ಹೈದರಾಬಾದ್: ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ರನ್ಗಳ ಸುರಿಮಳೆ ಸುರಿಸಿದ ಸನ್ರೈಸರ್ಸ್ ಈ ಪಂದ್ಯದಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿತು.
ಆರ್ಸಿಬಿ - ಎಸ್ಆರ್ಹೆಚ್ ಪಂದ್ಯದಲ್ಲಿ ಸೃಷ್ಟಿಯಾದವು ಅಪರೂಪದ ದಾಖಲೆಗಳು - warner
ಆರ್ಸಿಬಿ ವಿರುದ್ಧ ಬರೋಬ್ಬರಿ 118 ರನ್ಗಳ ಜಯ ಸಾಧಿಸಿದ ಸನ್ರೈಸರ್ಸ್ ಈ ಪಂದ್ಯದಲ್ಲಿ ಹಲವಾರು ರೆಕಾರ್ಡ್ಗಳನ್ನು ಬ್ರೇಕ್ ಆಗಿವೆ
ಆರ್ಸಿಬಿ-ಎಸ್ಆರ್ಹೆಚ್
ಹೈದರಾಬಾದಿನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸನ್ರೈಸರ್ಸ್ ತಂಡ ಆರ್ಸಿಬಿ ವಿರುದ್ಧ ಬರೋಬ್ಬರಿ 118 ರನ್ಗಳ ಜಯಸಾಧಿಸಿತು. ಈ ಪಂದ್ಯದಲ್ಲಿ ಓಪನರ್ ಇಬ್ಬರು ಬ್ಯಾಟ್ಸ್ಮನ್ಗಳು ಶತಕ ಸಿಡಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಈ ಪಂದ್ಯದಲ್ಲಿ ಗಮನ ಸೆಳೆದ ಪ್ರಮುಖ ಅಂಕಿ-ಅಂಶಗಳು
- ಆರಂಭಿಕರಾಗಿ ಕಣಕ್ಕಿಳಿದಿದ್ದ ವಾರ್ನರ್(100) ಹಾಗೂ ಬೈರ್ಸ್ಟೋವ್(117) ರನ್ಗಳಿಸಿದರು. ಇದು ಟಿ20 ಇತಿಹಾಸದಲ್ಲೇ ಮೊದಲ ಬಾರಿಗೆ ಆರಂಭಿಕರಿಬ್ಬರು ಶತಕ ದಾಖಲಿಸಿದರು.
- ಟಿ-20 ಇತಿಹಾಸದಲ್ಲಿ ವಾರ್ನರ್ ಹಾಗೂ ಬೈರ್ಸ್ಟೋವ್ ಒಂದೇ ಪಂದ್ಯದಲ್ಲಿ ಶತಕ ದಾಖಲಿಸಿದ 4 ನೇ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
- ವಾರ್ನರ್ ಹಾಗೂ ಬೈರ್ಸ್ಟೋವ್ರ ಶತಕ ಐಪಿಎಲ್ನಲ್ಲಿ ದಾಖಲಾದ 2ನೇ ಜೋಡಿ ಶತಕವಾಯಿತು. ಇದಕ್ಕೂ ಮೊದಲು 2016 ರಲ್ಲಿ ಎಬಿಡಿ ಹಾಗೂ ಕೊಹ್ಲಿ ಗುಜರಾತ್ ಲಯನ್ಸ್ ವಿರುದ್ಧ ಜೋಡಿ ಶತಕ ಸಿಡಿಸಿದ್ದರು.
- ವಾರ್ನರ್-ಬೈರ್ಸ್ಟೋವ್ ಜೋಡಿ ಈ ಪಂದ್ಯದಲ್ಲಿ ಮೊದಲ ವಿಕೆಟ್ಗೆ 185 ರನ್ಗಳ ದಾಖಲೆ ಜೊತೆಯಾಟ ನೀಡಿದರು. ಇದಕ್ಕೂ ಮೊದಲು ಗಂಭೀರ್ ಹಾಗೂ ಕ್ರಿಸ್ಲಿನ್ 2017ರಲ್ಲಿ 184 ರನ್ಗಳ ಜೊತೆಯಾಟ ನೀಡಿ ದಾಖಲೆ ನಿರ್ಮಿಸಿದ್ದರು.
