ಅಬುಧಾಬಿ: ಸ್ಟಾರ್ ಸ್ಪಿನ್ನರ್ ಯಜುವೇಂದ್ರ ಚಹಾಲ್ ಮತ್ತು ವೇಗಿ ಇಸುರು ಉದಾನ ಬೌಲಿಂಗ್ ದಾಳಿಗೆ ತತ್ತರಿಸಿದ ರಾಜಸ್ಥಾನ್ ರಾಯಲ್ಸ್ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 154 ರನ್ಗಳಿಸಿದೆ.
ಟಾಸ್ ಗೆದ್ದ ತಕ್ಷಣ ಬ್ಯಾಟಿಂಗ್ ಆಯ್ಕೆ ಆರ್ಆರ್ ನಾಯಕ ಸ್ಟಿವ್ ಸ್ಮಿತ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ ಸ್ವತಃ ಸ್ಮಿತ್ 5 ರನ್ಗಳಿಸಿ 3ನೇ ಓವರ್ನಲ್ಲಿ ಉದಾನಗೆ ವಿಕೆಟ್ ಒಪ್ಪಿಸಿದರು. ಇವರನ ಬೆನ್ನಲ್ಲೇ 12 ಎಸೆತಗಳಲ್ಲಿ 22 ರನ್ಗಳಿಸಿದ್ದ ಬಟ್ಲರ್ ಸೈನಿಗೂ, 4 ರನ್ಗಳಿಸಿದ ಸಂಜು ಸಾಮ್ಸನ್ ಚಹಾಲ್ಗೆ ವಿಕೆಟ್ ಒಪ್ಪಿಸಿದರು.
ಆದರೆ ನಾಲ್ಕನೇ ವಿಕೆಟ್ಗೆ ಒಂದಾದ ರಅಬಿನ್ ಉತ್ತಪ್ಪ ಹಾಗೂಯುವ ಬ್ಯಾಟ್ಸ್ಮನ್ ಮಹಿಪಾಲ್ ಲಾಮ್ರರ್ 39 ರನ್ಗಳ ಜೊತೆಯಾಟ ನಡೆಸಿ ಚೇತರಿಕೆ ನೀಡಿದರು. ರನ್ಗಳಿಸಲು ಪರದಾಡಿದ ಉತ್ತಪ್ಪ 22 ಎಸೆತಗಳಲ್ಲಿ 17 ರನ್ಗಳಿಸಿ ಚಹಾಲ್ಗೆ 2ನೇ ಬಲಿಯಾದರು.