡ ಒಂದು ಸಿಕ್ಸರ್ ಸಿಡಿಸಿ 7 ರನ್ಗಳಿಸಿ ನಾಟೌಟ್ ಆಗಿ ಉಳಿದರು.
ಕೆಕೆಆರ್ ಪರ ರಸೆಲ್ ಹೊರೆತುಪಡಿಸಿ ಯಾವೊಬ್ಬ ಬೌಲರ್ ರನ್ ಕಂಟ್ರೋಲ್ ಮಾಡುವಲ್ಲಿ ವಿಫಲರಾದರು. ರಸೆಲ್ 4 ಓವರ್ಗಳಲ್ಲಿ 29 ರನ್ ನೀಡಿ 2 ವಿಕೆಟ್ ಪಡೆದರು. ಉಳಿದಂಯೆ ನಾಗರಕೋಟಿ 3 ಓವರ್ಗಳಿಗೆ 35 ರನ್ ನೀಡಿ 1ವಿಕೆಟ್ ಪಡೆದರೆ, ಚಕ್ರವರ್ತಿ 4 ಓವರ್ಗಳಲ್ಲಿ 49 ರನ್ ನೀಡಿ ಒಂದು ವಿಕೆಟ್ ಪಡೆದರು. ನರೈನ್ 2 ಓವರ್ ಬೌಲಿಂಗ್ ಮಾಡಿ 26 ರನ್, ಮಾವಿ 3 ಓವರ್ಗಳಲ್ಲಿ 40 ರನ್, ಕಮ್ಮಿನ್ಸ್ 4 ಓವರ್ಗಳಲ್ಲಿ 49 ರನ್ ಬಿಟ್ಟುಕೊಟ್ಟು ದುಬಾರಿಯಾದರು.