ಕರ್ನಾಟಕ

karnataka

ETV Bharat / sports

ಎಂಎಸ್ ಧೋನಿ 'ಜೀನಿಯಸ್​'.. ಸಿಎಸ್​ಕೆ 'ಕೂಲ್‌' ನಾಯಕತ್ವಕ್ಕೆ ಕರ್ರನ್​ ಫಿದಾ!!

ನಾವು 18 ಓವರ್‌ ಟಾರ್ಗೇಟ್​ ಮಾಡಿದ್ದೆವು. ನಾನು ಆ ಓವರ್​ನಲ್ಲಿ ಸಿಕ್ಸರ್​ ಅಥವಾ ಔಟ್​ ಆಗಬೇಕೆಂದು ಮಾನಸಿಕವಾಗಿ ಸಿದ್ಧನಾಗಿದ್ದೆ. ಕೆಲವೊಮ್ಮೆ ಇಂತಹ ಆಲೋಚನೆ ಕೆಲಸ ಮಾಡುತ್ತದೆ. ಕೆಲ ಸಾರಿ ಮಾಡುವುದಿಲ್ಲ..

ಸ್ಯಾಮ್​ ಕರ್ರನ್​-  ಎಂಎಸ್​ ಧೋನಿ
ಸ್ಯಾಮ್​ ಕರ್ರನ್​- ಎಂಎಸ್​ ಧೋನಿ

By

Published : Sep 20, 2020, 7:03 PM IST

ಅಬುಧಾಬಿ :ಮುಂಬೈ ಇಂಡಿಯನ್ಸ್​ ವಿರುದ್ಧದ ಮೊದಲ ಪಂದ್ಯದಲ್ಲಿ ಸಿಎಸ್​ಕೆ ನಾಯಕ ಮಹೇಂದ್ರ ಸಿಂಗ್​ ಧೋನಿ ನಾಯತ್ವವನ್ನು ಮೆಚ್ಚಿರುವ ಇಂಗ್ಲೆಂಡ್​ ಆಲ್​ರೌಂಡರ್ ಸ್ಯಾಮ್​ ಕರ್ರನ್,​​ ತಮ್ಮ ನಾಯಕನನ್ನು ‘ಜೀನಿಯಸ್​‘ ಎಂದು ಹೇಳಿದ್ದಾರೆ.

ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಸ್ಯಾಮ್​ ಕರ್ರನ್​ ಬೌಲಿಂಗ್​ನಲ್ಲಿ ಡಿಕಾಕ್ ವಿಕೆಟ್​ ಪಡೆದಿದ್ದರು. ಜೊತೆಗೆ ಬ್ಯಾಟಿಂಗ್​ನಲ್ಲೂ 6 ಎಸೆತಗಳಲ್ಲಿ 18 ರನ್​ ಸಿಡಿಸಿದ್ದರು. ಮುಂಬೈ ಇಂಡಿಯನ್ಸ್​ ವಿರುದ್ಧ 5 ವಿಕೆಟ್​ಗಳ ಗೆಲುವು ಸಾಧಿಸಲು ಅವರು ಪ್ರಮುಖ ಪಾತ್ರವಹಿಸಿದ್ದರು. 22 ವರ್ಷದ ಆಲ್​ರೌಂಡರ್​ರನ್ನು ಧೋನಿ, ಸ್ವತಃ ತಾವೂ ಮತ್ತು ರವೀಂದ್ರ ಜಡೇಜಾ ಇದ್ದರೂ ಮೇಲಿನ ಕ್ರಮಾಂಕದಲ್ಲಿ ಬಡ್ತಿ ನೀಡಿದ್ದಕ್ಕೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

17 ಎಸೆತಗಳಲ್ಲಿ 29 ರನ್​ ಬೇಕಿದ್ದ ವೇಳೆ ಧೋನಿ ಸ್ಯಾಮ್​ ಕರ್ರನ್​ರನ್ನು 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ​ ಕಳುಹಿಸುವ ಮೂಲಕ ಎಲ್ಲರನ್ನು ಆಶ್ಚರ್ಯಕ್ಕೀಡು ಮಾಡಿದ್ದರು. "ಪ್ರಾಮಾಣಿಕವಾಗಿ ಹೇಳುತ್ತೇನೆ, ನಾನು ತಂಡದಲ್ಲಿ ಅವಕಾಶ ಸಿಕ್ಕಿದ್ದಕ್ಕೆ ಆಶ್ಚರ್ಯಕ್ಕೀಡಾಗಿದ್ದೆ. ಧೋನಿ ಜೀನಿಯಸ್, ಅವರ ಆಲೋಚನೆಗಳು (ಅವರಿಗಿಂತ ಮೊದಲು ಬ್ಯಾಟಿಂಗ್​ ಕಳುಹಿಸಿದ್ದಕ್ಕೆ) ವಿಶೇಷವಾಗಿರುತ್ತದೆ ಎಂದು ಕರ್ರನ್​ ಹೇಳಿದ್ದಾರೆ.

ನಾವು 18 ಓವರ್‌ ಟಾರ್ಗೇಟ್​ ಮಾಡಿದ್ದೆವು. ನಾನು ಆ ಓವರ್​ನಲ್ಲಿ ಸಿಕ್ಸರ್​ ಅಥವಾ ಔಟ್​ ಆಗಬೇಕೆಂದು ಮಾನಸಿಕವಾಗಿ ಸಿದ್ಧನಾಗಿದ್ದೆ. ಕೆಲವೊಮ್ಮೆ ಇಂತಹ ಆಲೋಚನೆ ಕೆಲಸ ಮಾಡುತ್ತದೆ. ಕೆಲ ಸಾರಿ ಮಾಡುವುದಿಲ್ಲ ಎಂದು ಅವರು ಹೇಳಿದ್ದಾರೆ. ಶನಿವಾರ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ನೀಡಿದ 163 ರನ್​ಗಳ ಗುರಿಯನ್ನು ಸಿಎಸ್​ಕೆ 5 ವಿಕೆಟ್ ಕಳೆದುಕೊಂಡು ವಿಜಯ ಸಾಧಿಸಿತು. ರಾಯುಡು 71, ಡುಪ್ಲೆಸಿಸ್​ 58 ರನ್​ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ABOUT THE AUTHOR

...view details