ಕರ್ನಾಟಕ

karnataka

ETV Bharat / sports

ಬಲಿಷ್ಠ ಬ್ಯಾಟಿಂಗ್, ಸದೃಢ ಬೌಲಿಂಗ್ ಪಡೆಯೊಂದಿಗೆ 3ನೇ ಪ್ರಶಸ್ತಿಯತ್ತ ಕೆಕೆಆರ್​ ಚಿತ್ತ: 13ನೇ ಐಪಿಎಲ್​ಗೆ ತಂಡದ ಬಲ ಹೇಗಿದೆ ನೋಡಿ - ಐಪಿಎಲ್ 2020

13ನೇ ಆವೃತ್ತಿಯ ಐಪಿಎಲ್​ ಸೆಪ್ಟೆಂಬರ್ 19 ರಂದು ಯುಎಇಯಲ್ಲಿ ಪ್ರಾರಂಭವಾಗುತ್ತಿದೆ. ನಾಯಕ ದಿನೇಶ್ ಕಾರ್ತಿಕ್ ಟಿ20 ಕ್ರಿಕೆಟ್​ಗೆ ತಯಾರು ಮಾಡಿರುವ ಆಟಗಾರನೆಂದು ಪರಿಗಣಿಸಿಲ್ಪಟ್ಟಿದ್ದಾರೆ. ಜೊತೆಗೆ ಭಾರತೀಯ ಟಿ20 ಕ್ರಿಕೆಟ್​ನಲ್ಲಿ ಅತ್ಯುತ್ತಮ ನಾಯಕರಲ್ಲಿ ಒಬ್ಬರಾಗಿದ್ದ ಗೌತಮ್​ ಗಂಭೀರ್​ ಅವರ ಸ್ಥಾನವನ್ನು ತುಂಬುವಂತಹ ಆಟಗಾರನಾಗಿದ್ದು ಕೆಕೆಆರ್​ ಇವರ ಮೇಲೆ ಬಹಳ ನಿರೀಕ್ಷೆಯನ್ನು ಹೊಂದಿದೆ.

ಕೋಲ್ಕತ್ತಾ ನೈಟ್ ರೈಡರ್ಸ್​
ಕೋಲ್ಕತ್ತಾ ನೈಟ್ ರೈಡರ್ಸ್​

By

Published : Sep 14, 2020, 11:52 PM IST

ದುಬೈ: ಕೋಲ್ಕತ್ತಾ ನೈಟ್​ ರೈಡರ್ಸ್​ ಐಪಿಎಲ್​ನ ಬಹುದೊಡ್ಡ ಮನರಂಜನಾ ತಂಡವಾಗಿದೆ. ಕಳೆದ ಕೆಲವು ವರ್ಷಗಳಿಂದ ಕೋಲ್ಕತ್ತಾ ತಂಡ ಭಯವಿಲ್ಲದ ಕ್ರಿಕೆಟ್​ ಬ್ರಾಂಡ್​ಗೆ ಹೆಸರುವಾಸಿಯಾಗಿದೆ. 2012 ಮತ್ತು 2014ರಲ್ಲಿ ಟ್ರೋಫಿಯನ್ನು ಎತ್ತಿ ಹಿಡಿದಿದ್ದ ಈ ತಂಡ 2020ರಲ್ಲಿ ಬಲಿಷ್ಠ ಪಡೆಯೊಂದಿಗೆ ಟ್ರೋಫಿ ಎತ್ತಿ ಹಿಡಿಯಲು ಸಜ್ಜಾಗಿದೆ.

