ಕರ್ನಾಟಕ

karnataka

ETV Bharat / sports

2020ರ ಐಪಿಎಲ್​​​​ ಹರಾಜು ಪ್ರಕ್ರಿಯೆಯಲ್ಲಿ 14 ವರ್ಷದ ಅಫ್ಘನ್​​ ಪ್ಲೇಯರ್​​! - 14 ವರ್ಷದ ನೂರ್​ ಅಹ್ಮದ್

ಭಾರತ ಅಂಡರ್​ 19 ವಿರುದ್ಧ ನಡೆದ ಏಕದಿನ ಸರಣಿಯಲ್ಲಿ 9 ವಿಕೆಟ್​ ಪಡೆದು ಮಿಂಚಿದ್ದ ಅಫ್ಘಾನಿಸ್ತಾನದ 14 ವರ್ಷದ ಯುವ ಬೌಲರ್​ ನೂರ್​ ಅಹ್ಮದ್​ ಐಪಿಎಲ್​ ಹರಾಜು ಪ್ರಕ್ರಿಯೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

IPL 2020
4-year-old Noor Ahmad

By

Published : Dec 14, 2019, 2:37 PM IST

ಮುಂಬೈ: 2020ರ ಐಪಿಎಲ್​ಗಾಗಿ ಡಿಸೆಂಬರ್​ 19ರಂದು ಹರಾಜು ಪ್ರಕ್ರಿಯೆ ನಡೆಯಲಿದ್ದು, ಈಗಾಗಲೇ ಭಾರತೀಯರು ಸೇರಿದಂತೆ ವಿವಿಧ ದೇಶಗಳ ಸುಮಾರು 332 ಆಟಗಾರರು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ.

ಟಿ-20 ಕ್ರಿಕೆಟ್​ನ ಶ್ರೀಮಂತ ಲೀಗ್​ಗಳಲ್ಲಿ ಮೊದಲ ಸ್ಥಾನದಲ್ಲಿರುವ ಐಪಿಎಲ್​ ಆಡುವುದಕ್ಕೆ ವಿದೇಶಿ ಕ್ರಿಕೆಟಿಗರು ಹಾತೊರೆಯುತ್ತಿದ್ದಾರೆ. ಎಲ್ಲಾ ಮಾದರಿಯ ಕ್ರಿಕೆಟ್​ನಲ್ಲಿ ಬಹುಬೇಗ ಬೆಳೆಯುತ್ತಿರುವ ಅಫ್ಘಾನಿಸ್ತಾನ ತಂಡದ ಕೆಲವು ಆಟಗಾರರು ಐಪಿಎಲ್​ನಲ್ಲಿ ಈಗಾಗಲೇ ಕಾಣಿಸಿಕೊಂಡು ಯಶಸ್ವಿಯೂ ಅಗಿದ್ದಾರೆ. ಇದೀಗ ಅಂಡರ್​ 19 ತಂಡದಲ್ಲಿ ಆಡುತ್ತಿರುವ 14 ವರ್ಷದ ಪ್ರತಿಭೆ ನೂರ್​ ಅಹ್ಮದ್​ ಹರಾಜು ಪ್ರಕ್ರಿಯೆಯಲ್ಲಿ ಇದ್ದು, ಆಶ್ಚರ್ಯ ಮೂಡಿಸಿದ್ದಾರೆ.

ಈಗಾಗಲೇ ಐಪಿಎಲ್​ನಲ್ಲಿ ಆಪ್ಘಾನಿಸ್ತಾನ ಸ್ಪಿನ್​ ದಿಗ್ಗಜರಾದ ರಶೀದ್ ಖಾನ್, ಮುಜೀಬ್ ಉರ್ ರೆಹಮಾನ್, ಮೊಹಮ್ಮದ್ ನಬಿ ಐಪಿಎಲ್​ನಲ್ಲಿ ಕಾಯಂ ಸದಸ್ಯರಾಗಿದ್ದಾರೆ. ಇವರ ಸಾಲಿಗೆ 14 ವರ್ಷದ ಚೈನಾಮೆನ್ ಸ್ಪಿನ್ನರ್ ನೂರ್ ಅಹ್ಮದ್ ಕೂಡ ಸೇರ್ಪಡೆಗೊಳ್ಳಲು ತುದಿಗಾಲಿನಲ್ಲಿ ನಿಂತಿದ್ದಾರೆ.

ನೂರ್​ ಅಹ್ಮದ್​ ಇತ್ತೀಚೆಗೆ ಭಾರತ ಅಂಡರ್​ 19 ತಂಡದ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ 9 ವಿಕೆಟ್​ ಪಡೆದು ಮಿಂಚಿದ್ದರು. ಈ ಸರಣಿಯನ್ನು ಭಾರತ ತಂಡ 3-2ರಲ್ಲಿ ಗೆದ್ದುಕೊಂಡಿತ್ತು.

ABOUT THE AUTHOR

...view details