ಹೈದರಾಬಾದ್:ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆಗೆ ಇನ್ನು ಕೇವಲ 9 ದಿನ ಮಾತ್ರ ಬಾಕಿ ಇದ್ದು, ಬಿಡ್ಡಿಂಗ್ ಮೇಲೆ ಕ್ರಿಕೆಟ್ ಅಭಿಮಾನಿಗಳ ಲೆಕ್ಕಾಚಾರ ಜೋರಾಗಿ ನಡೆಯುತ್ತಿದೆ.
ಡಿ.19ರಂದು ಕೋಲ್ಕತ್ತಾದಲ್ಲಿ ಹರಾಜು ನಡೆಯಲಿದ್ದು, ಫ್ರಾಂಚೈಸಿಗಳು ಕೆಲ ಆಟಗಾರರ ಖರೀದಿಗೆ ಜಿದ್ದಿಗೆ ಬೀಳೋದು ಗ್ಯಾರಂಟಿ. ಅಂತಹ ಪ್ರಮುಖ ಐದು ಆಟಗಾರರು ಇಲ್ಲಿದ್ದಾರೆ.
1. ಕ್ರಿಸ್ ಲಿನ್:
ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಅಚ್ಚರಿಯ ತೀರ್ಮಾನದಲ್ಲಿ ಈ ಬಾರಿ ಬಿಗ್ ಹಿಟ್ಟರ್ ಕ್ರಿಸ್ ಲಿನ್ರನ್ನು ಕೈಬಿಟ್ಟಿತ್ತು. ನಂತರದಲ್ಲಿ ಟಿ-10 ಲೀಗ್ನಲ್ಲಿ ಕ್ರಿಸ್ ಲಿನ್ ಅಬ್ಬರ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಹೀಗಾಗಿ ಲಿನ್ ಬೇಡಿಕೆ ಹೆಚ್ಚಾಗಿದೆ.
2.ಪ್ಯಾಟ್ ಕಮಿನ್ಸ್:
ಈಗಾಗಲೇ 25 ಟಿ-20 ಪಂದ್ಯ ಆಡಿರುವ ಕಮಿನ್ಸ್ 32 ವಿಕೆಟ್ ಕಿತ್ತಿದ್ದಾರೆ. ಯಾವುದೇ ತಂಡಕ್ಕೆ ಹೋದರೂ ಬೌಲಿಂಗ್ ವಿಭಾಗದ ಬಲವನ್ನು ಕಮಿನ್ಸ್ ಹೆಚ್ಚಿಸುವುದು ಸುಳ್ಳಲ್ಲ. ನಂ.1 ಟೆಸ್ಟ್ ಬೌಲರ್ ಪ್ಯಾಟ್ ಕಮಿನ್ಸ್ ತಮ್ಮ ಮೂಲ ಬೆಲೆಯನ್ನು ₹2 ಕೋಟಿಗೆ ನಿಗದಿಪಡಿಸಿದ್ದಾರೆ.
ಆಸೀಸ್ ವೇಗಿ ಪ್ಯಾಟ್ ಕಮಿನ್ಸ್ 3. ಗ್ಲೆನ್ ಮ್ಯಾಕ್ಸ್ವೆಲ್:
ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ಟಿ-20 ಮಾದರಿ ಅತ್ಯಂತ ಅಪಾಯಕಾರಿ ಬ್ಯಾಟ್ಸ್ಮನ್. 2019ರ ಐಪಿಎಲ್ನಿಂದ ದೂರ ಉಳಿದಿದ್ದ ಮ್ಯಾಕ್ಸಿ ಈ ಬಾರಿ ತಮ್ಮ ಮೂಲ ಬೆಲೆಯನ್ನು ₹2 ಕೋಟಿಗೆ ನಿಗದಿ ಮಾಡಿದ್ದಾರೆ. ಚುಟುಕು ಮಾದರಿ ಸೂಕ್ತವಾದ ಬ್ಯಾಟಿಂಗ್ ಶೈಲಿ ಹೊಂದಿರುವ ಮ್ಯಾಕ್ಸ್ವೆಲ್ ಖರೀದಿಗೆ ಈ ಬಾರಿ ಪೈಪೋಟಿ ಎದುರಾಗಲಿದೆ.
ಬಿಗ್ ಹಿಟ್ಟರ್ ಗ್ಲೆನ್ ಮ್ಯಾಕ್ಸ್ವೆಲ್ 4. ಇಯಾನ್ ಮಾರ್ಗನ್:
ನ್ಯೂಜಿಲ್ಯಾಂಡ್ ವಿರುದ್ಧ ಇತ್ತೀಚೆಗೆ ಮುಕ್ತಾಯವಾದ ಟಿ-20 ಸರಣಿಯಲ್ಲಿ ಗರಿಷ್ಠ ರನ್ ಗಳಿಸಿದ್ದ ಮಾರ್ಗನ್ ಟಿ10 ಲೀಗ್ನಲ್ಲೂ ಮಿಂಚಿದ್ದರು. 2019 ವಿಶ್ವಕಪ್ ವಿಜೇತ ತಂಡದ ನಾಯಕ ಇಯಾನ್ ಮಾರ್ಗನ್ ಚುಟುಕು ಪಂದ್ಯ ಹೇಳಿ ಮಾಡಿಸಿದ ಆಟಗಾರ. ಐಪಿಎಲ್ ಹರಾಜಿನಲ್ಲಿ ಈ ಬಾರಿ ದೊಡ್ಡ ಮೊತ್ತಕ್ಕೆ ಬಿಕರಿಯಾದರೆ ಅಚ್ಚರಿಯಿಲ್ಲ.
ಆಂಗ್ಲರ ತಂಡದ ನಾಯಕ ಇಯಾನ್ ಮಾರ್ಗನ್ 5. ಟಾಮ್ ಬ್ಯಾಂಟನ್:
2017ರಲ್ಲಿ ಸಾಮರ್ಸೆಟ್ ಪರ ಟಿ-20 ಮಾದರಿಗೆ ಪದಾರ್ಪಣೆ ಮಾಡಿರುವ ಟಾಮ್ ಬ್ಯಾಂಟನ್ , ಇಂಗ್ಲೆಂಡ್ ಪರ 17 ಟಿ-20 ಪಂದ್ಯ ಆಡಿದ್ದಾರೆ. 17 ಟಿ-20 ಪಂದ್ಯದಲ್ಲಿ ಬ್ಯಾಂಟನ್ 591 ರನ್ ಕಲೆಹಾಕಿದ್ದಾರೆ. ವಿಕೆಟ್ ಕೀಪರ್, ಬ್ಯಾಟ್ಸ್ಮನ್ ಆಟಗಾರ ಬ್ಯಾಂಟನ್ ಟಿ-20 ಮಾದರಿಯಲ್ಲಿ ಒಂದು ಶತಕ ನಾಲ್ಕು ಅರ್ಧಶತಕ ಸಿಡಿಸಿದ್ದಾರೆ.
ಟಿ20 ಸ್ಪೆಷಲಿಸ್ಟ್ ಟಾಮ್ ಬ್ಯಾಂಟನ್