ಕರ್ನಾಟಕ

karnataka

ETV Bharat / sports

ಸೋಲು ದೊಡ್ಡ ಬಿಕ್ಕಟ್ಟಲ್ಲ, ನಮ್ಮ ಸಾಮರ್ಥ್ಯ ನಂಬಿ ಮತ್ತೆ ತಿರುಗಿ ಬೀಳಬೇಕಿದೆ: ರಬಾಡ - ಕಿಂಗ್ಸ್ ಇಲೆವೆನ್​ ವಿರುದ್ಧ ಡೆಲ್ಲಿಗೆ ಸೋಲು

ಟೂರ್ನಿಯಲ್ಲಿ 11 ಪಂದ್ಯಗಳಿಂದ 4 ಸೋಲು 7 ಗೆಲುವುಗಳೊಂದಿಗೆ 14 ಅಂಕ ಪಡೆದು 2ನೇ ಸ್ಥಾನದಲ್ಲಿರುವ ಡೆಲ್ಲಿ ಮಂಗಳವಾರ ಸನ್​ರೈಸರ್ಸ್​ ಹೈದರಾಬಾದ್ ತಂಡವನ್ನು ಎದುರಿಸಲಿದೆ..

ಕಗಿಸೋ ರಬಾಡ
ಕಗಿಸೋ ರಬಾಡ

By

Published : Oct 26, 2020, 6:11 PM IST

ದುಬೈ: ಸತತ ಗೆಲುವುಗಳಿಂದ ಅಗ್ರಸ್ಥಾನದಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್ ನಂತರ ಸತತ 2 ಸೋಲು ಕಂಡು 2ನೇ ಸ್ಥಾನಕ್ಕೆ ಕುಸಿದಿದೆ. ಆದರೆ, ಟೂರ್ನಿಯಲ್ಲಿ ಅಮೋಘ ಪ್ರದರ್ಶನ ತೋರಿರುವ ತಂಡಕ್ಕೆ 2 ಸೋಲಗಳು ದೊಡ್ಡ ಸಮಸ್ಯೆ ಏನಲ್ಲ, ನಾವು ಮತ್ತೆ ನಮ್ಮ ಸಾಮರ್ಥ್ಯ ನಂಬಿ ಆಡಬೇಕಿದೆ ಎಂದು ಡೆಲ್ಲಿ ಬೌಲರ್​ ರಬಾಡ ಹೇಳಿದ್ದಾರೆ.

ಟೂರ್ನಿಯಲ್ಲಿ 11 ಪಂದ್ಯಗಳಿಂದ 4 ಸೋಲು 7 ಗೆಲುವುಗಳೊಂದಿಗೆ 14 ಅಂಕ ಪಡೆದು 2ನೇ ಸ್ಥಾನದಲ್ಲಿರುವ ಡೆಲ್ಲಿ ಮಂಗಳವಾರ ಸನ್​ರೈಸರ್ಸ್​ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಕ್ಯಾಪಿಟಲ್ಸ್ ಕಳೆದ ಎರಡು ಪಂದ್ಯಗಳಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಕೋಲತ್ತಾ ನೈಟರ್​ ರೈಡರ್ಸ್ ವಿರುದ್ಧ ಸತತ ಎರಡು ಪಂದ್ಯ ಸೋಲು ಕಂಡಿದೆ.

