ಕರ್ನಾಟಕ

karnataka

ETV Bharat / sports

ಬಿಸಿಸಿಐನಿಂದ ಐಪಿಎಲ್​ ಆಯೋಜನೆಯ ಅಧಿಕೃತ ಪತ್ರ ಸ್ವೀಕಾರ: ಖಾತ್ರಿಪಡಿಸಿದ ಎಮಿರೇಟ್ಸ್​ ಕ್ರಿಕೆಟ್​ ಮಂಡಳಿ - ಬಿ್ರಜೇಶ್​ ಪಾಟೀಲ್​

ಭಾರತದಲ್ಲಿ ಕೊರೊನಾ ಆರ್ಭಟ ನಿಲ್ಲದ ಕಾರಣ 13ನೇ ಆವೃತ್ತಿಯ ಐಪಿಎಲ್​ಅನ್ನು ಯುಎಇನಲ್ಲಿ ನಡೆಸಲು ಬಿಸಿಸಿಐ ನಿರ್ಧರಿಸಿದೆ. ಇದಕ್ಕಾಗಿ ಮಂಗಳವಾರ ಎಮಿರೇಟ್ಸ್​ ಕ್ರಿಕೆಟ್​ ಬೋರ್ಡ್​ಗೆ ಬಿಸಿಸಿಐ ಪತ್ರ ಬರೆದಿತ್ತು. ಇದೀಗ ಬಿಸಿಸಿಐ ಪತ್ರ ನಮಗೆ ತಲುಪಿದೆ ಎಂದು ಎಮಿರೇಟ್ಸ್​ ಕ್ರಿಕೆಟ್​ ಬೋರ್ಡ್​ ಖಚಿತಪಡಿಸಿದೆ.

ಎಮಿರೇಟ್ಸ್​ ಕ್ರಿಕೆಟ್​ ಮಂಡಳಿ
ಎಮಿರೇಟ್ಸ್​ ಕ್ರಿಕೆಟ್​ ಮಂಡಳಿ

By

Published : Jul 28, 2020, 1:08 PM IST

ದುಬೈ: 13ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಆಯೋಜಿಸಲು ಬಿಸಿಸಿಐನಿಂದ ಅಧಿಕೃತ ಪತ್ರ ಪತ್ರವನ್ನು ಸ್ವೀಕರಿಸಿದ್ದೇವೆ ಎಂದು ಎಮಿರೇಟ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ದೃಢಪಡಿಸಿದೆ.

ಭಾರತದಲ್ಲಿ ಕೊರೊನಾ ಆರ್ಭಟ ನಿಲ್ಲದ ಕಾರಣ 13ನೇ ಆವೃತ್ತಿಯ ಐಪಿಎಲ್​ಅನ್ನು ಯುಎಇನಲ್ಲಿ ನಡೆಸಲು ಬಿಸಿಸಿಐ ನಿರ್ಧರಿಸಿದೆ. ಇದಕ್ಕಾಗಿ ಮಂಗಳವಾರ ಎಮಿರೇಟ್ಸ್​ ಕ್ರಿಕೆಟ್​ ಬೋರ್ಡ್​ಗೆ ಬಿಸಿಸಿಐ ಪತ್ರ ಬರೆದಿತ್ತು. ಇದೀಗ ಬಿಸಿಸಿಐ ಪತ್ರ ನಮಗೆ ತಲುಪಿದೆ ಎಂದು ಎಮಿರೇಟ್ಸ್​ ಕ್ರಿಕೆಟ್​ ಬೋರ್ಡ್​ ಖಚಿತಪಡಿಸಿದೆ.

"'ನಾವು ಬಿಸಿಸಿಐನಿಂದ ಅಧಿಕೃತ ಪತ್ರ ಸ್ವೀಕರಿಸಿದ್ದೇವೆ. ಇದಕ್ಕೆ ಸಂಬಂಧಿಸಿದಂತೆ ನಾವು ಭಾರತ ಸರ್ಕಾರದಿಂದ ಅನುಮತಿಗಾಗಿ ಕಾಯುತ್ತಿದ್ದೇವೆ. ಅನುಮತಿ ದೊರೆತ ಕೂಡಲೇ ಐಪಿಎಲ್ ಬಗೆಗಿನ ಅಂತಿಮ ಒಪ್ಪಂದ ಮುಗಿಸಲಿದ್ದೇವೆ" ಎಂದು ಎಮಿರೇಟ್ಸ್ ಕ್ರಿಕೆಟ್ ಬೋರ್ಡ್‌ನ ಮುಖ್ಯ ಕಾರ್ಯದರ್ಶಿ ಮುಬಶ್ಶೀರ್ ಉಸ್ಮಾನಿ ಹೇಳಿದ್ದಾರೆ.

ಐಪಿಎಲ್ ಟೂರ್ನಿಯನ್ನು ಭಾರತದಿಂದ ಯುಎಇಗೆ ಸ್ಥಳಾಂತರಿಸಲು ಭಾರತ ಸರ್ಕಾರದ ಅನುಮೋದನೆಗಾಗಿ ಬಿಸಿಸಿಐ ಕಾಯುತ್ತಿದ್ದರೆ, ಇತ್ತ ಉಸ್ಮಾನಿ ಎರಡೂ ಮಂಡಳಿಗಳು ಐಪಿಎಲ್​ ಆಯೋಜನೆ ಮಾಡಲು ಸಂಪೂರ್ಣವಾಗಿ ಸಜ್ಜುಗೊಂಡಿವೆ ಮತ್ತು ಆಯಾ ಆಂತರಿಕ ಕಾರ್ಯ ಸಮಿತಿಗಳು ಸೇರಿದಂತೆ ಸಂಬಂಧಿತ ಅಧಿಕಾರಿಗಳೊಂದಿಗೆ ಚರ್ಚೆಗಾಗಿ ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ.

13ನೇ ಆವೃತ್ತಿಯ ಐಪಿಎಲ್ ಯುಎಇಯಲ್ಲಿ ಸೆಪ್ಟೆಂಬರ್ 19ರಿಂದ ನವೆಂಬರ್ 8ರವರೆಗೆ ನಡೆಯಲಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಆದರೆ ಬಿಸಿಸಿಐ ಇನ್ನೂ ಅಧಿಕೃತವಾಗಿ ಐಪಿಎಲ್ ವೇಳಾಪಟ್ಟಿ ಬಿಡುಗಡೆ ಮಾಡಿಲ್ಲ. ಈ ವಾರದಲ್ಲಿ ಐಪಿಎಲ್ ಅಧಿಕೃತ ವೇಳಾಪಟ್ಟಿ ಪ್ರಕಟವಾಗುವ ಸಾಧ್ಯತೆಯಿದೆ.

ABOUT THE AUTHOR

...view details