ಎರಡು ಬಾರಿ ಚಾಂಪಿಯನ್​ ಆಗಿದ್ದ ಕೆಕೆಆರ್​ ಕಳೆದ ಕೆಲವು ಆವೃತ್ತಿಗಳಲ್ಲಿ ಅಸಾಧ್ಯದ ಸಂದರ್ಭದಲ್ಲೂ ನಾಟಕೀಯ ಗೆಲುವುಗಳನ್ನು ಸಾಧಿಸಿ ಎಲ್ಲರ ಹುಬ್ಬೇರುವಂತೆ ಮಾಡಿದೆ. ಆದರೆ 2014ರಿಂದ 5 ಆವೃತ್ತಿಗಳಲ್ಲಿ 3 ಬಾರಿ ಬಾರಿ ಪ್ಲೇಆಫ್​ ತಲುಪಿದರೂ ಅದರಿಂದ ಮುಂದೆ ಹೋಗಲು ಸಾಧ್ಯವಾಗಿಲ್ಲ. 2015 ಮತ್ತು 2019ರಲ್ಲಿ 5ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತ್ತು.

ಕೆಕೆಆರ್​ ಐಪಿಎಲ್​ ಸಾಧನೆ

ಕಾರ್ತಿಕ್​ಗೆ ನಾಯಕನಾಗಿ ಎರಡನೇ ಚಾನ್ಸ್​

13ನೇ ಆವೃತ್ತಿಯ ಐಪಿಎಲ್​ ಸೆಪ್ಟೆಂಬರ್ 19 ರಂದು ಯುಎಇಯಲ್ಲಿ ಪ್ರಾರಂಭವಾಗುತ್ತಿದೆ. ನಾಯಕ ದಿನೇಶ್ ಕಾರ್ತಿಕ್ ಟಿ20 ಕ್ರಿಕೆಟ್​ಗೆ ತಯಾರು ಮಾಡಿರುವ ಆಟಗಾರನೆಂದು ಪರಿಗಣಿಸಿಲ್ಪಟ್ಟಿದ್ದಾರೆ. ಜೊತೆಗೆ ಭಾರತೀಯ ಟಿ20 ಕ್ರಿಕೆಟ್​ನಲ್ಲಿ ಅತ್ಯುತ್ತಮ ನಾಯಕರಲ್ಲಿ ಒಬ್ಬರಾಗಿದ್ದ ಗೌತಮ್​ ಗಂಭೀರ್​ ಅವರ ಸ್ಥಾನವನ್ನು ತುಂಬುವಂತಹ ಆಟಗಾರನಾಗಿದ್ದು ಕೆಕೆಆರ್​ ಇವರ ಮೇಲೆ ಬಹಳ ನಿರೀಕ್ಷೆಯನ್ನು ಹೊಂದಿದೆ.

ದಿನೇಶ್​ ಕಾರ್ತಿಕ್​

ಆದರೆ 2019ರಲ್ಲಿ ಮರೆಯಾಗದ ಆವೃತ್ತಿಯ ನಂತರವೂ ದಿನೇಶ್​ ಕಾರ್ತಿಕ್​ಗೆ ಕೆಕೆಆರ್​ಗೆ ನಾಯಕನಾಗಿ ಮತ್ತೊಂದು ಅವಕಾಶ ನೀಡಿದೆ. ಆದರೆ ಈ ಬಾರಿ ಅವರು ವಿಫಲರಾದರೆ ಅವರಿಗೆ ಬಹಶಃ ಮತ್ತೊಂದು ಅವಕಾಶ ಸಿಗಲಾರದು ಎಂಬುದು ಸತ್ಯಕ್ಕೆ ಹತ್ತಿರವಾದ ಮಾತಾಗಿದೆ.

