ಮುಂಬೈ: ನವೆಂಬರ್ 8ರಂದು ನಡೆಯಬೇಕಿದ್ದ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯ ನವೆಂಬರ್ 10ಕ್ಕೆ ಮುಂದೂಡಿಕೆಯಾಗುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.
ಈಗಾಗಲೇ ಐಪಿಎಲ್ ದಿನಾಂಕ ಘೋಷಣೆಯಾದಾಗ ಬಿಸಿಸಿಐ ನಿರ್ಧಾರಕ್ಕೆ ಸ್ಟಾರ್ ಇಂಡಿಯಾ ಬೇಸರ ವ್ಯಕ್ತಪಡಿಸಿತ್ತು. ದೀಪಾವಳಿಗೆ ವಾರಾಂತ್ಯದಲ್ಲಿ ಟೂರ್ನಿ ಮುಗಿದಿದ್ದರೆ ಹೆಚ್ಚಿನ ವೀಕ್ಷಣೆ ಆಗುತ್ತಿತ್ತು ಎಂದು ತಿಳಿಸಿತ್ತು. ಐಪಿಎಲ್ ಆಡಳಿತ ಮಂಡಳಿ ನವೆಂಬರ್ 10ಕ್ಕೆ ಮುಂದೂಡಿ ದೀಪಾವಳಿಯ ವಾರವನ್ನು ಬಳಸಿಕೊಳ್ಳುಲು ಈ ನಿರ್ಧಾರ ಮಾಡುತ್ತಿದೆ ಎನ್ನಲಾಗಿದೆ. ಈ ಕುರಿತು ಐಪಿಎಲ್ ಆಡಳಿತ ಮಂಡಳಿ ಆಗಸ್ಟ್ 2ರಂದು ನಡೆಯುವ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ.