ಎರಡು ತಂಡಗಳು ಕೆಲವು ಹೊಸ ಆಟಗಾರರನ್ನು ತಂಡಕ್ಕೆ ಸೇರ್ಪಡೆಗೊಳಿಸಿಕೊಂಡಿದ್ದಾರೆ. ಕಳೆದ ಎರಡು ಆವೃತ್ತಿಗಳಲ್ಲಿ ಅಶ್ವಿನ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕರಾಗಿದ್ದ ಅವರು ಈ ಬಾರಿ ಡೆಲ್ಲಿ ಕ್ಯಾಪಿಟಲ್ ತಂಡದಲ್ಲಿ ಆಡುತ್ತಿದ್ದಾರೆ.
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ವಿದೇಶಿ ಆಟಗಾರರಾಗಿ ಮ್ಯಾಕ್ಸ್‌ವೆಲ್, ಪೂರನ್, ಜೋರ್ಡಾನ್ ಮತ್ತು ಕಾಟ್ರೆಲ್ ಕಣಕ್ಕಿಳಿಯುತ್ತಿದ್ದಾರೆ. ಕ್ರಿಸ್ ಗೇಲ್ ಈ ಪಂದ್ಯದಲ್ಲಿ ಅವಕಾಶ ಪಡೆಯುವಲ್ಲಿ ವಿಫಲರಾಗಿದ್ದಾರೆ.
ಅಂಡರ್ 19 ಸ್ಟಾರ್ ರವಿ ಬಿಷ್ಣೋಯ್ ಐಪಿಎಲ್ಗೆ ಪದಾರ್ಪಣೆ ಮಾಡಲಿದ್ದಾರೆ. ಆಶ್ಚರ್ಯಕರ ಸಂಗತಿಯೆಂದರೆ ಮಂದೀಪ್ ಸಿಂಗ್ ಬದಲಿಗೆ ಸರ್ಫರಾಜ್ ಖಾನ್ ಪಂಜಾಬ್ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಇನ್ನು ಕರ್ನಾಟಕದ ನಾಲ್ವರು ಆಟಗಾರರು ಇಂದಿನ ಪಂದ್ಯದಲ್ಲಿದ್ದಾರೆ.