ಅಬುಧಾಬಿ: ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಜಯ ಗಳಿಸಿರುವ ಮುಂಬೈ ಇಂಡಿಯನ್ಸ್, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಾಯಿಂಟ್ ಟೇಬಲ್‌ನಲ್ಲಿ ಅಗ್ರ ಸ್ಥಾನಕ್ಕೆ ಏರಿದೆ. ಇದರಿಂದ ಉಲ್ಲಾಸಗೊಂಡಿರುವ ನಾಯಕ ರೋಹಿತ್ ಶರ್ಮಾ ತಮ್ಮ ತಂಡಕ್ಕೆ ಇದು "ಸರಿಯಾದ ದಿನ" ಎಂದಿದ್ದಾರೆ.
ಈ ಪಂದ್ಯದಲ್ಲಿ ಕ್ವಿಂಟನ್ ಡಿ ಕಾಕ್ ಮತ್ತು ಸೂರ್ಯಕುಮಾರ್ ಯಾದವ್ ಅರ್ಧಶತಕ ಗಳಿಸಿದ್ದಾರೆ. ಡಿ ಕಾಕ್ 36 ಎಸೆತಗಳಲ್ಲಿ 3 ಸಿಕ್ಸರ್, 4 ಬೌಂಡರಿ ಸಹಿತ 53 ರನ್ ಗಳಿಸಿದರೆ, ಯಾದವ್ 32 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಸಹಿತ 53 ರನ್ ಬಾರಿಸುವ ಮೂಲಕ ತಂಡವನ್ನು ಜಯದತ್ತ ಕೊಂಡೊಯ್ದರು.
"ನಾವು ಈಗ ಆಡಿರುವ ಆಟ ನಮಗೆ ಸಾಕಷ್ಟು ಆತ್ಮವಿಶ್ವಾಸವನ್ನು ನೀಡಿದೆ. ನಾವು ಇದೇ ರೀತಿ ಮುಂದೆಯೂ ಆಡಬೇಕಾಗಿರುವುದು ಬಹಳ ಮುಖ್ಯವಾಗಿದೆ. ಈ ದಿನ ನಮಗೆ ಒಂದು ಸರಿಯಾದ ದಿನವಾಗಿದೆ. ನಾವು ಅಂಕ ಪಟ್ಟಿಯಲ್ಲಿ ಪ್ರಥಮ ಸ್ಥಾನಕ್ಕೇರಿರುವುದು ಸಂತೋಷ ತಂದಿದೆ" ಎಂದು ಪಂದ್ಯದ ನಂತರ ಶರ್ಮಾ ಹೇಳಿದ್ದಾರೆ.
"ನಾವು ಎಲ್ಲಾ ರೀತಿಯಲ್ಲೂ ಸರಿಯಾಗಿ ಆಡಿದ್ದೇವೆ. ಆದರೆ ಇನ್ನೂ ಕೆಲವು ವಿಷಯಗಳಲ್ಲಿ ಸುಧಾರಿಸಬೇಕಿದೆ. ನಾವು ಬೌಲಿಂಗ್ನಲ್ಲಿ ಉತ್ತಮವಾಗಿದ್ದೇವೆ. ಆದ್ರೆ ಬ್ಯಾಟಿಂಗ್ನಲ್ಲಿ ಸುಧಾರಿಸಬೇಕಿದೆ. ನಮಗೆ ಒಬ್ಬ ಸೆಟ್ ಬ್ಯಾಟ್ಸ್ಮನ್ ಅಗತ್ಯವಿದೆ. ಕೆಲವು ಸೆಟ್ ಬ್ಯಾಟ್ಸ್‌ಮನ್‌ಗಳು ಇಂದು ಹೊರಬಂದರು. ಆದರೆ ನಾನು ಅವರನ್ನು ಬೆಟ್ಟು ಮಾಡಿ ತೋರಿಸುವುದಿಲ್ಲ" ಎಂದು ಶರ್ಮಾ ಹೇಳಿದ್ದಾರೆ.
ಮುಂಬೈ ಇಂಡಿಯನ್ಸ್ ಏಳು ಪಂದ್ಯಗಳನ್ನು ಆಡಿದ್ದು, 10 ಅಂಕಗಳನ್ನು ಪಡೆದಿದೆ. ಅಕ್ಟೋಬರ್ 16ರಂದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಆಡಲಿದೆ.