ಅಬುಧಾಬಿ: ಟೂರ್ನಿಯಲ್ಲಿ ಕೇವಲ ಒಂದು ಸೋಲು ಕಂಡು ಅಗ್ರಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಬಲಿಷ್ಠ ಮುಂಬೈ ತಂಡದ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ಯುವ ಆಟಗಾರರ ದಂಡನ್ನೇ ಹೊಂದಿರುವ ಡೆಲ್ಲಿ ತಂಡ ಆಡಿರುವ 6 ಪಂದ್ಯಗಳಲ್ಲಿ ಒಂದು ಸೋಲು ಹಾಗೂ 5 ಗೆಲುವಿನೊಂದಿಗೆ 10 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಇಂದಿನ ಪಂದ್ಯದಲ್ಲಿ ಡೆಲ್ಲಿ ಎರಡು ಬದಲಾವಣೆ ಮಾಡಿಕೊಂಡಿದ್ದು, ರಿಷಭ್ ಪಂತ್ ಜಾಗಕ್ಕೆ ಅಜಿಂಕ್ಯಾ ರಹಾನೆ ಹಾಗೂ ಹೆಟ್ಮೈರ್ ಜಾಗಕ್ಕೆ ಅಲೆಕ್ಸ್ ಕ್ಯಾರಿ ತಂಡ ಸೇರಿಕೊಂಡಿದ್ದಾರೆ.
ಇನ್ನು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಟೂರ್ನಿಯಲ್ಲಿ 6 ಪಂದ್ಯಗಳಲ್ಲಿ 2 ಸೋಲು ಹಾಗೂ 4 ಗೆಲುವಿನೊಂದಿಗೆ 8 ಅಂಕ ಪಡೆದು 2ನೇ ಸ್ಥಾನದಲ್ಲಿದೆ. ಮುಂಬೈ ಇಂದಿನ ಪಂದ್ಯದಲ್ಲಿ ಯಾವುದೇ ಬದಲಾವಣೆಯಿಲ್ಲದೆ ಕಣಕ್ಕಿಳಿಯುತ್ತಿದೆ.