ದುಬೈ: ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದ ವೇಳೆ ಅನುಮಾನಾಸ್ಪದ ಬೌಲಿಂಗ್ ಶೈಲಿ ಅನುಸರಿಸಿದ ಆರೋಪಕ್ಕೆ ಗುರಿಯಾಗಿರುವ ಸುನೀಲ್ ನರೈನ್ ಜಾಗಕ್ಕೆ ಕ್ರಿಸ್ ಗ್ರೀನ್ರನ್ನು ಕೆಕೆಆರ್ ಆಯ್ಕೆ ಮಾಡಿದೆ. ಆಶ್ಚರ್ಯ ಎಂದರೆ ಎಂದರೆ ಗ್ರೀನ್ ಅವರು ಪ್ರತಿನಿಧಿಸುವ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯಿಂದಲೇ ಈಗಾಗಲೆ ಅನುಮಾನಾಸ್ಪದ ಬೌಲಿಂಗ್ ಆರೋಪ ಎದುರಿಸುತ್ತಿದ್ದಾರೆ.
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದ ವೇಳೆ ನರೈನ್ ಜಾಗಕ್ಕೆ ಕ್ರಿಸ್ ಗ್ರೀನ್ ಕೆಕೆಆರ್ ತಂಡದ ಪರ ಕಣಕ್ಕಿಳಿದಿದ್ದರು. ಆದರೆ, ಕಳೆದ ವರ್ಷ ಬಿಬಿಎಲ್ ಲೀಗ್ ವೇಳೆ, ಅಂಪೈರ್ ಅವರಿಂದ ಅಕ್ರಮ ಬೌಲಿಂಗ್ ಆ್ಯಕ್ಷನ್ ವರದಿಯಾದ ಬಳಿಕ ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್ ಅವರನ್ನು 90 ದಿನಗಳ ಕಾಲ ಬೌಲಿಂಗ್ನಿಂದ ನಿಷೇಧಿಸಿದೆ. ಆದರೆ ಅದೇ ಬೌಲರ್ನನ್ನು ಕೆಕೆಆರ್ ಕಣಕ್ಕಿಳಿಸುವ ಮೂಲಕ ಎಲ್ಲರ ಅಚ್ಚರಿಗೆ ಕಾರಣವಾಗಿದೆ.
ಬಿಗ್ಬ್ಯಾಶ್ನಲ್ಲಿ ಅಕ್ರಮ ಬೌಲಿಂಗ್ ಶೈಲಿಯಂದು ವರದಿಯಾದ ಬಳಿಕ ದಕ್ಷಿಣ ಆಫ್ರಿಕಾ ಮೂಲದ ಆಸೀಸ್ ಕ್ರಿಕೆಟಿಗ ಆಸ್ಟ್ರೇಲಿಯಾದ ರಾಷ್ಟ್ರೀಯ ಕ್ರಿಕೆಟ್ ಕೇಂದ್ರದಲ್ಲಿ ಪರೀಕ್ಷೆಗಾಗಿ ಒಳಗಾಗಿದ್ದರು. ಜನವರಿ 5 ರಂದು ನಡೆದ ಪರೀಕ್ಷೆಯ ಫಲಿತಾಂಶ ಗ್ರೀನ್ ಬೌಲಿಂಗ್ ಶೈಲಿ ಕಾನೂನುಬಾಹಿರ ಎಂದು ಎತ್ತಿ ಹಿಡಿದಿತ್ತು. ನಂತರ ಅವರನ್ನು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯ ಯಾವುದೇ ಕ್ರಿಕೆಟ್ನಲ್ಲಿ ಬೌಲಿಂಗ್ ಮಾಡದಂತೆ ಅಮಾನತುಗೊಳಿಸಲಾಗಿತ್ತು.
ಆದರೆ, ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಕ್ರಿಸ್ ಗ್ರೀನ್ ಗಯಾನ ಅಮೆಜಾನ್ ವಾರಿಯರ್ಸ್ ತಂಡದ ನಾಯಕನಾಗಿ ಹಾಗೂ ಪ್ರಧಾನ ಬೌಲರ್ ಆಗಿ ಗುರುತಿಸಿಕೊಂಡಿದ್ದರಿಂದ 2019ರ ಡಿಸೆಂಬರ್ನಲ್ಲಿ ನಡೆದ ಹರಾಜಿನಲ್ಲಿ ಕೆಕೆಆರ್ 20 ಲಕ್ಷ ರೂ.ಗೆ ಖರೀದಿಸಿತ್ತು.
ಅಕ್ಟೋಬರ್ 10 ರಂದು ನರೈಗೆ ವಾರ್ನಿಂಗ್ ಪಡೆದ ನಂತರ ಕಳೆದ ಎರಡು ಪಂದ್ಯಗಳಿಂದ ತಂಡದಿಂದ ಹೊರಗುಳಿದಿದ್ದಾರೆ. ಈಗಾಗಲೆ ತಮ್ಮ ಬೌಲಿಂಗ್ ಶೈಲಿಯನ್ನು ಸರಿಪಡಿಸಿಕೊಳ್ಳಲು ಕಠಿಣ ಪರಿಶ್ರಮ ಪಡುತ್ತಿದ್ದಾರೆ ಎಂದು ಕೆಕೆಆರ್ ವರದಿ ಮಾಡಿದೆ.