ಕರ್ನಾಟಕ

karnataka

ETV Bharat / sports

ಅಶ್ವಿನ್​ಗೆ ಮಂಕಡ್​ ಮಾಡುವುದು ಬೇಡ ಎಂದ ಪಾಂಟಿಂಗ್​ಗೆ ಆಸೀಸ್​ ಮಾಜಿ ಕ್ರಿಕೆಟಿಗನಿಂದಲೇ ಟಾಂಗ್​ - ashwin mankad

ರಿಕಿ ಪಾಂಟಿಂಗ್​​ ನಾಯಕತ್ವದಲ್ಲಿ ಆಡಿರುವ ಎಡಗೈ ಸ್ಪಿನ್ನರ್​ ಬ್ರಾಡ್​ ಹಾಗ್​ ಮಂಕಡ್​ ವಿಚಾರದಲ್ಲಿ ಭಾರತದ ಬೌಲರ್​ ಅಶ್ವಿನ್​ ಪರ ನಿಂತಿದ್ದಾರೆ.

ಅಶ್ವಿನ್​ ಮಂಕಡ್​ 2019
ಬ್ರಾಡ್​ ಹಾಗ್​

By

Published : Aug 20, 2020, 4:10 PM IST

Updated : Aug 20, 2020, 4:55 PM IST

ನವದೆಹಲಿ:ವಿವಾದಿತ ಮಂಕಡ್​ ರನ್​ಔಟ್​ ಮಾಡದಿರುವಂತೆ ಅಶ್ವಿನ್​ ಜೊತೆ ಚರ್ಚಿಸುತ್ತೇವೆ ಎಂದು ಡೆಲ್ಲಿ ಕ್ಯಾಪಿಟಲ್​ ಕೋಚ್​ ರಿಕಿ ಪಾಂಟಿಂಗ್​ ಬುಧವಾರ ಹೇಳಿದ್ದಾರೆ.

ಆದರೆ, ರಿಕಿ ಪಾಂಟಿಂಗ್​​ ನಾಯಕತ್ವದಲ್ಲಿ ಆಡಿರುವ ಎಡಗೈ ಸ್ಪಿನ್ನರ್​ ಬ್ರಾಡ್​ ಹಾಗ್​ ಮಂಕಡ್​ ವಿಚಾರದಲ್ಲಿ ಭಾರತದ ಬೌಲರ್​ ಅಶ್ವಿನ್​ ಪರ ನಿಂತಿದ್ದಾರೆ.

ಮಂಕಡ್​ ಮಾಡುವುದು ಕ್ರೀಡಾ ಸ್ಫೂರ್ತಿಗೆ ದಕ್ಕೆ ತರುವುದಾದರೆ, ಬೌಲರ್​ ಚೆಂಡನ್ನು ಎಸೆಯುವ ಮೊದಲೇ ನಾನ್​ ಸ್ಟ್ರೈಕರ್​ನಲ್ಲಿರುವ ಬ್ಯಾಟ್ಸ್​ಮನ್​ ಕ್ರೀಸ್​ ಬಿಟ್ಟು ಹೋಗಿ ಅನುಕೂಲತೆ ಪಡೆಯುವುದು ಕ್ರೀಡಾ ಸ್ಪೂರ್ತಿಗೆ ದಕ್ಕೆ ಮಾಡಿದಂತಾಗುವುದಿಲ್ಲವೆ? ಎಂದು ಹಾಗ್​ ತಮ್ಮ ಟ್ವಿಟರ್​ನಲ್ಲಿ ಬರೆದು ಕೊಂಡಿದ್ದಾರೆ.

ಬುಧವಾರ ಮಾಧ್ಯಮದೊಂದಿಗೆ ಮಾತನಾಡಿದ್ದ ಡೆಲ್ಲಿ ಕ್ಯಾಪಿಟಲ್​ ತಂಡದ ಮುಖ್ಯ ಕೋಚ್​ ರಿಕಿ ಪಾಂಟಿಂಗ್​ , ಮಂಕಡ್​ ಮಾಡುವುದು ಕ್ರಿಕೆಟ್​ ಭಾಗವಲ್ಲ, ನಾನು ಅಶ್ವಿನ್​ ಜೊತೆ ಈ ಸೀಸನ್​ನಲ್ಲಿ ಮಂಕಡ್​ ಮಾಡದಿರುವಂತೆ ಮಾತುಕತೆ ನಡೆಸುತ್ತೇವೆ ಎಂದು ಹೇಳಿದ್ದರು.

ಅಶ್ವಿನ್​ ಮಂಕಡ್​ 2019

ರಿಕಿ ಪಾಂಟಿಂಗ್​ ಈ ರೀತಿ ಹೇಳುತ್ತಿದ್ದಂತೆ ಭಾರತೀಯ ಅಭಿಮಾನಿಗಳು ಅಶ್ವಿನ್​ ಪರ ನಿಂತಿದ್ದು, ಕ್ರೀಡಾ ಸ್ಪೂರ್ತಿಯ ಬಗ್ಗೆ ರಿಕಿ ಪಾಂಟಿಂಗ್​ ಅಶ್ವಿನ್​ಗೆ ಪಾಠ ಮಾಡುವುದು ಹಾಸ್ಯಾಸ್ಪದ ಎಂದು ಟ್ವಿಟರ್​ನಲ್ಲಿ ಟ್ರೋಲ್​ ಮಾಡುತ್ತಿದ್ದಾರೆ. ಇದೀಗ ಸ್ವತಃ ಆಸ್ಟ್ರೇಲಿಯಾದ ಸ್ಪಿನ್​ ಲೆಜೆಂಡ್​ ಹಾಗ್​ ಕೂಡ ಅಶ್ವಿನ್​ ಪರ ನಿಂತಿದ್ದು, ಈ ಚರ್ಚೆ ಮುಂದೆ ಯಾವ ಮಟ್ಟಕ್ಕೆ ಹೋಗಬಹುದು ಎಂಬುದನ್ನು ಕಾದು ನೋಡಬೇಕಿದೆ.

Last Updated : Aug 20, 2020, 4:55 PM IST

ABOUT THE AUTHOR

...view details