ಹೈದರಾಬಾದ್: ಚೆನ್ನೈ ಸೂಪರ್ ಕಿಂಗ್ಸ್ ಆಲ್‌ರೌಂಡರ್ ಸುರೇಶ್ ರೈನಾ ವೈಯಕ್ತಿಕ ಕಾರಣಗಳಿಂದಾಗಿ ಇಂಡಿಯನ್ ಪ್ರೀಮಿಯರ್ ಲೀಗ್‌ನ 13ನೇ ಆವೃತ್ತಿಯಿಂದ ಹೊರಗುಳಿದಿದ್ದಾರೆ.
ಸಿಎಸ್ಕೆ ತಂಡಕ್ಕೆ ಮತ್ತೊಂದು ಆಘಾತ: ಐಪಿಎಲ್ನಿಂದ ಹೊರ ಬಂದ ಸುರೇಶ್ ರೈನಾ! - ಸಿಎಸ್ಕೆ ತಂಡಕ್ಕೆ ಮತ್ತೋಂದು ಆಘಾತ
ಸಿಎಸ್ಕೆ ತಂಡದ ಆಲ್‌ರೌಂಡರ್ ಸುರೇಶ್ ರೈನಾ ವೈಯಕ್ತಿಕ ಕಾರಣಗಳಿಂದಾಗಿ ಇಂಡಿಯನ್ ಪ್ರೀಮಿಯರ್ ಲೀಗ್‌ನ 13ನೇ ಆವೃತ್ತಿಯಿಂದ ಹೊರಗುಳಿದಿದ್ದಾರೆ.
ಐಪಿಎಲ್ನಿಂದ ಹೊರಗುಳಿದ ಸುರೇಶ್ ರೈನಾ
ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ರೈನಾ, ಯುಎಇಯಿಂದ ಭಾರತಕ್ಕೆ ಮರಳಿದ್ದಾರೆ.
ರೈನಾ ಯುಎಇಯಿಂದ ನಿರ್ಗಮಿಸುವ ಬಗ್ಗೆ ಮಾತನಾಡಿದ ಸಿಎಸ್ಕೆ ಸಿಇಒ ಕೆ.ಎಸ್.ವಿಶ್ವನಾಥನ್, ಸುರೇಶ್ ರೈನಾ ವೈಯಕ್ತಿಕ ಕಾರಣಗಳಿಗಾಗಿ ಭಾರತಕ್ಕೆ ಮರಳಿದ್ದಾರೆ ಮತ್ತು ಈ ಸೀಸನ್ನಲ್ಲಿ ಅವರು ಲಭ್ಯವಿರುವುದಿಲ್ಲ. ಚೆನ್ನೈ ಸೂಪರ್ ಕಿಂಗ್ಸ್ ಈ ಸಮಯದಲ್ಲಿ ಸುರೇಶ್ ರೈನಾ ಮತ್ತು ಅವರ ಕುಟುಂಬಕ್ಕೆ ಸಂಪೂರ್ಣ ಬೆಂಬಲ ನೀಡುತ್ತದೆ ಎಂದಿದ್ದಾರೆ.