ಕರ್ನಾಟಕ

karnataka

ETV Bharat / sports

ಹೊಸ ಹುರುಪಿನಲ್ಲಿರುವ ಪಂಜಾಬ್ ಕಿಂಗ್ಸ್​ಗೆ ರಾಯಲ್ಸ್​ ಸವಾಲು - ಸಂಜು ಸಾಮ್ಸನ್

ಕಳೆದ ವರ್ಷ ಆರಂಭದಲ್ಲಿ ಪರದಾಡಿದ್ದ ಪಂಜಾಬ್ ಸತತ 5 ಪಂದ್ಯಗಳಲ್ಲಿ ಗೆಲುವು ಸಾಧಿಸಿ ಪ್ಲೇ ಆಫ್​ ಹತ್ತಿರ ಬಂದಿತ್ತಾದರೂ ಕೊನೆಯ ಎರಡು ಪಂದ್ಯಗಳಲ್ಲಿ ಮತ್ತೆ ಸೋಲು ಕಂಡು 6ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಬೌಲರ್​ಗಳ ವೈಫಲ್ಯ ಮತ್ತು ಮಧ್ಯಮ ಕ್ರಮಾಂಕದಲ್ಲಿ ಮ್ಯಾಕ್ಸ್​ವೆಲ್ ಕಳೆಪೆ ಬ್ಯಾಟಿಂಗ್ ಪ್ರದರ್ಶನ ತಂಡಕ್ಕೆ ಹಿನ್ನಡೆಯಾಗಿತ್ತು.

RR vs Punjab
RR vs Punjab

By

Published : Apr 11, 2021, 11:02 PM IST

ಮುಂಬೈ: ಕಳೆದ ಆವೃತ್ತಿಯಲ್ಲಿ ತಂಡದ ಬೌಲಿಂಗ್ ವೈಫಲ್ಯವನ್ನು ವಿದೇಶಿ ಬೌಲರ್​ಗಳನ್ನು ದುಬಾರಿ ಬೆಲೆಗೆ ಖರೀದಿಸುವ ಮೂಲಕ ತಂಡವನ್ನು ಸಮತೋಲನ ಮಾಡಿಕೊಂಡಿರುವ ಪಂಜಾಬ್ ಕಿಂಗ್ಸ್​ ಬಲಿಷ್ಠ ಬ್ಯಾಟಿಂಗ್ ಬಲವೊಂದಿರುವ ರಾಜಸ್ಥಾನದ ವಿರುದ್ಧ ತನ್ನ ಐಪಿಎಲ್ ಅಭಿಯಾನ ಆರಂಭಿಸಲಿದೆ.

ಕಳೆದ ವರ್ಷ ಆರಂಭದಲ್ಲಿ ಪರದಾಡಿದ್ದ ಪಂಜಾಬ್ ಸತತ 5 ಪಂದ್ಯಗಳಲ್ಲಿ ಗೆಲುವು ಸಾಧಿಸಿ ಪ್ಲೇ ಆಫ್​ ಹತ್ತಿರ ಬಂದಿತ್ತಾದರೂ ಕೊನೆಯ ಎರಡು ಪಂದ್ಯಗಳಲ್ಲಿ ಮತ್ತೆ ಸೋಲು ಕಂಡು 6ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಬೌಲರ್​ಗಳ ವೈಫಲ್ಯ ಮತ್ತು ಮಧ್ಯಮ ಕ್ರಮಾಂಕದಲ್ಲಿ ಮ್ಯಾಕ್ಸ್​ವೆಲ್ ಕಳೆಪೆ ಬ್ಯಾಟಿಂಗ್ ಪ್ರದರ್ಶನ ತಂಡಕ್ಕೆ ಹಿನ್ನಡೆಯಾಗಿತ್ತು.

ಆದರೆ ಈ ಬಾರಿ ವೇಗಿ ಶಮಿ ಜೊತೆಗೆ ಆಸ್ಟ್ರೇಲಿಯಾ ಟಿ20 ಸ್ಪೆಷಲಿಸ್ಟ್​ ಬೌಲರ್​ಗಳಾದ ಜೇ ರಿಚರ್ಡ್ಸನ್ 14 ಕೋಟಿ ಮತ್ತು ರಿಲೇ ಮೆರಿಡಿತ್ 8 ಕೋಟಿ ರೂಗಳಿಗೆ​ ಖರೀದಿಸಿ ಬೌಲಿಂಗ್ ವಿಭಾಗವನ್ನು ಭದ್ರಪಡಿಸಿಕೊಂಡಿದೆ. ಜೊತೆಗೆ ತಮಿಳುನಾಡಿನ ಯುವ ಪ್ರತಿಭೆ ಶಾರುಖ್ ಖಾನ್​ರನ್ನು ಖರೀದಿಸುವ ಮೂಲಕ ಫಿನಿಶರ್​ ಸ್ಥಾನವನ್ನು ಬಲಪಡಿಸಿಕೊಂಡು ಸಮತೋಲನ ಸಾಧಿಸಿದೆ.

ರಾಹುಲ್ ಮತ್ತು ಮಯಾಂಕ್​ ಆರಂಭಿಕರಾಗಿ ಗೇಲ್ ಮತ್ತು ಪೂರನ್​ 3 ಮತ್ತು 4ನೇ ಕ್ರಮಾಂಕದಲ್ಲಿ ಆಡುವುದರಿಂದ ಬ್ಯಾಟಿಂಗ್ ಲೈನ್​ ಅಪ್ ಕೂಡ ಬಲಿಷ್ಠವಾಗಿದೆ. ಜೊತೆಗೆ ಟಿ20 ನಂಬರ್​ ಒನ್ ಬ್ಯಾಟ್ಸ್​ಮನ್ ಡೇವಿಡ್ ಮಲನ್ ಹಾಗೂ ಆಸೀಸ್ ಆಲ್​ರೌಂಡರ್​ ಮೊಯಿಸಸ್​ ಹೆನ್ರಿಕ್ಸ್​ ತಂಡದಲ್ಲಿರುವುದು ಹೆಚ್ಚುವರಿ ಆಯ್ಕೆಗೆ ಲಭ್ಯರಿದ್ದಾರೆ.

