ಚೆನ್ನೈ:ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು ಶನಿವಾರ ಸಂಜೆ ಆರು ಗಂಟೆಗೆ ಚೆನ್ನೈನ ಎಂ.ಎ.ಚಿದಂಬರಂ ಸ್ಟೇಡಿಯಂನಲ್ಲಿ ಬಲಿಷ್ಠ ತಂಡಗಳಾದ ಆರ್ಸಿಬಿ ಹಾಗೂ ಸಿಎಸ್ಕೆ ಸೆಣಸಾಡಲಿವೆ.
ಈಗಾಗಲೇ ಐಪಿಎಲ್ ಟ್ರೋಫಿಯನ್ನು ಹಲವು ಬಾರಿ ಮುತ್ತಿಕ್ಕಿರುವ ಸಿಎಸ್ಕೆ ಹಾಗೂ ತಂಡ ಬಲಿಷ್ಠವಾಗಿದ್ದರೂ ಕೊನೇ ಕ್ಷಣದಲ್ಲಿ ಪ್ರಶಸ್ತಿಯನ್ನು ಮಿಸ್ ಮಾಡಿಕೊಳ್ಳುವ ಆರ್ಸಿಬಿ ತಂಡ ಈ ಆವೃತ್ತಿಯ ಟ್ರೋಫಿ ಗೆಲ್ಲುವ ಫೇವರೇಟ್ ತಂಡಗಳೆನಿಸಿಕೊಂಡಿವೆ.
ಅಂಕಿ-ಅಂಶಗಳು ಹಾಗೂ ತವರು ನೆಲದ ಭರ್ಜರಿ ಬೆಂಬಲ ನಾಳಿನ ಪಂದ್ಯಕ್ಕೆ ಚೆನ್ನೈ ತಂಡಕ್ಕೆ ವರದಾನವಾಗಲಿದೆ. ಬಿಡ್ಡಿಂಗ್ನಲ್ಲಿ ಕೆಲ ಹೊಸ ಸೇರ್ಪಡೆಯಿಂದ ತಂಡವನ್ನು ಮತ್ತಷ್ಟು ಬಲಿಷ್ಠ ಮಾಡಿಕೊಂಡಿರುವ ಆರ್ಸಿಬಿ ಶನಿವಾರದ ಪಂದ್ಯದಲ್ಲಿ ಅಚ್ಚರಿಯ ಫಲಿತಾಂಶ ನೀಡುವ ಉತ್ಸಾಹದಲ್ಲಿದೆ.