ಕರ್ನಾಟಕ

karnataka

ETV Bharat / sports

IPL​​ನಲ್ಲಿ ಫಸ್ಟ್​​​ ಬ್ಯಾಟಿಂಗ್​ ನಡೆಸುವ ತಂಡಕ್ಕೆ ಗೆಲುವು: ಆದ್ರೂ ಟಾಸ್​ ಗೆದ್ದು ಫೀಲ್ಡಿಂಗ್​ ಆಯ್ದುಕೊಳ್ತಿರುವುದೇಕೆ!? - 2020 ಐಪಿಎಲ್​​ ನ್ಯೂಸ್​

ಐಪಿಎಲ್​​ನಲ್ಲಿ ಮೊದಲು ಬ್ಯಾಟಿಂಗ್​ ನಡೆಸುವ ತಂಡಗಳು ಹೆಚ್ಚಾಗಿ ಗೆಲುವು ಸಾಧಿಸುತ್ತಿವೆ. ಆದರೆ, ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಟಾಸ್​​ ಗೆದ್ದ ತಕ್ಷಣವೇ ಕ್ಯಾಪ್ಟನ್​ಗಳು ಕ್ಷೇತ್ರ ರಕ್ಷಣೆ ನಿರ್ಧಾರ ಕೈಗೊಳ್ಳುತ್ತಿದ್ದಾರೆ.

IPL 2020
IPL 2020

By

Published : Oct 2, 2020, 5:49 PM IST

ಅಬುಧಾಬಿ:13ನೇ ಆವೃತ್ತಿ ಇಂಡಿಯನ್​ ಪ್ರೀಮಿಯರ್​ ಲೀಗ್​ ಆರಂಭಗೊಂಡು ಎರಡು ವಾರ ಮುಕ್ತಾಯಗೊಳ್ಳಲು ಬಂತು. ಈಗಾಗಲೇ ಎಲ್ಲ ತಂಡಗಳು 3-4 ಪಂದ್ಯಗಳನ್ನಾಡಿವೆ. ವಿಶೇಷ ಎಂದರೆ ಈ ಸಲದ ಟೂರ್ನಿಯಲ್ಲಿ ಟಾಸ್​ ಗೆಲ್ಲುವ ತಂಡ ಫೀಲ್ಡಿಂಗ್​ ಆಯ್ದುಕೊಳ್ಳುತ್ತಿರುವುದು ಮುಖ್ಯವಾಗಿ ಕಂಡು ಬರುತ್ತಿದೆ.

ಕನ್ನಡಿಗ ಮಯಾಂಕ್​​ ಬಳಿ ಆರೆಂಜ್​​​, ಅತಿ ಹೆಚ್ಚು ವಿಕೆಟ್​ ಕಿತ್ತ ವೇಗಿ ಶಮಿ ಬಳಿ ಪರ್ಪಲ್ ಕ್ಯಾಪ್​​​​!

ಇಲ್ಲಿಯವರೆಗೆ ನಡೆದಿರುವ 12 ಪಂದ್ಯಗಳ ಪೈಕಿ 9 ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್​ ನಡೆಸಿರುವ ತಂಡ ಗೆಲುವು ಸಾಧಿಸಿವೆ. ಆದರೂ ಕ್ಯಾಪ್ಟನ್​ಗಳು ಟಾಸ್​​ ಗೆದ್ದು ಕ್ಷೇತ್ರರಕ್ಷಣೆ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಇದಕ್ಕೆ ವಿಶೇಷವಾದ ಕಾರಣವಿದೆ.

ಯಜುವೇಂದ್ರ ಚಹಾಲ್​​

ಆರಂಭದಲ್ಲಿ ಬೌಲಿಂಗ್​ ಮಾಡಲು ಸುಲಭವಾಗಿರುತ್ತಿದ್ದು, ದ್ವಿತೀಯಾರ್ಧದಲ್ಲಿ ಇಬ್ಬನಿ ಬರುವ ಕಾರಣ 12ರಿಂದ 20 ಓವರ್​ ಬೌಲಿಂಗ್ ಮಾಡುವುದು ಕಷ್ಟವಾಗುತ್ತಿದೆ. ಹೀಗಾಗಿ ಎಲ್ಲ ತಂಡದ ಕ್ಯಾಪ್ಟನ್​​ಗಳು ಟಾಸ್​ ಗೆದ್ದ ತಕ್ಷಣವೇ ಕ್ಷೇತ್ರ ರಕ್ಷಣೆ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇದೇ ವಿಚಾರವಾಗಿ ಆರ್​​ಸಿಬಿ ಬೌಲರ್​​ ಚಹಾಲ್ ಮಾತನಾಡಿದ್ದು, ದ್ವಿತೀಯಾರ್ಧದಲ್ಲಿ ಬೌಲಿಂಗ್​ ಕಷ್ಟವಾಗಿದೆ. ಆದರೆ, ಇದಕ್ಕೆ ಹೊಂದಿಕೊಳ್ಳಲು ನಾವು ನಿಧಾನವಾಗಿ ಕಲಿಯುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಆರ್​ಸಿಬಿ ಮುಂದಿನ ಪಂದ್ಯ ಶನಿವಾರ ಅಬುಧಾನಿಯ ಶೇಖ್​ ಜಾಯೆದ್​ ಕ್ರೀಡಾಂಗಣದಲ್ಲಿ ರಾಜಸ್ಥಾನ ರಾಯಲ್ಸ್​ ವಿರುದ್ಧ ನಡೆಯಲಿದೆ. ಈ ಋತುವಿನಲ್ಲಿ ದುಬೈನಿಂದ ಹೊರಗೆ ನಡೆಯುವ ಮೊದಲ ಪಂದ್ಯವಾಗಿದೆ.

ABOUT THE AUTHOR

...view details