ಕರ್ನಾಟಕ

karnataka

ETV Bharat / sports

200ನೇ ಐಪಿಎಲ್​ ಆಡಿ ಧೋನಿ ದಾಖಲೆ... ತಾವು ತೊಟ್ಟ ಜರ್ಸಿ ಇವರಿಗೆ ನೀಡಿದ್ರು ಗಿಫ್ಟ್​! - ಬಟ್ಲರ್​ಗೆ ಜರ್ಸಿ ಗಿಫ್ಟ್​ ನೀಡಿದ ಧೋನಿ

ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಮಹೇಂದ್ರ ಸಿಂಗ್​​ ಧೋನಿ 200ನೇ ಪಂದ್ಯ ಆಡುವ ಮೂಲಕ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಇದರ ಮಧ್ಯೆ ತಾವು ತೊಟ್ಟಿದ್ದ ಜರ್ಸಿ ತಮ್ಮ ಅಭಿಮಾನಿಗೆ ಗಿಫ್ಟ್​ ಮಾಡಿದ್ದಾರೆ.

MS Dhoni gifts his jersey
MS Dhoni gifts his jersey

By

Published : Oct 20, 2020, 3:24 PM IST

ದುಬೈ:ಇಂಡಿಯನ್​ ಪ್ರೀಮಿಯರ್​ ಲೀಗ್​ ಇತಿಹಾಸದಲ್ಲಿ ಮಹೇಂದ್ರ ಸಿಂಗ್​ ಧೋನಿ 200ನೇ ಮ್ಯಾಚ್​​ ಆಡಿ ವಿಶೇಷ ದಾಖಲೆ ನಿರ್ಮಾಣ ಮಾಡಿದ್ದಾರೆ. ರಾಜಸ್ಥಾನ ರಾಯಲ್ಸ್​ ಪರ ಕಣಕ್ಕಿಳಿದ ಧೋನಿ ಈ ವಿಶೇಷ ರೆಕಾರ್ಡ್​ ತಮ್ಮದಾಗಿಸಿಕೊಂಡಿದ್ದಾರೆ.

ಐಪಿಎಲ್​ ಇತಿಹಾಸದಲ್ಲೇ ಅತಿ ಹೆಚ್ಚು ಪಂದ್ಯಗಳನ್ನಾಡಿರುವ ಕ್ರಿಕೆಟಿಗ ಎಂಬ ಶ್ರೇಯಕ್ಕೆ ಪಾತ್ರರಾಗಿರುವ ಧೋನಿ ಸಿಎಸ್​ಕೆ ಪರ 169 ಪಂದ್ಯ ಹಾಗೂ ಪುಣೆ ತಂಡದ ಪರ 30 ಪಂದ್ಯಗಳನ್ನಾಡಿದ್ದಾರೆ.

ಸಿಎಸ್​ಕೆ ವಿರುದ್ಧದ ಪಂದ್ಯದಲ್ಲಿ ಅಬ್ಬರ

ಅಭಿಮಾನಿಗೆ ಜರ್ಸಿ ಗಿಫ್ಟ್​ ನೀಡಿದ ಧೋನಿ!

ನಿನ್ನೆಯ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್​ ತಂಡದ ಬ್ಯಾಟ್ಸಮನ್​​ ಜೋಸ್​ ಬಟ್ಲರ್​​​ 48 ಎಸೆತಗಳಲ್ಲಿ 70 ರನ್​ಗಳಿಸಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಿದರು. ಇದರ ಜತೆಗೆ ಮಹೇಂದ್ರ ಸಿಂಗ್​ ಧೋನಿ ತಾವು ಹಾಕಿಕೊಂಡಿದ್ದ 200ನೇ ಪಂದ್ಯದ ಐಪಿಎಲ್​​ ಜರ್ಸಿ ಬಟ್ಲರ್​ಗೆ ನೀಡಿದ್ದರಿಂದ ಅವರ ದಿನ ಮತ್ತಷ್ಟು ವಿಶೇಷವಾಗಿತ್ತು.

ಮಹೇಂದ್ರ ಸಿಂಗ್​ ಧೋನಿ ಅವರ ಅಪ್ಪಟ ಅಭಿಮಾನಿಯಾಗಿರುವ ಜೋಸ್ ಬಟ್ಲರ್​​​, ನಿನ್ನೆಯ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಕೂಡ ಪಡೆದುಕೊಂಡರು. ಇದರ ಜತೆಗೆ ಅವರಿಗೆ ಧೋನಿ ತಮ್ಮ 200ನೇ ಐಪಿಎಲ್​ ಪಂದ್ಯದ ಜರ್ಸಿ ನೀಡಿದರು.

ರಾಜಸ್ಥಾನ ಬ್ಯಾಟ್ಸಮನ್​ ಬಟ್ಲರ್​​​

ಇನ್ನು 200ನೇ ಪಂದ್ಯದಲ್ಲಿ ಮಹೇಂದ್ರ ಸಿಂಗ್​ ಧೋನಿ ಹೇಳಿಕೊಳ್ಳುವಂತಹ ಸಾಧನೆ ಏನು ಮಾಡಲಿಲ್ಲ. ತಾವು ಎದುರಿಸಿದ 28 ಎಸೆತಗಳಲ್ಲಿ ಕೇವಲ 28ರನ್​ಗಳಿಕೆ ಮಾಡಿದರು.

ABOUT THE AUTHOR

...view details