ಕೋಚ್​ಗಳ ಬದಲಾವಣೆ

2019ರ ದುಸ್ವಪ್ನದ ನಂತರ ಕೆಕೆಆರ್​ ತಮ್ಮ ಕೋಚಿಂಗ್ ಸ್ಟಾಫ್​ಗಳನ್ನು ಪುನರುಜ್ಜೀವನಗೊಳಿಸಿದೆ. ನ್ಯೂಜಿಲ್ಯಾಂಡ್​ನ ಮಾಜಿ ನಾಯಕ ಬ್ರೆಂಡನ್​ ಮೆಕಲಮ್ ಅವರನ್ನು ಮುಖ್ಯ ಕೋಚ್ ಆಗಿ ನೇಮಕ ಮಾಡಿದೆ. ಅಲ್ಲದೆ ಯುವ ಆಟಗಾರರನ್ನು ಸೇರಿಸಿಕೊಂಡಿದೆ. ಆದರೆ ನಾಯಕನಾಗಿ ಕಾರ್ತಿಕ್​ರನ್ನು ಮುಂದುವರಿಸಿದೆ. ಏಕೆಂದರೆ ಸಿಇಒ ವೆಂಕಿ ಮೈಸೂರು ಅವರ ನಾಯಕತ್ವದ ಮೇಲೆ ನಂಬಿಕೆಯಿಟ್ಟಿದ್ದಾರೆ.

ಕಳೆದ ವರ್ಷ ಮೊದಲ 5 ಪಂದ್ಯಗಳಲ್ಲಿ 4ರಲ್ಲಿ ಜಯ ಸಾಧಿಸಿದ್ದ ಕೆಕೆಆರ್​, ನಂತರ 9 ಪಂದ್ಯಗಳಿಂದ 6 ಪಂದ್ಯಗಳಲ್ಲಿ ಸೋಲುಕಾಣುವ ಮೂಲಕ ಪ್ಲೇ ಆಫ್​ ಪ್ರವೇಶಿಸುವಲ್ಲಿ ವಿಫಲವಾಗಿತ್ತು.

ತಂಡದ ಬ್ಯಾಟಿಂಗ್​ ಸಂಯೋಜನೆ

ಆ್ಯಂಡ್ರೆ ರಸೆಲ್​

ತಂಡದಲ್ಲಿ ಇರಬೇಕಾದ 4 ವಿದೇಶಿ ಆಟಗಾರರಲ್ಲಿ ಆ್ಯಂಡ್ರೆ ರಸೆಲ್, ಸುನೀಲ್ ನರೈನ್​ ಮತ್ತು ಪ್ಯಾಟ್​ ಕಮ್ಮಿನ್ಸ್​ ಮೊದಲ ಆಯ್ಕೆಯಾಗಿರುತ್ತಾರೆ. ನಾಲ್ಕನೇ ಆಯ್ಕೆಗೆ ಇಂಗ್ಲೆಂಡ್​ ನಾಯಕ ಇಯಾನ್ ಮಾರ್ಗನ್, ಕಿವೀಸ್ ಬೌಲರ್​ ಫರ್ಗ್ಯುಸನ್​​ ಅಥವಾ ಅವರ ಬಿಬಿಎಲ್​ ಸ್ಟಾರ್​ ಟಾಮ್​ ಬ್ಯಾಂಟಮ್​ ನಡುವೆ ಪೈಪೋಟಿ ನಡೆಯಲಿದೆ.

ಮಾರ್ಗನ್​ ಮತ್ತು ದಿನೇಶ್​ ಕಾರ್ತಿಕ್​ ಮಧ್ಯಮ ಕ್ರಮಾಂದಲ್ಲಿರುವುದರಿಂದ ಈ ಬಾರಿ ರಸೆಲ್​ 3ನೇ ಕ್ರಮಾಂಕದಲ್ಲಿ ಮುಕ್ತ ಮನಸ್ಸಿನಿಂದ ಆಡಬಹುದಾಗಿದೆ. ಇನ್ನು ಆರಂಭಿಕರಾಗಿ ಯುವ ಆಟಗಾರ ಶುಬ್ಮನ್​ ಗಿಲ್​ ಜೊತೆಗೆ ಸುನೀಲ್ ನರೈನ್​ ಅಥವಾ ಬಾಂಟಮ್​ ಕಣಕ್ಕಿಳಿಯುವ ಸಾಧ್ಯತೆಯಿದೆ.

