ಅಬುಧಾಬಿ: ಸೂರ್ಯಕುಮಾರ್ ಯಾದವ್(79) ಹಾಗೂ ಜಪ್ರೀತ್ ಬುಮ್ರಾ(4 ವಿಕೆಟ್) ಅವರ ಅದ್ಭುತ ಪ್ರದರ್ಶನದ ನೆರವಿನಿಂದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ 57 ರನ್ಗಳ ಅಂತರದಿಂದ ರಾಜಸ್ಥಾನ್ ತಂಡವನ್ನು ಮಣಿಸಿ ಅಗ್ರಸ್ಥಾನಕ್ಕೇರಿದೆ.
ಅಬುಧಾಬಿಯ ಶೇಖ್ ಜಾಯೇದ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ಮುಂಬೈ ಇಂಡಿಯನ್ಸ್ ಸೂರ್ಯ ಕುಮಾರ್ ಯಾದವ್ 79(47 ಎಸೆತ), ಹಾರ್ದಿಕ್ ಪಾಂಡ್ಯ 30(19), ರೋಹಿತ್ 35(23) ರನ್ಗಳ ನೆರವಿನಿಂದ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 193 ರನ್ಗಳಿಸಿತ್ತು.
294 ರನ್ಗಳ ಗುರಿ ಪಡೆದಿದ್ದ ರಾಜಸ್ಥಾನ್ ರಾಯಲ್ಸ್ ಜಸ್ಪ್ರೀತ್ ಬುಮ್ರಾ ಬೌಲಿಂಗ್ ದಾಳಿಗೆ ತತ್ತರಿಸಿ 18.1 ಓವರ್ಗಳಲ್ಲಿ 136 ರನ್ಗಳಿಗೆ ಆಲೌಟ್ ಆಯಿತು.
ರಾಜಸ್ಥಾನ್ ರಾಯಲ್ಸ್ ಪರ ಜೋಸ್ ಬಟ್ಲರ್ 44 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 4 ಬೌಂಡರಿ ಸಹಿತ 70 ರನ್ಗಳಿಸಿ ಗೆಲುವಿಗಾಗಿ ಏಕಾಂಗಿ ಹೋರಾಟ ನಡೆಸಿ ವಿಫಲರಾದರು. ಇವರನ್ನು ಬಿಟ್ಟರೆ 11 ಎಸೆತಗಳಲ್ಲಿ 24 ರನ್ಗಳಿಸಿದ ಆರ್ಚರ್ ತಂಡದ ಗರಿಷ್ಠ ಸ್ಕೋರರ್ ಆದರು.