ಕರ್ನಾಟಕ

karnataka

ETV Bharat / sports

ಐಪಿಎಲ್​ 2020: ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಸಿಎಸ್​ಕೆ...

ಐಪಿಎಲ್​ ಇತಿಹಾಸದಲ್ಲೇ ಮುಂಬೈ ಇಂಡಿಯನ್ಸ್​ ಹಾಗೂ ಚೆನ್ನೈ ಸೂಪರ್​ ಕಿಂಗ್ಸ್​​ ಯಶಸ್ವಿ ತಂಡ ಎಂಬ ಖ್ಯಾತಿಗಳಿಸಿವೆ. ಆದರೆ ಈ ಸಲ ಎರಡು ತಂಡಕ್ಕೂ ಕೆಲ ಅನುಭವಿ ಆಟಗಾರರ ಕೊರತೆ ಉಂಟಾಗಿದ್ದು, ಮುಂಬೈ ತಂಡದಲ್ಲಿ ಮಲಿಂಗಾ ಹಾಗೂ ಚೆನ್ನೈ ತಂಡದಲ್ಲಿ ರೈನಾ, ಹರ್ಭಜನ್​​ ಅನುಪಸ್ಥಿತಿ ಎದ್ದು ಕಾಡಲಿದೆ.

ಸಿಎಸ್​ಕೆ vsಮುಂಬೈ ಇಂಡಿಯನ್ಸ್​
ಸಿಎಸ್​ಕೆ vsಮುಂಬೈ ಇಂಡಿಯನ್ಸ್​

By

Published : Sep 19, 2020, 7:05 PM IST

Updated : Sep 19, 2020, 7:18 PM IST

ಅಬುಧಾಬಿ:ಬಹುನಿರೀಕ್ಷಿತ ಮಿಲಿಯನ್​ ಡಾಲರ್​ ಐಪಿಎಲ್​ ಟೂರ್ನಿ ಇಂದಿನಿಂದ ಆರಂಭಗೊಳ್ಳುತ್ತಿದ್ದು, ಮೊದಲ ಪಂದ್ಯದಲ್ಲಿ ಟಾಸ್​ ಗೆದ್ದ ಧೋನಿ ನೇತೃತ್ವದ ಸಿಎಸ್​ಕೆ ಮೊದಲು ಫೀಲ್ಡಿಂಗ್​ ಮಾಡಲು ನಿರ್ಧರಿಸಿದೆ.

ಐಪಿಎಲ್​ ಇತಿಹಾಸದಲ್ಲೇ ಮುಂಬೈ ಇಂಡಿಯನ್ಸ್​ ಹಾಗೂ ಚೆನ್ನೈ ಸೂಪರ್​ ಕಿಂಗ್ಸ್​​ ಯಶಸ್ವಿ ತಂಡ ಎಂಬ ಖ್ಯಾತಿಗಳಿಸಿವೆ. ಆದರೆ ಈ ಸಲ ಎರಡು ತಂಡಕ್ಕೂ ಕೆಲ ಅನುಭವಿ ಆಟಗಾರರ ಕೊರತೆ ಉಂಟಾಗಿದ್ದು, ಮುಂಬೈ ತಂಡದಲ್ಲಿ ಮಲಿಂಗಾ ಹಾಗೂ ಚೆನ್ನೈ ತಂಡದಲ್ಲಿ ರೈನಾ, ಹರ್ಭಜನ್​​ ಅನುಪಸ್ಥಿತಿ ಎದ್ದು ಕಾಡಲಿದೆ.

ಸಿಎಸ್​ಕೆ ತಂಡದಲ್ಲಿ ಅನುಭವಿ ಸ್ಪಿನ್ನರ್​ ಇಮ್ರಾನ್​​ ತಾಹೀರ್ ಹಾಗೂ ಡ್ವೇನ್​ ಬ್ರಾವೋ​ ಈ ಪಂದ್ಯದಲ್ಲಿ ಆಡುವ 11ರ ಬಳಗದಲ್ಲಿ ಅವಕಾಶ ಪಡೆದಿಲ್ಲದಿರುವು ಆಶ್ಚರ್ಯ ತಂದಿದೆ. ಫಾಫ್​ ಡು ಪ್ಲೆಸಿಸ್​, ವಾಟ್ಸನ್​, ಸ್ಯಾಮ್​ ಕರನ್​ ಹಾಗೂ ಲುಂಗಿ ಎಂಗಿಡಿ ಉದ್ಘಾಟನಾ ಪಂದ್ಯದಲ್ಲಿ ಕಣಕ್ಕಿಳಿಯುತ್ತಿದ್ದಾರೆ.

ಮುಂಬೈ ಇಂಡಿಯನ್ಸ್​ ಪರ ಕ್ವಿಂಟನ್​ ಡಿಕಾಕ್​, ನಥನ್​ ಕೌಲ್ಟರ್​ ನೈಲ್​, ಜೇಮ್ಸ್​ ಪ್ಯಾಟಿನ್​ಸನ್​, ಬೌಲ್ಟ್​ ಕಣಕ್ಕಿಳಿಯುತ್ತಿದ್ದಾರೆ. ಆಶ್ವರ್ಯವೆಂದರೆ ಯು ಬ್ಯಾಟ್ಸ್​ಮನ್​ ಇಶಾನ್​ ಕಿಶನ್​ ಬದಲಿ ಸೌರಬ್​ ತಿವಾರಿಯನ್ನು ಮುಂಬೈ ಕಣಕ್ಕಿಳಿಸುತ್ತಿದೆ.

ಚೆನ್ನೈ ಸೂಪರ್​ ಕಿಂಗ್ಸ್​: ಮಹೇಂದ್ರ ಸಿಂಗ್​ ಧೋನಿ(ಕ್ಯಾಪ್ಟನ್​, ವಿಕೆಟ್​ ಕೀಪರ್​), ಶೇನ್​ ವಾಟ್ಸನ್​, ಮುರಳಿ ವಿಜಯ್, ಅಂಬಾಟಿ ರಾಯುಡು, ಫಾಫ್ ಡು ಪ್ಲೆಸಿಸ್​, ಕೇದಾರ್​ ಜಾಧವ್​, ರವೀಂದ್ರ ಜಡೇಜಾ, ಲುಂಗಿ ಎಂಗಿಡಿ, ಸ್ಯಾಮ್​ ಕರನ್, ಪಿಯೂಷ್ ಚಾವ್ಲಾ, ದೀಪಕ್ ಚಹಾರ್​


ಮುಂಬೈ ಇಂಡಿಯನ್ಸ್​​: ರೋಹಿತ್​ ಶರ್ಮಾ(ಕ್ಯಾಪ್ಟನ್​), ಕ್ವಿಂಟನ್​ ಡಿಕಾಕ್​, ಜಸ್​ಪ್ರೀತ್​ ಬುಮ್ರಾ, ಕೃನಾಲ್​ ಪಾಂಡ್ಯ, ಸೂರ್ಯ ಕುಮಾರ್​ ಯಾದವ್​, ಹಾರ್ದಿಕ್​ ಪಾಂಡ್ಯ, ಕೀರನ್ ಪೊಲಾರ್ಡ್​, ರಾಹುಲ್ ಚಹಾರ್​​, ಸೌರಭ್ ತಿವಾರಿ, ನೇಥನ್​ ಕೌಲ್ಟರ್ ನೈಲ್​ ​,ಜೇಮ್ಸ್​ ಪ್ಯಾಟಿನ್ಸನ್​​​

Last Updated : Sep 19, 2020, 7:18 PM IST

ABOUT THE AUTHOR

...view details