ಕರ್ನಾಟಕ

karnataka

ETV Bharat / sports

ಕೆಕೆಆರ್​​ - ಹೈದರಾಬಾದ್​ ನಡುವೆ ಫೈಟ್​: 4ನೇ ಸ್ಥಾನಕ್ಕಾಗಿ ನಡೆಯಲಿದೆ ಕಾದಾಟ! - SRH Squad today

ಇಂಡಿಯನ್​​ ಪ್ರೀಮಿಯರ್​ ಲೀಗ್​ನ ಮೊದಲ ಪಂದ್ಯದಲ್ಲಿ ಇಂದುವ ಕೋಲ್ಕತ್ತಾ ನೈಟ್​ ರೈಡರ್ಸ್​​ ಹಾಗೂ ಸನ್​ರೈಸರ್ಸ್​ ಹೈದರಾಬಾದ್​​ ತಂಡಗಳು ಸೆಣಸಾಟ ನಡೆಸಲಿವೆ.

SRH
SRH

By

Published : Oct 18, 2020, 12:30 PM IST

ಅಬುಧಾಬಿ:ಇಂಡಿಯನ್​​ ಪ್ರೀಮಿಯರ್​ ಲೀಗ್​​ನಲ್ಲಿ ಇಂದು ಕೋಲ್ಕತ್ತಾ ನೈಟ್​​ ರೈಡರ್ಸ್​​ ಹಾಗೂ ಸನ್​​ರೈಸರ್ಸ್​ ಹೈದರಾಬಾದ್​ ತಂಡಗಳ ನಡುವೆ ಸೆಣಸಾಟ ನಡೆಯಲಿದ್ದು, 4ನೇ ಸ್ಥಾನಕ್ಕಾಗಿ ಉಭಯ ತಂಡಗಳು ಕಾದಾಡಲಿವೆ.

ಪಾಯಿಂಟ್​​ ಪಟ್ಟಿಯಲ್ಲಿ ಸದ್ಯ ಕೋಲ್ಕತ್ತಾ ನೈಟ್​ ರೈಡರ್ಸ್​​​ 4ನೇ ಸ್ಥಾನ ಹಾಗೂ ಸನ್​ರೈಸರ್ಸ್​ ಹೈದರಾಬಾದ್​ ತಂಡ 5ನೇ ಸ್ಥಾನದಲ್ಲಿವೆ. ಹೀಗಾಗಿ ಫ್ಲೇ- ಆಫ್​​ ಹಂತಕ್ಕೆ ಮತ್ತಷ್ಟು ಸನಿಹವಾಗಲು ಹಾಗೂ 4ನೇ ಸ್ಥಾನಕ್ಕೆ ಲಗ್ಗೆ ಹಾಕುವ ನಿಟ್ಟಿನಲ್ಲಿ ಈ ಪಂದ್ಯ ಉಭಯ ತಂಡಗಳಿಗೆ ಮಹತ್ವದ್ದಾಗಿದೆ.

ಕೆಕೆಆರ್​​-ಎಸ್​ಆರ್​ಹೆಚ್​ ಫೈಟ್​​

ಕೋಲ್ಕತ್ತಾ ನೈಟ್​ ರೈಡರ್ಸ್​​ ತಂಡದಲ್ಲಿ ನಾಯಕತ್ವ ಈಗಾಗಲೇ ಬದಲಾವಣೆ ಆಗಿದ್ದು, ಕಾರ್ತಿಕ್​ ಬದಲಿಗೆ ಇಯಾನ್​ ಮಾರ್ಗನ್​​ ನಾಯಕತ್ವ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಆದರೆ ಮುಂಬೈ ಇಂಡಿಯನ್ಸ್​ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್​ ಹಾಗೂ ಬೌಲಿಂಗ್​​ನಲ್ಲಿ ವೈಫಲ್ಯ ಅನುಭವಿಸಿದ ಕಾರಣ ಸೋಲು ಕಂಡಿದೆ.

