ಕರ್ನಾಟಕ

karnataka

ETV Bharat / sports

ರೋಹಿತ್​​ - ರಾಹುಲ್​ ತಂಡದ ನಡುವೆ ಫೈಟ್​​: ಗೇಲ್​ ಅಬ್ಬರಕ್ಕೆ ಶರಣಾಗುವುದೇ ಮುಂಬೈ ಇಂಡಿಯನ್ಸ್​​!?

ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿಂದು ಮುಂಬೈ ಇಂಡಿಯನ್ಸ್​​ ಹಾಗೂ ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡ ಮುಖಾಮುಖಿಯಾಗುತ್ತಿದ್ದು, ಇಂದಿನ ಪಂದ್ಯದಲ್ಲಿ ಗೆದ್ದು ರೋಹಿತ್ ಪಡೆ ಮೊದಲನೇಯದಾಗಿ ಪ್ಲೇ-ಆಫ್​ಗೆ ಲಗ್ಗೆ ಇಡುವ ಕನಸು ಕಾಣುತ್ತಿದೆ.

Mumbai Indians
Mumbai Indians

By

Published : Oct 18, 2020, 1:08 PM IST

ದುಬೈ:ಇಂಡಿಯನ್​​ ಪ್ರೀಮಿಯರ್​ ಲೀಗ್​ನ ಇಂದಿನ ಎರಡನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ಹಾಗೂ ಪಂಜಾಬ್​ ತಂಡ ಮುಖಾಮುಖಿಯಾಗಲಿದ್ದು, ಫ್ಲೇ-ಹಂತಕ್ಕೆ ತಲುಪಬೇಕಾದರೆ ಕೆಎಲ್ ಪಡೆ ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸಬೇಕಾದ ಅನಿವಾರ್ಯತೆಯಲ್ಲಿದೆ.

ಪಾಯಿಂಟ್​​ ಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್​​ ಎರಡನೇ ಸ್ಥಾನದಲ್ಲಿದ್ದರೆ, ಪಂಜಾಬ್​ ಕೊನೆಯ ಸ್ಥಾನದಲ್ಲಿದೆ. ಬ್ಯಾಟಿಂಗ್​ ವಿಭಾಗದಲ್ಲಿ ಬಲಿಷ್ಠವಾಗಿರುವ ಪಂಜಾಬ್​ ತಂಡ ಕೆಲವೊಂದು ಪಂದ್ಯಗಳಲ್ಲಿ ತಾನು ಮಾಡಿರುವ ಸಣ್ಣ - ಪುಟ್ಟ ತಪ್ಪುಗಳಿಂದ ಪಂದ್ಯಗಳನ್ನ ಕೈಚೆಲ್ಲಿದೆ. ಜೊತೆಗೆ ಕೆಲಮೊಮ್ಮೆ ಅದೃಷ್ಟ ಕೂಡ ಕೈಕೊಟ್ಟಿರುವುದು ಇದಕ್ಕೆ ಸಾಕ್ಷಿಯಾಗಿದೆ.

ಈ ಹಿಂದಿನ ಆರ್​​ಸಿಬಿ ವಿರುದ್ಧದ ಪಂದ್ಯದಲ್ಲಿ ಪಂಜಾಬ್​ ಕೊನೆ ಓವರ್​​ನಲ್ಲಿ ಗೆಲುವು ಸಾಧಿಸಿದ್ದು, ಇಂದಿನ ಪಂದ್ಯದಲ್ಲೂ ಅದೇ ಉತ್ಸಾಹದೊಂದಿಗೆ ಕಣಕ್ಕಿಳಿಯಲಿದೆ. ಜತೆಗೆ ತಂಡಕ್ಕೆ ಗೇಲ್​ ಕಮ್​​ಬ್ಯಾಕ್​ ಮಾಡಿರುವುದು ಆನೆಬಲ ಬಂದಿದೆ. ಇನ್ನು ಮಯಾಂಕ್​ ಅಗರವಾಲ್​, ಕೆ.ಎಲ್​ ರಾಹುಲ್​ ಆರ್ಭಟಿಸುತ್ತಿದ್ದು, ಇಂದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ಸಾಧ್ಯತೆ ಇದೆ.

ಕಿಂಗ್ಸ್​ ಇಲೆವೆನ್​ ಪಂಜಾಬ್​​​

ಮುಂಬೈ ಇಂಡಿಯನ್ಸ್​ ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧದ ಮೊದಲ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ಅಭಿಯಾನ ಆರಂಭಿಸಿದರೂ, ನಂತರದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಸದ್ಯ ಅಂಕ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಹಿಂದಿನ ಪಂದ್ಯದಲ್ಲಿ ಕ್ವಿಂಟನ್ ಡಿಕಾಕ್​, ರೋಹಿತ್​ ಶರ್ಮಾ ಅಬ್ಬರಿಸಿದ್ದು, ಮಧ್ಯಮ ಕ್ರಮಾಂಕದಲ್ಲಿ ಹಾರ್ದಿಕ್​, ಕಿರನ್​ ತಂಡಕ್ಕೆ ರನ್​ ಮಳೆ ಹರಿಸಲಿದ್ದಾರೆ.

ಸಂಭವನೀಯ ತಂಡದ ಪ್ಲೇಯರ್ಸ್​​

ಮುಂಬೈ ಇಂಡಿಯನ್ಸ್​​:ಕ್ವಿಂಟನ್​​ ಡಿಕಾಕ್​(ವಿ.ಕೀ), ರೋಹಿತ್​ ಶರ್ಮಾ(ಕ್ಯಾಪ್ಟನ್​),ಸೂರ್ಯಕುಮಾರ್​ ಯಾದವ್​, ಇಶಾನ್​ ಕಿಶನ್​, ಹಾರ್ದಿಕ್​ ಪಾಂಡ್ಯ, ಕಿರಣ್​ ಪೋಲಾರ್ಡ್​, ಕೃನಾಲ್​ ಪಾಂಡ್ಯ, ನಾಥನ್​ ಕೌಲ್ಟರ್​ ನೇಲ್​, ಬೋಲ್ಟ್​, ಜಸ್​ಪ್ರೀತ್​ ಬುಮ್ರಾ

ಕಿಂಗ್ಸ್​ ಇಲೆವೆನ್​​ ಪಂಜಾಬ್​​: ಕೆ.ಎಲ್​ ರಾಹುಲ್​(ವಿ,ಕೀ/ಕ್ಯಾಪ್ಟನ್​), ಮಯಾಂಕ್​ ಅಗರವಾಲ್​, ಕ್ರಿಸ್​ ಗೇಲ್​, ನಿಕೊಲಸ್​ ಪೂರನ್​, ಮ್ಯಾಕ್ಸ್​ವೆಲ್​, ದೀಪಕ್​ ಹೂಡಾ, ಕೆ.ಗೌತಮ್​, ಕ್ರಿಸ್ ಜೋರ್ಡನ್​, ರವಿ ಬಿಸ್ನೋಯ್​, ಮೊಹಮ್ಮದ್​ ಶಮಿ, ಅರ್ಷದೀಪ್ ಸಿಂಗ್​​ ​​

ABOUT THE AUTHOR

...view details