ಕರ್ನಾಟಕ

karnataka

ETV Bharat / sports

2020ರ ಐಪಿಎಲ್​ನಲ್ಲಿ ಚಾಂಪಿಯನ್ಸ್​ ಮುಂಬೈ ತಂಡದ ಪಯಣ ಹೀಗಿತ್ತು..

ಮುಂಬೈ ಉದ್ಘಾಟನಾ ಪಂದ್ಯದಲ್ಲೇ ಕಳೆದ ವರ್ಷದ ರನ್ನರ್​ ಅಪ್​ ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಸೆಣೆಸಾಡಿ 5 ವಿಕೆಟ್​ಗಳ ಸೋಲು ಕಂಡಿತ್ತು. ನಂತರ ತಿರುಗಿ ಬಿದ್ದು ಕೆಕೆಆರ್ ವಿರುದ್ಧ 49ರನ್​ಗಳ ಅಧಿಕಾರಯುತ ಗೆಲುವು ಸಾಧಿಸಿದ್ರೆ, 3ನೇ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ಸೂಪರ್​ ಓವರ್​ ಪಂದ್ಯದಲ್ಲಿ ಸೋಲನುಭವಿಸಿತ್ತು..

ಮುಂಬೈ ಇಂಡಿಯನ್ಸ್​
ಮುಂಬೈ ಇಂಡಿಯನ್ಸ್​

By

Published : Nov 10, 2020, 4:47 PM IST

ಹೈದರಾಬಾದ್ ​:ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ತಮ್ಮ ಖ್ಯಾತಿಗೆ ತಕ್ಕಂತೆ 13ನೇ ಪಂದ್ಯದಲ್ಲಿ ಆಡಿದ್ದು, ಎಂದಿನಂತೆ ಯಾವ ತಂಡಕ್ಕೂ ಸರಿಸಾಟಿಯಿಲ್ಲದ ಪ್ರದರ್ಶನದ ಮೂಲಕ ಪ್ರಾಬಲ್ಯ ಸಾಧಿಸಿ ಅಗ್ರಸ್ಥಾನ ಪಡೆದಿದ್ದಲ್ಲದೆ, 6ನೇ ಬಾರಿ ಫೈನಲ್​ ಪ್ರವೇಶಿಸಿದೆ. ಈಗಾಗಲೇ 4 ಪ್ರಶಸ್ತಿಗಳನ್ನ ಗೆಲ್ಲುವ ಮೂಲಕ ಹೆಚ್ಚು ಟ್ರೋಫಿ ಗೆದ್ದಿರುವ ತಂಡ ಎಂದು ಖ್ಯಾತಿ ಹೊಂದಿರುವ ಮುಂಬೈ ದಾಖಲೆಯ 5ನೇ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದೆ.

ಅತ್ತ ಮತ್ತೊಂದು ಕಡೆ ನೋಡಿದ್ರೆ, ಮುಂಬೈನವರೇ ಆದ ಯುವ ಆಟಗಾರ ಶ್ರೇಯಸ್ ಅಯ್ಯರ್​ ಡೆಲ್ಲಿ ತಂಡ ಮುನ್ನಡೆಸಲಿದ್ದಾರೆ. ಮಂಗಳವಾರ ಈ ಎರಡು ತಂಡಗಳು ಫೈನಲ್​ನಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗುತ್ತಿವೆ. ಇದರಲ್ಲಿ ಮುಂಬೈ ಇಂಡಿಯನ್ಸ್​ ಗೆಲ್ಲುವ ನೆಚ್ಚಿನ ತಂಡ ಎಂದು ಹೇಳಿದ್ರೆ ಅತಿಶಯೋಕ್ತಿಯಲ್ಲ. ಎದುರಾಳಿ ತಂಡವನ್ನು ಒತ್ತಡಕ್ಕೀಡು ಮಾಡಿ 5ನೇ ಬಾರಿ ಪ್ರಶಸ್ತಿ ಎತ್ತಿ ಹಿಡಿಯಲು ಮುಂಬೈ ಕಾತುರದಿಂದ ಕಾಯುತ್ತಿದೆ.