ಆಂಡ್ರ್ಯೋ ರೆಸೆನ್​​

ಸನ್​​ರೈಸರ್ಸ್​ ಹೈದರಾಬಾದ್​ ಕೂಡ ಬ್ಯಾಟಿಂಗ್​ ಹಾಗೂ ಬೌಲಿಂಗ್​ ವಿಭಾಗದಲ್ಲಿ ಸಮತೋಲನದಿಂದ ಕೂಡಿದೆ. ಆದರೆ, ಟಾಪ್​ ಆರ್ಡರ್​ ಬ್ಯಾಟ್ಸಮನ್​ಗಳು ಆರ್ಭಟಿಸಿದಾಗ ಮಾತ್ರ ದೊಡ್ಡ ಮಟ್ಟದ ರನ್​ ಕಲೆ ಹಾಕಬಹುದಾಗಿದೆ. ತಂಡಕ್ಕೆ ವಾರ್ನರ್​, ಬ್ಯಾರಿಸ್ಟೋ, ಮನೀಷ್​ ಪಾಂಡೆ ಹಾಗೂ ಕೇನ್ ವಿಲಿಯಮ್ಸನ್​​​ ಬ್ಯಾಟಿಂಗ್​ ಆಧಾರಸ್ತಭವಾಗಿದ್ದಾರೆ. ಭುವನೇಶ್ವರ್​ ಕುಮಾರ್​ ತಂಡದಿಂದ ಹೊರಬಿದ್ದಿರುವ ಕಾರಣ ತಂಡಕ್ಕೆ ಟಿ. ನಟರಾಜನ್​, ಖಲೀಲ್​ ಅಹ್ಮದ್​, ಸಂದೀಪ್​ ಶರ್ಮಾ ಹಾಗೂ ರಶೀದ್ ಖಾನ್​​ ಟ್ರಂಪ್​ ಕಾರ್ಡ್​ ಆಗಿದ್ದಾರೆ.

ಕೋಲ್ಕತ್ತಾ ನೈಡ್​ ರೈಡರ್ಸ್​​

ಉಭಯ ತಂಡ ಇಂತಿವೆ

ಕೋಲ್ಕತ್ತಾ ನೈಟ್​ ರೈಡರ್ಸ್​​​: ಇಯಾನ್​ ಮಾರ್ಗನ್​(ಕ್ಯಾಪ್ಟನ್​) ದಿನೇಶ್​ ಕಾರ್ತಿಕ್​, ನಿತಿಶ್​ ರಾಣಾ, ರಾಹುಲ್​ ತ್ರಿಪಾಠಿ, ಶುಬ್ಮನ್​ ಗಿಲ್​, ಕಲ್ಮೇಶ್ ನಾಗರಕೋಟೆ, ಕುಲ್ದೀಪ್​ ಯಾದವ್​, ಪ್ಯಾಟ್​ ಕಮ್ಮಿನ್ಸ್​, ಪ್ರಸಿದ್ಧ ಕೃಷ್ಣ, ಶಿವಂ ಮಾವಿ, ವರುಣ್​ ಚಕ್ರವರ್ತಿ, ಆಂಡ್ರೋ ರಸೆಲ್​, ಕ್ರಿಸ್​ ಗ್ರಿನ್​, ಸುನಿಲ್ ನರೈನ್​,

ಸನ್​ರೈಸರ್ಸ್​ ಹೈದರಾಬಾದ್​​:ಡೇವಿಡ್​ ವಾರ್ನರ್​(ಕ್ಯಾಪ್ಟನ್​), ಬ್ಯಾರಿಸ್ಟೋ,ಕೇನ್​ ವಿಲಿಯಮ್ಸನ್​, ಮನೀಷ್​ ಪಾಂಡೆ, ಪ್ರಿಯಂ ಗರ್ಗ್​,ವಿಜಯ್​ ಶಂಕರ್​, ರಾಶೀದ್ ಖಾನ್​, ಖಲೀಲ್ ಅಹ್ಮದ್​,ಸಿದ್ಧಾರ್ಥ್​ ಕೌಲ್​,ಟಿ. ನಟರಾಜನ್​​,ಮೊಹಮ್ಮದ್​ ನಬಿ,ಅಭಿಷೇಕ್​ ಶರ್ಮಾ

ABOUT THE AUTHOR

...view details