ಕರ್ನಾಟಕ

karnataka

ETV Bharat / sports

ಐಪಿಎಲ್​ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ಲೇ ಆಫ್​ನಿಂದ ಹೊರಬಿದ್ದ ಸಿಎಸ್​ಕೆ - ಐಪಿಎಲ್ 2020

ಸಿಎಸ್​ಕೆ 2016 ಮತ್ತು 2017ರಲ್ಲಿ ನಿಷೇಧಕ್ಕೊಳಗಾಗಿತ್ತು. ಆ ಎರಡು ಆವೃತ್ತಿಗಳನ್ನು ಹೊರತು ಪಡಿಸಿದರೆ, ಉಳಿದ 2008 ರಿಂದ 2019ರವರೆಗೆ ಆಡಿದ ಎಲ್ಲ ಆವೃತ್ತಿಗಳಲ್ಲೂ 4ರ ಘಟ್ಟಕ್ಕೆ ಪ್ರವೇಶಿಸಿತ್ತು. ಇದರಲ್ಲಿ 8 ಬಾರಿ ಫೈನಲ್​ ಪ್ರವೇಶಿಸಿದ್ದರೆ, 3 ಬಾರಿ ಚಾಂಪಿಯನ್ ಪಟ್ಟ ಗಿಟ್ಟಿಸಿಕೊಂಡಿತ್ತು. ಅದರಲ್ಲೂ ಬ್ಯಾಕ್​ ಟು ಬ್ಯಾಕ್ ಪ್ರಶಸ್ತಿ ಗೆದ್ದ ಏಕೈಕ ತಂಡ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು.

ಚೆನ್ನೈ ಸೂಪರ್ ಕಿಂಗ್ಸ್​
ಚೆನ್ನೈ ಸೂಪರ್ ಕಿಂಗ್ಸ್​

By

Published : Oct 26, 2020, 4:49 PM IST

ಅಬುಧಾಬಿ: ಐಪಿಎಲ್ ಇತಿಹಾಸದಲ್ಲೇ ಆಡಿದ ಎಲ್ಲ ಆವೃತ್ತಿಗಳಲ್ಲೂ ಪ್ಲೇ ಆಫ್ ತಲುಪಿದ್ದ ಎಂಎಸ್​ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ 2020ರ ಟೂರ್ನಿಯಲ್ಲಿ ಪ್ಲೇ ಆಫ್​ ರೇಸ್​ನಿಂದ ಹೊರಬಿದ್ದ ಮೊದಲ ತಂಡ ಎನಿಸಿಕೊಂಡಿದೆ.

ಸಿಎಸ್​ಕೆ 2016 ಮತ್ತು 2017ರಲ್ಲಿ ನಿಷೇಧಕ್ಕೊಳಗಾಗಿತ್ತು. ಆ ಎರುಡು ಆವೃತ್ತಿಗಳನ್ನು ಹೊರತುಪಡಿಸಿದರೆ, ಉಳಿದ 2008ರಿಂದ 2019ರವರೆಗೆ ಆಡಿದ ಎಲ್ಲ ಆವೃತ್ತಿಗಳಲ್ಲೂ 4ರ ಘಟ್ಟಕ್ಕೆ ಪ್ರವೇಶಿಸಿತ್ತು. ಇದರಲ್ಲಿ 8 ಬಾರಿ ಫೈನಲ್​ ಪ್ರವೇಶಿಸಿದ್ದರೆ, 3 ಬಾರಿ ಚಾಂಪಿಯನ್ ಪಟ್ಟ ಗಿಟ್ಟಿಸಿಕೊಂಡಿತ್ತು. ಅದರಲ್ಲೂ ಬ್ಯಾಕ್​ ಟು ಬ್ಯಾಕ್ ಪ್ರಶಸ್ತಿ ಗೆದ್ದ ಏಕೈಕ ತಂಡ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು.

ಆದರೆ, 2020ರಲ್ಲಿ ಆವೃತ್ತಿಯಲ್ಲಿ ಆಡಿರುವ 12 ಪಂದ್ಯಗಳಿಂದ 4 ಗೆಲುವು ಹಾಗೂ 8 ಸೋಲು ಕಂಡಿದ್ದು, ಕೇವಲ 8 ಅಂಕ ಪಡಿದಿದೆ. ಪ್ಲೇ ಆಫ್ ಪ್ರವೇಶಿಸಬೇಕಾದರೆ ಕನಿಷ್ಠ 14 ಅಂಕಗಳ ಅಗತ್ಯವಿದೆ. ಆದರೆ ಧೋನಿ ಬಳಗ ಉಳಿದ 2 ಪಂದ್ಯಗಳನ್ನು ಗೆದ್ದರೂ ಅದರ ಅಂಕ 12 ಆಗಲಿದೆ. ರನ್​ರೇಟ್ ಕೂಡ ಎಲ್ಲ ತಂಡಗಳಿಗಿಂತ ಕಡಿಮೆ ಇರುವುದರಿಂದ ಸಿಎಸ್​ಕೆ ಅಧಿಕೃತವಾಗಿ ಹೊರಬಿದ್ದಂತಾಗಿದೆ. ಕೇವಲ ಕೊನೆಯ ಸ್ಥಾನಿ ಎಂಬ ಕಳಂಕವನ್ನು ಕಳೆದುಕೊಳ್ಳುವುದಕ್ಕೆ ಮಾತ್ರ ಸೆಣಸಾಡಬೇಕಿದೆ.

ಈಗಾಗಲೆ ಆರ್​ಸಿಬಿ, ಮುಂಬೈ ಹಾಗೂ ಡೆಲ್ಲಿ ತಂಡಗಳು ತಲಾ 14 ಅಂಕ ಹೊಂದಿದ್ದು ಅಗ್ರ ಮೂರು ಸ್ಥಾನಗಳನ್ನು ಅಲಂಕರಿಸಿವೆ. ಈ ಮೂರು ತಂಡಗಳು ಇನ್ನು ಒಂದು ಪಂದ್ಯ ಗೆದ್ದರೆ ಪ್ಲೇ ಆಫ್ ಖಚಿತಗೊಳ್ಳಲಿದೆ. ಇನ್ನು 4ನೇ ಸ್ಥಾನಕ್ಕಾಗಿ ಪಂಜಾಬ್, ರಾಜಸ್ಥಾನ್, ಕೋಲ್ಕತ್ತಾ ತಂಡಗಳು ಕಾದಾಡುತ್ತಿವೆ. ಈ 3 ತಂಡಗಳಲ್ಲೂ ಕೋಲ್ಕತ್ತಾ ತಂಡಕ್ಕೆ ಹೆಚ್ಚು ಅವಕಾಶವಿದೆ.

ABOUT THE AUTHOR

...view details