- ವಾರ್ನರ್-ಬೈರ್ಸ್ಟೋವ್ ಜೋಡಿ ಸತತ ಮೂರು ಪಂದ್ಯಗಳಲ್ಲಿ ಶತಕದ ಜೊತೆಯಾಟ ನೀಡಿದ ಮೊದಲ ಆರಂಭಿಕ ಜೋಡಿ ಎಂಬ ದಾಖಲೆಗೆ ಪಾತ್ರರಾದರು. ಈ ಜೋಡಿ ಕೆಕೆಆರ್ ವಿರುದ್ಧದ ಮೊದಲ ಪಂದ್ಯದಲ್ಲಿ 118, ಆರ್ಆರ್ ವಿರುದ್ಧದ ಪಂದ್ಯದಲ್ಲಿ 103 ಹಾಗೂ ಆರ್ಸಿಬಿ ವಿರುದ್ಧ 185 ರನ್ಗಳ ಜೊತೆಯಾಟ ನೀಡಿದರು.
- ವಾರ್ನರ್ 10 ನೇ ಬಾರಿ ಮೊದಲ ವಿಕೆಟ್ಗೆ ಶತಕದ ಜೊತೆಯಾಟವಾಡಿದ ಬ್ಯಾಟ್ಸ್ಮನ್ ಎನಿಸಿಕೊಂಡರು. ಈ ಮೂಲಕ ಮೊದಲ ಸ್ಥಾನದಲ್ಲಿದ್ದ ಕ್ರಿಸ್ ಗೇಲ್(9) ಅವರನ್ನು ಹಿಂದಿಕ್ಕಿದರು. ಜೊತೆಗೆ 18 ಬಾರಿ ಯಾವುದೇ ವಿಕೆಟ್ಗೆ ಶತಕದ ಜೊತೆಯಾಟ ನಡೆಸಿದ ಬ್ಯಾಟ್ಸ್ಮನ್ ಎಂಬ ದಾಖಲೆಯನ್ನು ಗೇಲ್ ರೊಂದಿಗೆ ಹಂಚಿಕೊಂಡರು.
- 2002 ರಲ್ಲಿ ಜನಿಸಿರುವ16 ವರ್ಷದ ಪ್ರಯಾಸ್ ರಾಯ್ ಬರ್ಮನ್ ಐಪಿಎಲ್ಗೆ ಪದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರ ಎಂಬ ಶ್ರೇಯಕ್ಕೆ ಪಾತ್ರರಾದರು. ಇದಕ್ಕು ಮೊದಲು ಅಫ್ಘಾನಿಸ್ತಾನದ ಮುಜೀಬ್ ಉರ್ ರೆಹಮಾನ್ ಐಪಿಎಲ್ಗೆ ಪದಾರ್ಪಣೆ ಮಾಡಿದ ಕಿರಿಯ ಆಟಗಾರನಾಗಿದ್ದರು.
- ಈ ಪಂದ್ಯದಲ್ಲಿ ಆರ್ಸಿಬಿ 113 ರನ್ಗಳಿಗೆ ಆಲೌಟ್ ಆಗುವ ಮೂಲಕ ಎದುರಾಳಿ ಬ್ಯಾಟ್ಸ್ಮ್ಸನ್ನೊಬ್ಬನ ಮೊತ್ತವನ್ನು ತಲುಪಲಾಗದೇ ಸೋಲೊಪ್ಪಿಕೊಂಡಿತು. ಬ್ಯೈರ್ಸ್ಟೋವ್ 114 ರನ್ಗಳಿಸುವ ಮೂಲಕ ಆರ್ಸಿಬಿಯ ಒಟ್ಟು ಮೊತ್ತಕ್ಕಿಂತ 1ರನ್ ಲೀಡ್ ಪಡೆದುಕೊಂಡರು. ಇದಕ್ಕೂ ಮುನ್ನ ಪುಣೆ ವಾರಿಯರ್ಸ್ 133ಕ್ಕೆ( ಗೇಲ್ ವಿರುದ್ಧ 175) ಗುಜರಾತ್ ಲಯನ್ಸ್ 104 ವಿಲಿಯರ್ಸ್ 129, ಕೊಹ್ಲಿ 109) ಕ್ಕೆ ಆಲೌಟ್ ಆಗುವ ಮೂಲಕ ಎದುರಾಳಿ ಬ್ಯಾಟ್ಸ್ಮನ್ ಸ್ಕೋರಿಗಿಂತ ಕಡಿಮೆ ಮೊತ್ತಕ್ಕೆ ಆಲೌಟ್ ಆದ ಕುಖ್ಯಾತಿಗೆ ಪಾತ್ರವಾಗಿದ್ದವು.
Last Updated : Apr 1, 2019, 3:59 PM IST