ಸುನೀಲ್ ರನಾ

ನಾಯಕ ದಿನೇಶ್ ಕಾರ್ತಿಕ್ ಜೊತೆಗೆ ಈ ಬಾರಿ ವಿಶ್ವಕಪ್​ ಗೆದ್ದ ತಂಡದ ನಾಯಕ ಮಾರ್ಗನ್​ ಮತ್ತು ನೂತನ ಹೆಡ್​ ಕೋಚ್​ ಆಗಿರುವ ಮೆಕಲಮ್​ ತಂಡದಲ್ಲಿ ರೂಪುರೇಷೆಗಳನ್ನು ತಯಾರು ಮಾಡಲು ಸಹಕಾರಿಯಾಗಲಿದ್ದಾರೆ. ಸಿಪಿಎಲ್​ನಲ್ಲಿ ಕೋಚ್​ ಆದ ಮೊದಲ ಸೀಸನ್​ನಲ್ಲೇ ಟಿಕೆಆರ್​ ತಂಡವನ್ನು ಚಾಂಪಿಯನ್ ಮಾಡಲು ಮೆಕಲಮ್​ ಪ್ರಮುಖ ಪಾತ್ರವಹಿಸಿದ್ದರು.

ಸದೃಢ ವೇಗದ ಬೌಲಿಂಗ್ ವಿಭಾಗ

ಕೆಕೆಆರ್ ಬೌಲಿಂಗ್ ವಿಭಾಗವನ್ನು ಬಲಿಷ್ಠಗೊಳಿಸಿಲು ಆಸ್ಟ್ರೇಲಿಯಾ ತಂಡದ ಪ್ಯಾಟ್​ ಕಮ್ಮಿನ್ಸ್​ರನ್ನು ಬರೋಬ್ಬರಿ 15.5 ಕೋಟಿ ರೂ ನೀಡಿ ಖರೀದಿಸಿದೆ. ಜೊತೆಗೆ ಕಿವೀಸ್​ನ ಲೂಕಿ ಫರ್ಗ್ಯುಸನ್​ರನ್ನು ಹೊಂದಿದೆ. ಅಲ್ಲದೆ ಭಾರತದ ಪ್ರತಿಭಾವಂತ ಯುವ ಬೌಲರ್​ಗಳಾದ ಪ್ರಸಿದ್ ಕೃಷ್ಣ, ಕಮಲೇಶ್​ ನಾಗರಕೋಟಿ, ಶಿವಂ ಮಾವಿ ಹಾಗೂ ಸಂದೀಪ್​ ವಾರಿಯರ್​ರನ್ನು ಒಳಗೊಂಡಿದೆ. ಕೆಕೆಆರ್​ ಬಲವೆಂದರೆ ಈ ಎಲ್ಲಾ ವೇಗಿಗಳು 140kph ನಲ್ಲಿ ಬೌಲಿಂಗ್​ ಮಾಡಲು ಸಮರ್ಥರಿದ್ದಾರೆ.

ಪ್ಯಾಟ್ ಕಮ್ಮಿನ್ಸ್​

ದೌರ್ಬಲ್ಯ

ಈ ಬಾರಿ ಟೂರ್ನಿ ಯುಎಇನಲ್ಲಿ ನಡೆಯುತ್ತಿರುವುದರಿಂದ ಅಲ್ಲಿನ ಪಿಚ್​ಗಳು ಸ್ಲೋ ಟ್ರ್ಯಾಕ್​ಗಳಾಗಿವೆ. ಆದರೆ ತಂಡದಲ್ಲಿ ಸ್ಪಿನ್ನರ್​ಗಳ ಕೊರತೆ ಕಾಡುತ್ತಿದೆ. ಸುನೀಲ್ ನರೈನ್​ ಮತ್ತು ಕುಲ್ದೀಪ್ ಯಾದವ್​ ತಂಡದ ಸ್ಪಿನ್ ಬಲವಾಗಿದ್ದಾರೆ. ಇವರಿಬ್ಬರನ್ನು ಬಿಟ್ಟರೆ ಅನಾನುಭವಿಗಳಾದ ವರುಣ್ ಚಕ್ರವರ್ತಿ ಹಾಗೂ ಎಂ ಸಿದ್ದಾರ್ಥ್​ ತಂಡದಲ್ಲಿರುವ ಮತ್ತಿಬ್ಬರು ಸ್ಪಿನ್ನರ್​ಗಳಾಗಿದ್ದಾರೆ.

