ಶಾರ್ಜಾ: ನಾಯಕ ವಿರಾಟ್ ಕೊಹ್ಲಿ ಹಾಗೂ ಕೊನೆಯ ಓವರ್ಗಳಲ್ಲಿ ಮೋರಿಸ್ ಅಬ್ಬರದಿಂದ ಬ್ಯಾಟಿಂಗ್ ನೆರವಿನಿಂದ ಆರ್‌ಸಿಬಿ ತಂಡ 171 ರನ್ಗಳಿಸಿ ಪಂಜಾಬ್ ತಂಡಕ್ಕೆ 172 ರನ್ಗಳ ಟಾರ್ಗೆಟ್ ನೀಡಿದೆ.
ಬ್ಯಾಟಿಂಗ್ ಸ್ವರ್ಗದಲ್ಲಿ ಬ್ಯಾಟಿಂಗ್ ಕ್ರಮಾಂಕ ಬದಲಾವಣೆಯಿಂದ ಎಡವಿದ ಬೆಂಗಳೂರು ತಂಡದ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 171 ರನ್ಗಳಿಸಿದೆ.
ಆರಂಭಿಕರಾದ ದೇವದತ್ ಪಡಿಕ್ಕಲ್ 20 , ಆ್ಯರೋನ್ ಫಿಂಚ್ 18 ರನ್ಗಳಿಸಿ ಬೇಗ ವಿಕೆಟ್ ಒಪ್ಪಿಸಿದರು. ಆದರೆ ನಾಲ್ಕನೇ ಕ್ರಮಾಂಕದಲ್ಲಿ ವಿಲಿಯರ್ಸ್ ಬದಲಿಗೆ ಬಂದ ಸುಂದರ್ ಎಲ್ಲರ ನಿರೀಕ್ಷೆಯನ್ನ ಹುಸಿಗೊಳಿಸಿದರು. ಅವರು 14 ಎಸೆತಗಳಲ್ಲಿ 13 ರನ್ಗಳಿಸಿ ಔಟಾದರು.