ಕರ್ನಾಟಕ

karnataka

ETV Bharat / sports

ಐಪಿಎಲ್​ನಲ್ಲಿ ಹೆಚ್ಚು ಬಾರಿ ಹ್ಯಾಟ್ರಿಕ್: ಭಾರತೀಯ ಬೌಲರ್​ ಹೆಸರಲ್ಲಿದೆ ವಿಶೇಷ ದಾಖಲೆ

1 ಐಪಿಎಲ್‌‌ ಟೂರ್ನಿಗಳ ಮೇಲೆ ಕಣ್ಣು ಹಾಯಿಸಿದಾಗ ನಮಗೆ ಕೆಲವೊಂದು ಅಪರೂಪದ ದಾಖಲೆ ಕಂಡು ಬರುತ್ತವೆ. ಅದರಲ್ಲಿ ಅಮಿತ್​ ಮಿಶ್ರಾ ಅವರ ಒಂದು ದಾಖಲೆ ಇಲ್ಲಿಯವರೆಗೂ ಯಾರಿಂದಲೂ ಮುರಿಯಲಾಗಿಲ್ಲ.

amit-mishra

By

Published : Feb 26, 2019, 7:55 AM IST

Updated : Feb 26, 2019, 8:03 AM IST

ಮುಂಬೈ: ಪ್ರಸಕ್ತ ಸಾಲಿನ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಆರಂಭಗೊಳ್ಳಲು ಈಗಾಗಲೇ ದಿನಗಣನೇ ಆರಂಭಗೊಂಡಿದ್ದು, ಎಲ್ಲ ಆಟಗಾರರು ಬ್ಯಾಟಿಂಗ್‌, ಬೌಲಿಂಗ್‌ನಲ್ಲಿ ಮಿಂಚಲು ಸಿದ್ದವಾಗುತ್ತಿದ್ದಾರೆ.

ಈಗಾಗಲೇ ಈ ಹಿಂದೆ ನಡೆದಿರುವ 11 ಐಪಿಎಲ್‌‌ ಟೂರ್ನಿಗಳ ಮೇಲೆ ಕಣ್ಣು ಹಾಯಿಸಿದಾಗ ನಮಗೆ ಕೆಲವೊಂದು ಅಪರೂಪದ ದಾಖಲೆ ಕಂಡು ಬರುತ್ತವೆ. ಈ ಸಾಲಿನಲ್ಲಿ ಟೀಂ ಇಂಡಿಯಾದ ಸ್ಪಿನ್‌ ಬೌಲರ್‌ ಅಮಿತ್‌ ಮಿಶ್ರಾ ಸೇರ್ಪಡೆಯಾಗುತ್ತಾರೆ.

ಮಿಶ್ರಾ, ಐಪಿಎಲ್‌ನಲ್ಲಿ ಮೂರು ಸಲ ಹ್ಯಾಟ್ರಿಕ್‌ ವಿಕೆಟ್‌ ಪಡೆದು ಸಾಧನೆ ಮಾಡಿದ್ದು, ಇಲ್ಲಿಯವರೆಗೆ ಯಾವೊಬ್ಬ ಬೌಲರ್‌ ಆ ದಾಖಲೆ ಮುರಿದಿಲ್ಲ.

2008ರಲ್ಲಿ ಡೆಲ್ಲಿ ಡೇರ್‌ ಡೆವಿಲ್ಸ್‌ ತಂಡದ ಪರ ಆಡುತ್ತಿದ್ದ ವೇಳೆ ಡೆಕ್ಕನ್‌ ಚಾರ್ಜಸ್‌ ವಿರುದ್ಧ ಮೊದಲ ಹ್ಯಾಟ್ರಿಕ್‌ ಪಡೆದುಕೊಂಡಿದ್ದ ಅಮಿತ್ ಮಿಶ್ರಾ, ತದನಂತರ 2011ರಲ್ಲಿ ಡೆಕ್ಕನ್‌ ಚಾರ್ಜಸ್‌ ತಂಡದ ಪರ ಮೈದಾನಕ್ಕಿಳಿದು ಕಿಂಗ್ಸ್‌‌ ಇಲವೆನ್‌ ಪಂಜಾಬ್ ತಂಡದ ವಿರುದ್ಧ ಹ್ಯಾಟ್ರಿಕ್‌ ವಿಕೆಟ್‌‌ ಪಡೆದುಕೊಂಡಿದ್ದರು.

ಇದಾದ ಬಳಿಕ 2013ರಲ್ಲಿ ಸನ್‌ರೈಸರ್ಸ್‌‌ ಹೈದರಾಬಾದ್‌ ತಂಡದ ಪರ ಆಡುತ್ತಿದ್ದ ವೇಳೆ ಪುಣೆ ವಾರಿಯರ್ಸ್‌ ವಿರುದ್ಧ ಹ್ಯಾಟ್ರಿಕ್‌ ಸಾಧನೆ ಮಾಡಿದ್ದರು.

ಅಮಿತ್​ ಮಿಶ್ರಾ ನಂತರ ಆಲ್​ರೌಂಡರ್​ ಯುವರಾಜ್​ ಸಿಂಗ್​ ಈ 2 ಬಾರಿ ಹ್ಯಾಟ್ರಿಕ್​ ಸಾಧನೆ ಮಾಡಿದ್ದಾರೆ. ಇವರಿಬ್ಬರನ್ನು ಬಿಟ್ಟರೆ 12 ಬೌಲರ್​ಗಳು ತಲಾ ಒಂದು ಬಾರಿ ಈ ಸಾಧನೆ ಮಾಡಿದ್ದಾರೆ.

136 ಐಪಿಎಲ್‌ ಪಂದ್ಯ ಆಡಿರುವ ಮಿಶ್ರಾ 7.39 ಎಕನಾಮಿಯಲ್ಲಿ 146 ವಿಕೆಟ್‌ ಪಡೆದುಕೊಂಡಿದ್ದಾರೆ. ಒಂದು ಬಾರಿ 5 ವಿಕೆಟ್​, 3 ಬಾರಿ 4 ವಿಕೆಟ್​ ಪಡೆದಿದ್ದಾರೆ.

Last Updated : Feb 26, 2019, 8:03 AM IST

ABOUT THE AUTHOR

...view details