ಅಬುಧಾಬಿ:ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಗುರುವಾರ ಅಬುಧಾಬಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಸೆಣಸಾಡಲಿದೆ. ನಿರ್ಣಾಯಕ ಎನಿಸಿರುವ ಈ ಪಂದ್ಯದಲ್ಲಿ ಮೇಲುಗೈ ಸಾಧಿಸಬೇಕಾದರೆ ಪಂಜಾಬ್ ನಾಯಕ ಕೆಎಲ್ ರಾಹುಲ್ರ ಮೇಲೆ ಹಿಡಿತ ಸಾಧಿಸುವುದು ನಮಗೆ ಅನಿವಾರ್ಯವಾಗಿದ ಎಂದು ಮುಂಬೈ ಇಂಡಿಯನ್ಸ್ ಬೌಲಿಂಗ್ ಕೋಚ್ ಶೇನ್ ಬಾಂಡ್ ಅಭಿಪ್ರಾಯ ಪಟ್ಟಿದ್ದಾರೆ.
" ಕೆಎಲ್ ರಾಹುಲ್ ಒಬ್ಬ ಅದ್ಭುತ ಆಟಗಾರ. ಅವರು ಈ ಹಿಂದಿನ ಪಂದ್ಯಗಳಲ್ಲಿ ನಮ್ಮ ವಿರುದ್ಧ ರನ್ಗಳಿಸಿದ್ದಾರೆ. ಆತ ಡೈನಮಿಕ್ ಆಟಗಾರ ಎಂದು ನಮಗೆ ತಿಳಿದಿದೆ. ಅವರು ಹೆಚ್ಚು ರನ್ಗಳನ್ನು ನೆಲದಲ್ಲೇ ಹೊಡೆದು ಗಳಿಸುತ್ತಾರೆ. ಹಾಗೆಯೇ ಅವರು ಕ್ರೀಸ್ನಲ್ಲಿ ನೆಲೆಯೂರಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತಾರೆ ಎಂಬುದು ಸಹ ನಮಗೆ ತಿಳಿದಿದೆ. ಆದ್ದರಿಂದ ಅವರು ನಮ್ಮ ವಿರುದ್ಧ ಸೆಟ್ಲ್ ಆಗಲು ಸಮಯ ತೆಗೆದುಕೊಳ್ಳುವ ವೇಳೆ ನಾವು ಅವರ ಮೇಲೆ ಒತ್ತಡ ಏರುವುದಕ್ಕೆ ಉತ್ತಮ ಅವಕಾಶ ದೊರೆಯುತ್ತದೆ" ಎಂದು ಬಾಂಡ್ ಹೇಳಿದ್ದಾರೆ.