ಹೈದರಾಬಾದ್:ಹದಿಮೂರನೇ ಆವೃತ್ತಿಯ ಐಪಿಎಲ್ಗಾಗಿ ಡಿಸೆಂಬರ್ 19ರಂದು ಕೋಲ್ಕತ್ತಾದಲ್ಲಿ ಆಟಗಾರರ ಹರಾಜು ನಡೆಯಲಿದೆ. ಈ ನಿಟ್ಟಿನಲ್ಲಿ ಒಟ್ಟಾರೆ 971 ಆಟಗಾರರು ಹರಾಜಿಗೆ ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ. ಸದ್ಯ ಆಟಗಾರರ ಮೂಲಬೆಲೆಯ ಬಗ್ಗೆ ಮಾಹಿತಿ ಹೊರಬಿದ್ದಿದೆ.
ಅಚ್ಚರಿಯ ನಡೆಯಲ್ಲಿ ಕೋಲ್ಕತ್ತಾ ನೈಟ್ರೈಡರ್ಸ್ ತಂಡ ಕೈಬಿಟ್ಟಿದ್ದ ಕನ್ನಡಿಗ ರಾಬಿನ್ ಉತ್ತಪ್ಪ ಮೂಲಬೆಲೆ ₹1.5 ಕೋಟಿ ನಿಗದಿ ಮಾಡಲಾಗಿದೆ. ಲಭ್ಯ ಮಾಹಿತಿ ಪ್ರಕಾರ ಉತ್ತಪ್ಪ ಈ ಬಾರಿಯ ಹರಾಜಿನ ಗರಿಷ್ಠ ಮೂಲಬೆಲೆ ಹೊಂದಿರುವ ಭಾರತೀಯ ಆಟಗಾರ.
IPL ಹರಾಜಿಗೆ ದಿನಗಣನೆ: ರೇಸ್ನಲ್ಲಿ 971 ಆಟಗಾರರು... ಆಸ್ಟ್ರೇಲಿಯಾದ 55 ಪ್ಲೇಯರ್ಸ್ ಕಣದಲ್ಲಿ!