ತಂಡದ ಬೆಂಚ್​ ಸ್ಟ್ರೆಂತ್​ ಕೂಡ ಕೆಕೆಆರ್​ನ ದೌರ್ಬಲ್ಯಗಳಲ್ಲಿ ಒಂದಾಗಿದೆ. ಬ್ಯಾಟಿಂಗ್​ ಲೈನ್ ಅಪ್​ ಬದ್ರವಾಗಿರುವ ಕೆಕೆಆರ್​ಗೆ ಗಾಯಗೊಂಡರೆ ಅವರ ಸ್ಥಾನ ತುಂಬಬಲ್ಲಾ ಉನ್ನತ ದರ್ಜೆಯ ಆಟಗಾರರ ಕೊರತೆಯಿದೆ.

ಸಮಾಧಾನಕರ ಸಂಗತಿಯೆಂದರೆ ಈ ಬಾರಿ ರಾಹುಲ್ ತ್ರಿಪಾಠಿಯನ್ನು ತಂಡಕ್ಕೆ ಸೇರಿಸಿಕೊಂಡಿದೆ. ಅವರು ಆರಂಭಿಕ ಸ್ಥಾನದಿಂದ ಮಧ್ಯಮ ಕ್ರಮಾಂಕದವರೆಗೆ ಯಾವುದೇ ಸ್ಥಾನದಲ್ಲಾದರೂ ತಂಡಕ್ಕೆ ನೆರವಾಗಲಿದ್ದಾರೆ.

ಕೆಕೆಆರ್​ ಸೆಪ್ಟೆಂಬರ್​ 23 ರಂದು ಮುಂಬೈ ಇಂಡಿಯನ್ಸ್​ ವಿರುದ್ಧ ತಮ್ಮ ಐಪಿಎಲ್ ಅಭಿಯಾನವನ್ನು ಆರಂಭಿಸಲಿದೆ.

23 ಸದಸ್ಯರ ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡ:

ದಿನೇಶ್ ಕಾರ್ತಿಕ್ (ನಾಯಕ ಮತ್ತು ವಿಕೆಟ್ ಕೀಪರ್), ಇಯಾನ್ ಮಾರ್ಗನ್ (ಉಪನಾಯಕ), ಶುಬ್ಮನ್ ಗಿಲ್, ಟಾಮ್ ಬ್ಯಾಂಟನ್, ಸುನೀಲ್ ನರೈನ್, ಆಂಡ್ರೆ ರಸೆಲ್, ನಿತೀಶ್ ರಾಣಾ, ರಾಹುಲ್ ತ್ರಿಪಾಠಿ, ಕುಲ್ದೀಪ್ ಯಾದವ್, ಪ್ಯಾಟ್ ಕಮ್ಮಿನ್ಸ್, ಪ್ರಸಿದ್ ಕೃಷ್ಣ, ಲಾಕಿ ಫರ್ಗುಸನ್ ರಿಂಕು ಸಿಂಗ್, ಕಮಲೇಶ್ ನಾಗರ್​ಕೋಟಿ, ಶಿವಂ ಮಾವಿ, ನಿಖಿಲ್ ನಾಯಕ್, ಕ್ರಿಸ್ ಗ್ರೀನ್, ಎಂ ಸಿದ್ಧಾರ್ಥ್, ಸಂದೀಪ್ ವಾರಿಯರ್, ವರುಣ್ ಚಕ್ರವರ್ತಿ ಮತ್ತು ಸಿದ್ಧೇಶ್ ಲಾಡ್.

ABOUT THE AUTHOR

...view details