ಕೋಲ್ಕತ್ತಾ:ಬಹು ನಿರೀಕ್ಷಿತ 2020 ಐಪಿಎಲ್ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಒಟ್ಟು 62 ಅಟಗಾರರು ವಿವಿಧ ತಂಡಗಳಿಗೆ ಬಿಕರಿ ಆಗಿದ್ದಾರೆ. 8 ತಂಡಗಳು 62 ಆಟಗಾರರನ್ನು ಖರೀದಿಸಲು ಒಟ್ಟು 140.3 ಕೋಟಿ ರೂಪಾಯಿ ಖರ್ಚು ಮಾಡಿವೆ.
ಯಾವ ತಂಡಕ್ಕೆ ಯಾವ ಆಟಗಾರರು:
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಆರನ್ ಫಿಂಚ್, ಕ್ರಿಸ್ ಮೋರಿಸ್, ಡೇಲ್ ಸ್ಟೈನ್, ಕೇನ್ ರಿಚರ್ಡ್ಸನ್, ಜೋಶುವ ಫಿಲಿಪ್ಪೆ, ಇಸುರು ಉದಾನ, ಪವನ್ ದೇಶಪಾಂಡೆ, ಶಹಬಾಜ್ ಅಹಮದ್.
ರಾಜಸ್ಥಾನ್ ರಾಯಲ್ಸ್:ರಾಬಿನ್ ಉತ್ತಪ್ಪ, ಜಯದೇವ್ ಉನದ್ಕಟ್, ಯಶಸ್ವಿ ಜೈಸ್ವಾಲ್, ಆಕಾಶ್ ಸಿಂಗ್, ಅನುಜ್ ರಾವತ್, ಅಂಡ್ರಿವ್ ಟೈ, ಕಾರ್ತಿಕ್ ತ್ಯಾಗಿ, ಡೇವಿಡ್ ಮಿಲ್ಲರ್, ಒಶಾನೆ ಥಾಮಸ್, ಅನಿರುಧ್ ಜೋಶಿ, ಟಾಮ್ ಕರನ್.
ಕಿಂಗ್ಸ್ ಇಲೆವೆನ್ ಪಂಜಾಬ್: ಗ್ಲೇನ್ ಮ್ಯಾಕ್ಸ್ವೆಲ್, ಶೆಲ್ಡಾನ್ ಕಾಟ್ರೆಲ್, ದೀಪಕ್ ಹೂಡಾ, ಇಶಾನ್ ಪೊರೆಲ್, ರವಿ ಬಿಶ್ನೋಯಿ, ಜಿಮ್ಮಿ ನಿಶಾಮ್, ಕ್ರಿಸ್ ಜಾರ್ಡನ್, ತಜಿಂದರ್ ಸಿಂಗ್, ಪ್ರಭ್ಸಿಮ್ರಾನ್ ಸಿಂಗ್.