ನವದೆಹಲಿ:ಯುಎಇಯಲ್ಲಿ ನಡೆಯುತ್ತಿರುವ ಐಪಿಎಲ್ನಲ್ಲಿ ಕಗಿಸೋ ರಬಾಡ, ಆರ್ಚರ್, ಬುಮ್ರಾ, ಎನ್ರಿಚ್ ನೋಕಿಯಾ, ದೀಪಕ್ ಚಹರ್ ಅಂತಹ ಬೆರಳೆಣಿಕೆಯಷ್ಟು ಬೌಲರ್ಗಳು ಮಿಂಚುತ್ತಿದ್ದಾರೆ. ಆದರೆ, ಕೆಲವು ಬೌಲರ್ಗಳು ಅತ್ಯಂತ ಕೆಟ್ಟ ಪ್ರದರ್ಶನದ ಮೂಲಕ ಹೆಚ್ಚು ರನ್ ಬಿಟ್ಟುಕೊಡುವ ಮೂಲಕ ತಂಡದಲ್ಲಿ ಅವಕಾಶವನ್ನೇ ಕಳೆದು ಕೊಳ್ಳುತ್ತಿದ್ದಾರೆ.
ಐಪಿಎಲ್ನಲ್ಲಿ ಇಲ್ಲಿಯವರೆಗೆ 45 ಪಂದ್ಯಗಳು ನಡೆದಿದ್ದು, ಅದರಲ್ಲಿ ಒಂದೇ ಪಂದ್ಯದಲ್ಲಿ 55 ಕ್ಕಿಂತ ಹೆಚ್ಚು ರನ್ ಬಿಟ್ಟುಕೊಟ್ಟ ಬೌಲರ್ಗಳು.
ಸಿದ್ಧಾರ್ಥ್ ಕೌಲ್(ಸನ್ರೈಸರ್ಸ್ ಹೈದರಾಬಾದ್)
ಸಿದ್ಧಾರ್ಥ್ ಕೌಲ್ ಮೊದಲೆರಡು ಪಂದ್ಯಗಳಲ್ಲಿ ಅವಕಾಶ ಪಡೆದಿರಲಿಲ್ಲ. ಅಕ್ಟೋಬರ್ 4 ರಂದು ನಡೆದಿದ್ದ ಮುಂಬೈ ವಿರುದ್ಧದ ಪಂದ್ಯದಲ್ಲಿ ಕೌಲ್ 4 ಓವರ್ಗಳಲ್ಲಿ 64 ರನ್ ಬಿಟ್ಟುಕೊಟ್ಟು ದುಬಾರಿಯಾಗಿದ್ದರು. ಮುಂಬೈ ಇಂಡಿಯನ್ಸ್ 20 ಓವರ್ಗಳಲ್ಲಿ 208 ರನ್ಗಳಿಸಿತ್ತು ಮತ್ತು ಈ ಪಂದ್ಯವನ್ನು 34 ರನ್ಗಳಿಂದ ಗೆದ್ದು ಬೀಗಿತ್ತು.
ಅಂಕಿತ್ ರಜಪೂತ್(ರಾಜಸ್ಥಾನ್ ರಾಯಲ್ಸ್)
ಅಕ್ಟೋಬರ್ 25 ರಂದು ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲೇ ರಾಜಸ್ಥಾನ್ ತಂಡದ ಅಂಕಿತ್ ರಜಪೂತ್ 60 ರನ್ ಬಿಟ್ಟುಕೊಟ್ಟು ದುಬಾರಿಯಾದರು. ಆದರೆ, ಬೆನ್ಸ್ಟೋಕ್ಸ್ ಸಿಡಿಸಿದ ಅಜೇಯ ಶತಕದ ನೆರವಿನಿಂದ ರಾಜಸ್ಥಾನ್ ಮುಂಬೈ ನೀಡಿದ್ದ 196 ರನ್ಗಳ ಗುರಿಯನ್ನ ಇನ್ನು 10 ಎಸೆತಗಳಿರುವಂತೆ ಗೆದ್ದು ಬೀಗಿತ್ತು.