ಮುಂಬೈ ಇಂಡಿಯನ್ಸ್​

13ನೇ ಆವೃತ್ತಿಯಲ್ಲಿ ಮುಂಬೈ ಪಯಣದ ಕಡೆ ಒಮ್ಮೆ ಕಣ್ಣಾಯಿಸಿದ್ರೆ, ಹಿಂದಿನ ಲೀಗ್​ಗಳಂತೆ ಮೊದಲ ಒಂದೆರಡು ಪಂದ್ಯಗಳಲ್ಲಿ ಸೋಲು ಕಂಡಿದೆ. ಆದರೆ, ಮಧ್ಯಂತರ ಮತ್ತು ಕೊನೆಯ ನಾಲ್ಕು ಪಂದ್ಯಗಳಲ್ಲಿ ಯಾವುದೇ ಒತ್ತಡವಿಲ್ಲದೆ ಪ್ರಾಬಲ್ಯ ಮೆರೆದು ಗೆಲುವು ಸಾಧಿಸಿದೆ. ಮುಂಬೈ ಗುಂಪು ಹಂತದಲ್ಲಿ 14 ಪಂದ್ಯಗಳಲ್ಲಿ 5 ಸೋಲು 9 ಗೆಲುವಿನೊಂದಿಗೆ 18 ಅಂಕ ಪಡೆದು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿತ್ತು. ಸೋತ 5 ಪಂದ್ಯಗಳಲ್ಲಿ 2 ಸೂಪರ್​ ಓವರ್​ ಸೋಲು ಎನ್ನುವುದೇ ಗಮನಾರ್ಹ.

ಐಪಿಎಲ್​ನಲ್ಲಿ ಆರಂಭ :ಮುಂಬೈ ಉದ್ಘಾಟನಾ ಪಂದ್ಯದಲ್ಲೇ ಕಳೆದ ವರ್ಷದ ರನ್ನರ್​ ಅಪ್​ ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಸೆಣೆಸಾಡಿ 5 ವಿಕೆಟ್​ಗಳ ಸೋಲು ಕಂಡಿತ್ತು. ನಂತರ ತಿರುಗಿ ಬಿದ್ದು ಕೆಕೆಆರ್ ವಿರುದ್ಧ 49ರನ್​ಗಳ ಅಧಿಕಾರಯುತ ಗೆಲುವು ಸಾಧಿಸಿದ್ರೆ, 3ನೇ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ಸೂಪರ್​ ಓವರ್​ ಪಂದ್ಯದಲ್ಲಿ ಸೋಲನುಭವಿಸಿತ್ತು.

ಮತ್ತೆ ಕಿಂಗ್ಸ್​ ಇಲೆವೆನ್​ ಪಂಜಾಬ್ ವಿರುದ್ಧ 48 ರನ್​ಗಳ ಬೃಹತ್ ಜಯ ಸಾಧಿಸಿದ ಮುಂಬೈ, ಅಲ್ಲಿಂದ ಸತತ ಗೆಲುವುಗಳ ಜೊತೆಗೆ ಅಗ್ರ 2 ಸ್ಥಾನದಲ್ಲೇ ಟೂರ್ನಿಯುದ್ದಕ್ಕೂ ಪಯಣಿಸಿತು. ಪಂಜಾಬ್ ವಿರುದ್ಧ ಮತ್ತೊಂದು ಸೂಪರ್ ಓವರ್​ನಲ್ಲಿ ಸೋಲು ಕಂಡ್ರೆ, ರಾಜಸ್ಥಾನ್​ ವಿರುದ್ಧ ಆಘಾತಕಾರಿ ಸೋಲು ಮಾತ್ರ ಮುಂಬೈ ತಂಡದ ಹೀನಾಯ ಪ್ರದರ್ಶನಕ್ಕೆ ಸಾಕ್ಷಿಯಾಗಿತ್ತು. ಅದನ್ನು ಬಿಟ್ಟರೆ ಔಪಚಾರಿಕವಾಗಿದ್ದ ಕೊನೆಯ ಲೀಗ್​ನಲ್ಲಿ ಬುಮ್ರಾ-ಬೌಲ್ಟ್​ ಅನುಪಸ್ಥಿತಿಯಲ್ಲಿ ಕಣಕ್ಕಿಳಿದು ಹೈದರಾಬಾದ್​ ವಿರುದ್ಧ 10 ವಿಕೆಟ್​ ಸೋಲು ಕಂಡಿತ್ತು. ಉಳಿದೆಲ್ಲಾ ಪಂದ್ಯಗಳಲ್ಲಿ ಅಧಿಕಾರಯುತ ಜಯ ಸಾಧಿಸಿತ್ತು.

