ದುಬೈ:13ನೇ ಆವೃತ್ತಿಯಲ್ಲಿ ಉತ್ತಮ ಮೌಲ್ಯಯುತ ಕ್ರಿಕೆಟ್ ಆಡುವ ಮೂಲಕ ಈ ಋತುವನ್ನು ಸ್ಮರಣೀಯವಾಗಿಸಲು ಕಿಂಗ್ಸ್ ಇಲೆವೆನ್ ಪಂಜಾಬ್ ಬಯಸಿದೆ ಎಂದು ತಂಡದ ನಾಯಕ ಕೆ ಎಲ್ ರಾಹುಲ್ ತಿಳಿಸಿದ್ದಾರೆ.
ಕನ್ನಡಿಗ ಕೆಎಲ್ ರಾಹುಲ್ ನೇತೃತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ಭಾನವಾರ ಡೆಲ್ಲಿ ಕ್ಯಾಪಿಟಲ್ ವಿರುದ್ಧ 13ನೇ ಆವೃತ್ತಿಯಲ್ಲಿ ತನ್ನ ಅಭಿಯಾನ ಶುರು ಮಾಡಲಿದೆ.
"ನಮ್ಮ ತಂಡ ಅದ್ಭುತವಾಗಿದೆ. ನಾವು ಟೂರ್ನಿಯುದ್ದಕ್ಕೂ ಅತ್ಯುತ್ತಮವಾದುದನ್ನು ಪಡೆಯಬಹುದಾಗಿದೆ ಮತ್ತು ಈ ಬಾರಿ ಐಪಿಎಲ್ನಲ್ಲಿ ಮೌಲ್ಯಯುತ ಕ್ರಿಕೆಟ್ ಪ್ರದರ್ಶನ ನೀಡುವ ಮೂಲಕ ಈ ಋತುವನ್ನು ಸ್ಮರಣೀಯವಾಗಿಸಲು ಕಿಂಗ್ಸ್ ಇಲೆವೆನ್ ಪಂಜಾಬ್ ಬಯಿಸಿದೆ" ಎಂದು ರಾಹುಲ್ ಹೇಳಿದ್ದಾರೆ.
ನಮಗೆ ವಿಶ್ವಾಸವಿದೆ, ನಾವು ಪ್ರೇರೇಪಿಸಲ್ಪಟ್ಟಿದ್ದೇವೆ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ನ ಈ ಆವೃತ್ತಿಯ ಭಾಗವಾಗಲೂ ನಾವೂ ನಿಜಕ್ಕೂ ಉತ್ಸುಕರಾಗಿದ್ದೇವೆ ಎಂದು ಅವರು ಹೇಳಿದ್ದಾರೆ.
ಎರಡು ಆವೃತ್ತಿಗಳಲ್ಲಿ ಅದ್ಭುತ ಪ್ರದರ್ಶನದ ಮೂಲಕ ಅತಿ ಹೆಚ್ಚು ರನ್ಗಳಿಸಿದ ಮೇಲೆ ರಾಹುಲ್ರನ್ನು ಪ್ರಾಂಚೈಸಿ ನಾಯಕರನ್ನಾಗಿ ನೇಮಿಸಿದೆ. ಚೊಚ್ಚಲ ಬಾರಿ ನಾಯಕನಾಗಿ ಕಣಕ್ಕಿಳಿಯುತ್ತಿರುವ ರಾಹುಲ್ ಪ್ರೇಕ್ಷಕರಿಲ್ಲದೆ ಯುಎಇನಲ್ಲಿ ಕ್ರಿಕೆಟ್ ಆಡುವುದು ಸವಾಲಾಗಿದೆ. ಆದರೆ, ನಮ್ಮ ತಂಡದ ಇದಕ್ಕೆ ಸಿದ್ಧವಾಗಿದೆ ಎಂದಿದ್ದಾರೆ.
"ಈ ವರ್ಷದ ಅನುಭವ ವಿಭಿನ್ನವಾಗಿರಲಿದೆ. ಆದರೆ, ನಾವು ತಂಡವಾಗಿ ಈ ಸವಾಲನ್ನು ತೆಗೆದುಕೊಳ್ಳಬೇಕಿದೆ ಮತ್ತು ನಮ್ಮನ್ನು ಬೆಂಬಲಿಸುತ್ತಿರುವ ಅಭಿಮಾನಿಗಳಿಗೋಸ್ಕರ ನಾವು ಆಡಬೇಕಿದೆ" ಎಂದು ರಾಹುಲ್ ತಿಳಿಸಿದ್ದಾರೆ.
ಕಿಂಗ್ಸ್ ಇಲೆವೆನ್ 2014ರಲ್ಲಿ ಫೈನಲ್ ತಲುಪಿದ್ದೇ ಈವರೆಗಿನ ಸಾಧನೆಯಾಗಿದೆ. ಆದರೆ, ಈ ಬಾರಿ ರಾಹುಲ್, ಮಯಾಂಕ್ ಅಗರ್ವಾಲ್, ಕರುಣ್ ನಾಯರ್, ಶಮಿ ಹಾಗೂ ವಿದೇಶಿ ಸ್ಟಾರ್ಗಳಾದ ಮ್ಯಾಕ್ಸ್ವೆಲ್, ಕ್ರಿಸ್ ಗೇಲ್, ಪೂರನ್, ಮುಜೀಬ್, ಕಾಟ್ರೆಲ್ ಹಾಗೂ ನಿಶಾಮ್ರಂತಹ ಮ್ಯಾಚ್ ವಿನ್ನರ್ಗಳನ್ನು ಹೊಂದಿದ್ದು ಐಪಿಎಲ್ನ ಬಲಿಷ್ಠ ತಂಡಗಳಲ್ಲಿ ಒಂದಾಗಿದೆ.