ಆದರೆ,ರಬಾಡ ಮಾತ್ರ ಈ ಸೋಲುಗಳನ್ನ ದೊಡ್ಡ ಬಿಕ್ಕಟ್ಟಲ್ಲ, ನಾವೀಗ ಟೂರ್ನಿಯ ಅಂತಿಮ ಘಟ್ಟದಲ್ಲಿದ್ದೇವೆ, ಈ ಸಂದರ್ಭದಲ್ಲಿ ನಾವು ತಿರುಗಿ ಬೀಳುವ ಅಗತ್ಯವಿದೆ ಎಂದು ತಿಳಿಸಿದ್ದಾರೆ. "ನೀವು ಇಲ್ಲಿ ಅತ್ಯಂತ ಗುಣಮಟ್ಟವುಳ್ಳ ಕ್ರಿಕೆಟ್ ಆಡುತ್ತಿದ್ದೀರಾ, ಇಲ್ಲಿ ಆಡುವುದು ಅಷ್ಟೊಂದು ಸುಲಭವಲ್ಲ. ನಾವು ಟೂರ್ನಿಯನ್ನು ಉತ್ತಮವಾಗಿ ಪ್ರಾರಂಭಿಸಿದ್ದರಿಂದ ತಂಡದಲ್ಲಿ ಸಕರಾತ್ಮಕತೆಯನ್ನು ತಂದುಕೊಟ್ಟಿತ್ತು.

ಆದರೆ, ಈ ಸಂದರ್ಭದಲ್ಲಿ ನಾವು ಕೆಲವು ಪಂದ್ಯಗಳಲ್ಲಿ ಎಡವಿದ್ದೇವೆ. ನಾವು ಕೆಲವು ತಪ್ಪುಗಳನ್ನು ತಿದ್ದಿಕೊಳ್ಳುವ ಮೂಲಕ ಮತ್ತೆ ತಿರುಗಿ ಬೀಳಬೇಕಿದೆ" ಎಂದು ರಬಾಡ ಅಭಿಪ್ರಾಯಪಟ್ಟಿದ್ದಾರೆ.

ಕೆಕೆಆರ್ -ಡೆಲ್ಲಿ ಕ್ಯಾಪಿಟಲ್ಸ್​

" ನಾವು ಈಗ ಟೂರ್ನಿಯ ನಿರ್ಣಾಯಕ ಹಂತಕ್ಕೆ ತಲುಪಿದ್ದೇವೆ, ಮುಂದಿನ ಪಂದ್ಯಗಳಲ್ಲಿ ಉತ್ತಮ ಸಾಮರ್ಥ್ಯವುಳ್ಳ ತಂಡಗಳ ಸವಾಲನ್ನು ಎದುರಿಸಬೇಕಿದೆ. ಆ ಪಂದ್ಯದಲ್ಲಿ ಯಾರಾದರೂ ಗೆಲ್ಲಬಹುದು. ಹಾಗಾಗಿ, ಟೂರ್ನಮೆಂಟ್​ನ ಮುಂದಿನ ಕೆಲವು ಪಂದ್ಯಗಳನ್ನು ಗೆಲ್ಲಬೇಕಾದರೆ ನಾವು ನಮ್ಮ ಉತ್ತಮ ಪ್ರದರ್ಶನವನ್ನು ತೋರಿಸಬೇಕಿದೆ.

ಈ ಸಂದರ್ಭದಲ್ಲಿ ನಮ್ಮ ಸಾಮರ್ಥ್ಯದ ಮೇಲೆ ನಾವು ನಂಬಿಕೆಯಿಡಬೇಕಿದೆ. ಸಣ್ಣ ಬದಲಾವಣೆ ಮಾಡಿಕೊಂಡರೆ ನಾವು ಗೆಲುವು ಪಡೆಯಬಹುದು ಎಂಬ ವಿಶ್ವಾಸ ನನಗಿದೆ ಎಂದು ರಬಡಾ ತಿಳಿಸಿದ್ದಾರೆ. ರಬಾಡ 11 ಪಂದ್ಯಗಳಿಂದ 23 ವಿಕೆಟ್ ಪಡೆಯುವ ಮೂಲಕ 2020ರ ಐಪಿಎಲ್​ನಲ್ಲಿ ಪರ್ಪಲ್ ಕ್ಯಾಪ್ ಪಡೆದುಕೊಂಡಿದ್ದಾರೆ.

ABOUT THE AUTHOR

...view details