ದುಬೈ: ಕರ್ನಾಟಕದ ರನ್ ಮಷಿನ್ ದೇವದತ್ ಪಡಿಕ್ಕಲ್ ಹಾಗೂ ಆಸ್ಟ್ರೇಲಿಯಾದ ಯುವ ಬ್ಯಾಟ್ಸ್ಮನ್ ಜೋಶ್ ಫಿಲಿಪ್ಪೆ ಇಬ್ಬರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಮೊದಲ ಪಂದ್ಯದಲ್ಲಿ ಕಣಕ್ಕಿಳಿಸುತ್ತಿದೆ.
ಕಳೆದ ಆವೃತ್ತಿಯಲ್ಲಿ ಕೊನೆಯ ಸ್ಥಾನ ಪಡೆದಿದ್ದ ಕೊಹ್ಲಿ ಪಡೆ ಈ ಬಾರಿ ಅತ್ಯುತ್ತಮ ತಂಡವನ್ನು ಹೊಂದಿದ್ದು, 13ನೇ ಆವೃತ್ತಿಯಲ್ಲಿ ಟ್ರೋಫಿ ಎತ್ತಿ ಹಿಡಿಯುವ ಹಂಬಲದಲ್ಲಿದೆ. ತಂಡದಲ್ಲೂ ಅನೇಕ ಬದಲಾವಣೆಯನ್ನು ಮಾಡಿಕೊಂಡಿದ್ದು, ಇಂದಿನ ಪಂದ್ಯದಲ್ಲಿ ಫಿಂಚ್ ಜೊತೆಗೆ ದೇವದತ್ ಪಡಿಕ್ಕಲ್ ಹಾಗೂ ಜೋಶ್ ಫಿಲಿಪ್ಪೆಗೂ ಪದಾರ್ಪಣೆ ಮಾಡುವ ಅವಕಾಶ ಕಲ್ಪಿಸಿದೆ.