ಪ್ಲೇ ಆಫ್​ :ಅಗ್ರಸ್ಥಾನದಲ್ಲಿ ಗುಂಪು ಹಂತ ಮುಗಿಸಿದ ರೋಹಿತ್ ಬಳಗ ನಂತರ ಕ್ವಾಲಿಫೈಯರ್​ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ 58 ರನ್​ಗಳ ಸುಲಭ ಜಯ ಸಾಧಿಸಿ ಫೈನಲ್ ಪ್ರವೇಶಿಸಿತು. ಬುಮ್ರಾ 4 ಮತ್ತು ಬೌಲ್ಟ್​ 2 ವಿಕೆಟ್ ಪಡೆದು ಮಿಂಚಿದ್ರೆ, ಇಶಾನ್​ ಕಿಶನ್​ 30 ಎಸೆತಗಳಲ್ಲಿ 55 ರನ್​ ಸಿಡಿಸಿ ಗೆಲುವಿನ ರೂವಾರಿಗಳಾಗಿದ್ದರು.

13ನೇ ಆವೃತ್ತಿಯಲ್ಲಿ ಮುಂಬೈ ತಂಡದ ಪಯಣ

  • ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ 5 ವಿಕೆಟ್​ಗಳ ಸೋಲು
  • ಕೆಕೆಆರ್​ ವಿರುದ್ಧ 49 ರನ್​ಗಳ ಜಯ
  • ಆರ್​ಸಿಬಿ ವಿರುದ್ಧ ಸೂಪರ್​ ಓವರ್​ನಲ್ಲಿ ಸೋಲು
  • ಕಿಂಗ್ಸ್​ಇಲೆವೆನ್ ಪಂಜಾಬ್​ ವಿರುದ್ಧ 48 ರನ್​ಗಳ ಜಯ
  • ಹೈದರಾಬಾದ್​ ವಿರುದ್ಧ 34 ರನ್​ಗಳ ಜಯ
  • ರಾಜಸ್ಥಾನ್ ರಾಯಲ್ಸ್ ವಿರುದ್ಧ 57 ರನ್​ಗಳ ಜಯ
  • ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 5 ವಿಕೆಟ್​ ಜಯ
  • ಕೆಕೆಆರ್​ ವಿರುದ್ಧ 8 ವಿಕೆಟ್​ ಜಯ
  • ಕಿಂಗ್ಸ್​ ಇಲೆವೆನ್​ ಪಂಜಾಬ್ ವಿರುದ್ಧ ಸೂಪರ್​ ಓವರ್​ನಲ್ಲಿ ಸೋಲು
  • ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ 10 ವಿಕೆಟ್​ಗಳ ಗೆಲುವು
  • ರಾಜಸ್ಥಾನ್​ ರಾಯಲ್ಸ್​ ವಿರುದ್ಧ 8 ವಿಕೆಟ್​ಗಳ ಸೋಲು
  • ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ 9 ವಿಕೆಟ್​ಗಳ ಜಯ
  • ಹೈದರಾಬಾದ್​ ವಿರುದ್ಧ 10 ವಿಕೆಟ್​ಗಳ ಸೋಲು
  • ಪ್ಲೇ ಆಫ್​
  • ಡೆಲ್ಲಿ ವಿರುದ್ಧ 58 ರನ್​ಗಳ ಜಯ

ABOUT THE AUTHOR

...view details