ನವದೆಹಲಿ:ಮುಂದಿನ ತಿಂಗಳು ಮೊಟೆರಾದಲ್ಲಿ ಆಯೋಜನೆಗೊಂಡಿದ್ದ ತರಬೇತಿ ಶಿಬಿರ ನಡೆಯುವುದು ಅನುಮಾನ ಎನ್ನಲಾಗುತ್ತಿದೆ. ದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಕ್ರಿಕೆಟಿಗರ ಆರೋಗ್ಯ ಮತ್ತು ಸುರಕ್ಷತೆಯನ್ನು ಗಣನೆಗೆ ತೆಗೆದುಕೊಂಡು ಈ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಬಿಸಿಸಿಐನ ಕೇಂದ್ರಿಯ ಗುತ್ತಿಗೆಯಲ್ಲಿರುವ ಚೇತೇಶ್ವರ್ ಪೂಜಾರ ಮತ್ತು ಹನುಮ ವಿಹಾರಿಯನ್ನು ಹೊರತುಪಡಿಸಿ ಉಳಿದ ಎಲ್ಲಾ ಕ್ರಿಕೆಟಿಗರು ಐಪಿಎಲ್ನ ತಮ್ಮ ಪ್ರಾಂಚೈಸಿಗಳು ದುಬೈನಲ್ಲಿ ಏರ್ಪಡಿಸಿರುವ ತರಬೇತಿ ಶಿಬಿರಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಇನ್ನು ಹನಮ ವಿಹಾರಿ ಮತ್ತು ಪೂಜಾರ ಅವರನ್ನು ಐಪಿಎಲ್ನ ಯಾವುದೇ ತಂಡಗಳು ಖರೀದಿಸಿಲ್ಲ.
ಬಿಸಿಸಿಐ ಮೊಟೆರಾದಲ್ಲಿ ಕ್ಯಾಂಪ್ ನಡೆಸುವ ಸಾಧ್ಯತೆ ಶೂನ್ಯವಾಗಿದೆ. ಏಕೆಂದರೆ ಶಿಬಿರದ ಬಗ್ಗೆ ಬಿಸಿಸಿಐ ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಇದನ್ನು ಗಮನಿಸಿದರೆ ತರಬೇತಿ ಶಿಬಿರ ನಡೆಯುವ ಯಾವುದೇ ಲಕ್ಷಣವಿಲ್ಲ ಎಂದು ತಿಳಿದು ಬಂದಿದೆ.