ಕರ್ನಾಟಕ

karnataka

ETV Bharat / sports

ಐಪಿಎಲ್ 2020: ಡೆಲ್ಲಿ ವಿರುದ್ಧ ಟಾಸ್​ ಗೆದ್ದು ಬೌಲಿಂಗ್ ಆಯ್ದುಕೊಂಡ ಕೆಕೆಆರ್​ ನಾಯಕ ದಿನೇಶ್ ಕಾರ್ತಿಕ್​ - ಐಪಿಎಲ್ 2020 ಲೈವ್ ಅಪ್ಡೇಟ್ಸ್

ಎರಡು ತಂಡಗಳು ಒಂದೊಂದು ಬದಲಾವಣೆ ಮಾಡಿಕೊಂಡಿವೆ. ಡೆಲ್ಲಿ ತಂಡಕ್ಕೆ ಅಕ್ಷರ್ ಪಟೇಲ್ ಬದಲು ಅಶ್ವಿನ್​, ಕೆಕೆಆರ್​ಗೆ ಕುಲ್ದೀಪ್ ಬದಲು ರಾಹುಲ್ ತ್ರಿಪಾಠಿ ತಂಡಕ್ಕೆ ಸೇರಿಕೊಂಡಿದ್ದಾರೆ.

ಟಾಸ್​ ಗೆದ್ದು ಬೌಲಿಂಗ್ ಆಯ್ದುಕೊಂಡ ಕೆಕೆಆರ್
ಟಾಸ್​ ಗೆದ್ದು ಬೌಲಿಂಗ್ ಆಯ್ದುಕೊಂಡ ಕೆಕೆಆರ್

By

Published : Oct 3, 2020, 7:09 PM IST

ದುಬೈ: ಐಪಿಎಲ್​ನ 16 ನೇ ಪಂದ್ಯದಲ್ಲಿ ಟಾಸ್​ ಗೆದ್ದ ಕೆಕೆಆರ್​ ತಂಡದ ನಾಯಕ್ ದಿನೇಶ್ ಕಾರ್ತಿಕ್​​ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ಟೂರ್ನಿಯಲ್ಲಿ ಮೊದಲೆರಡು ಪಂದ್ಯಗಳನ್ನು ಗೆದ್ದು ಮುನ್ನುಗ್ಗಿದ್ದ ಡೆಲ್ಲಿ ತಂಡ ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧ ಮುಗ್ಗಿರಿಸಿತ್ತು. ಇದೀಗ ಬಲಿಷ್ಠ ಕೋಲ್ಕತ್ತಾ ತಂಡದ ವಿರುದ್ಧ ಗೆಲುವಿನ ಹಳಿಗೆ ಮರಳುವ ಆಲೋಚನೆಯಲ್ಲಿದೆ.

ಎರಡು ತಂಡಗಳು ಒಂದೊಂದು ಬದಲಾವಣೆ ಮಾಡಿಕೊಂಡಿವೆ. ಡೆಲ್ಲಿ ತಂಡಕ್ಕೆ ಅಕ್ಷರ್ ಪಟೇಲ್ ಬದಲು ಅಶ್ವಿನ್​, ಕೆಕೆಆರ್​ಗೆ ಕುಲ್ದೀಪ್ ಬದಲು ರಾಹುಲ್ ತ್ರಿಪಾಠಿ ತಂಡಕ್ಕೆ ಸೇರಿಕೊಂಡಿದ್ದಾರೆ.

ಇತ್ತ ಕೆಕೆಆರ್​ ಮೊದಲ ಪಂದ್ಯದ ಸೋಲಿನ ಬಳಿಕ ತಿರುಗಿ ಬಿದ್ದಿದ್ದು ನಂತರದ ಎರಡು ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ.

ಐಪಿಎಲ್ ಇತಿಹಾಸದಲ್ಲಿ ಉಭಯ ತಂಡಗಳು ಇಲ್ಲಿಯವರೆಗೆ 24 ಬಾರಿ ಮುಖಾಮುಖಿಯಾಗಿದ್ದು, 13ರಲ್ಲಿ ಕೆಕೆಆರ್​ ಗೆಲುವು ಸಾಧಿಸಿದ್ರೆ, 11 ಪಂದ್ಯದಲ್ಲಿ ಡೆಲ್ಲಿ ಜಯದ ನಗೆ ಬೀರಿದೆ.

ಡೆಲ್ಲಿ ಕ್ಯಾಪಿಟಲ್​: ಶಿಖರ್ ಧವನ್, ಪೃಥ್ವಿ ಶಾ, ಶ್ರೇಯಾಸ್ ಅಯ್ಯರ್ (ನಾಯಕ), ರಿಷಭ್ ಪಂತ್ (ವಾರ), ಶಿಮ್ರಾನ್ ಹೆಟ್ಮೈರ್​, ಮಾರ್ಕಸ್ ಸ್ಟೊಯ್ನಿಸ್, ಆರ್ ಅಶ್ವಿನ್, ಅಮಿತ್ ಮಿಶ್ರಾ, ಕಗಿಸೊ ರಬಾಡ, ಆನ್ರಿಚ್ ನಾರ್ಟ್ಜೆ, ಇಶಾಂತ್ ಶರ್ಮಾ

ಕೋಲ್ಕತ್ತಾ ನೈಟ್​ ರೈಡರ್ಸ್​: ಶುಬ್ಮನ್ ಗಿಲ್, ಸುನಿಲ್ ನರೈನ್, ನಿತೀಶ್ ರಾಣಾ, ದಿನೇಶ್ ಕಾರ್ತಿಕ್ (ನಾಯಕ ಮತ್ತು ವಿ.ಕೀ), ಇಯೊನ್ ಮಾರ್ಗನ್, ಆಂಡ್ರೆ ರಸ್ಸೆಲ್, ಪ್ಯಾಟ್ ಕಮ್ಮಿನ್ಸ್, ಶಿವಂ ಮಾವಿ, ಕಮಲೇಶ್ ನಾಗರ್ಕೋಟಿ, ರಾಹುಲ್ ತ್ರಿಪಾಠಿ, ವರುಣ್ ಚಕ್ರವರ್ತಿ

ABOUT THE AUTHOR

...view details