ಇತ್ತ ಕಳೆದ ಐಪಿಎಲ್​ನ ಕೊನೆಯ ಸ್ಥಾನಿ ರಾಜಸ್ಥಾನ್ ರಾಯಲ್ಸ್​ಗೆ ಈ ಬಾರಿ ಸಂಜು ಸಾಮ್ಸನ್​ ನಾಯಕತ್ವದಲ್ಲಿ ಕಣಕ್ಕಿಳಿಯಲಿದೆ. ರಾಯಲ್ಸ್​ಗೆ ತವರಿನ ಆಟಗಾರರಿಗಿಂತ ಇಂಗ್ಲೆಂಡ್ ಆಟಗಾರರೇ ಬಲವಾಗಿದ್ದಾರೆ. ಬಟ್ಲರ್​, ಬೆನ್​ ಸ್ಟೋಕ್ಸ್ ಮತ್ತು ಲಿವಿಂಗ್​ಸ್ಟೋನ್​ ತಂಡದ ಬಲವಾಗಿದ್ದಾರೆ. ಇವರ ಜೊತೆಗೆ ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್​ , ಕ್ರಿಸ್ ಮೋರಿಸ್​ ರಾಹುಲ್ ತೆವಾಟಿಯಾ, ರಿಯಾನ್ ಪರಾಗ್ ಶಿವಂ ದುಬೆ ಮಧ್ಯಮ ಕ್ರಮಾಂಕಕ್ಕೆ ಉತ್ತಮ ಆಯ್ಕೆಗಳಾಗಿದ್ದು, ಆರ್​ಆರ್​ ಯಾರಿಗೆ ಮಣೆಯಾಕಲಿದೆ ಎಂದು ಕಾದು ನೋಡಬೇಕಿದೆ.

ಬೌಲಿಂಗ್ ವಿಭಾಗದಲ್ಲಿ ಆರ್ಚರ್​ ಅನುಪಸ್ಥಿತಿ ಖಂಡಿತ ತಂಡಕ್ಕೆ ದೊಡ್ಡ ಹೊಡೆತವಾಗಲಿದೆ. ಕ್ರಿಸ್​ ಮೋರಿಸ್ ಬಿಟ್ಟರೆ ಆಸ್ಟ್ರೇಲಿಯಾದ ಆ್ಯಂಡ್ರ್ಯೂ ಟೈ ಮತ್ತು ಬಾಂಗ್ಲಾದ ಮುಸ್ತಫಿಜುರ್ ರಹಮಾನ್​ ತಂಡಲ್ಲಿರುವ ಅನುಭವಿ ಬೌಲರ್​ಗಳಾಗಿದ್ದಾರೆ. ಇವರಿಗೆ ಭಾರತದ ಕಾರ್ತಿಕ್ ತ್ಯಾಗಿ ಮತ್ತು ಉನ್ನಾದ್ಕಟ್ ಸಾಥ್ ನೀಡಲಿದ್ದಾರೆ.

ಎರಡು ತಂಡಗಳು ಕಳೆದ ಬಾರಿಯ ವೈಫಲ್ಯವನ್ನು ಮರೆತು ನೂತನ ಆವೃತ್ತಿಯಲ್ಲಿ ಗೆಲುವಿನ ನಗೆ ಬೀರಲು ಕಾಯುತ್ತಿವೆ. ಈವರೆಗೆ ಐಪಿಎಲ್​ನಲ್ಲಿ 21 ಪಂದ್ಯಗಳನ್ನಾಡಿದ್ದು, ರಾಜಸ್ಥಾನ್​ 12 ರಲ್ಲಿ, ಪಂಜಾಬ್​ 9ರಲ್ಲಿ ಗೆಲುವು ಸಾಧಿಸಿದೆ.

ರಾಜಸ್ಥಾನ್ ರಾಯಲ್ಸ್ ತಂಡ: ಜೋಸ್ ಬಟ್ಲರ್ (ವಿಕೀ), ಬೆನ್ ಸ್ಟೋಕ್ಸ್, ಸಂಜು ಸ್ಯಾಮ್ಸನ್ (ನಾಯಕ), ರಿಯಾನ್ ಪರಾಗ್, ಶಿವಮ್ ಡ್ಯೂಬ್, ರಾಹುಲ್ ತೆವಾಟಿಯಾ, ಕ್ರಿಸ್ ಮೋರಿಸ್, ಲಿಯಾಮ್ ಲಿವಿಂಗ್ಸ್ಟೋನ್, ಶ್ರೇಯಾಸ್ ಗೋಪಾಲ್, ಜಯದೇವ್ ಉನಾದ್ಕಟ್, ಕಾರ್ತಿಕ್ ತ್ಯಾಗಿ, ಮುಸ್ತಾಫಿಜುರ್ ರಹಮಾನ್, ಆಂಡ್ರ್ಯೂ ಟೈ ಆರ್ಚರ್, ಮಾಯಾಂಕ್ ಮಾರ್ಕಂಡೆ, ಅನುಜ್ ರಾವತ್, ಚೇತನ್ ಸಕರಿಯಾ, ಕುಲದೀಪ್ ಯಾದವ್, ಯಶಸ್ವಿ ಜೈಸ್ವಾಲ್, ಡೇವಿಡ್ ಮಿಲ್ಲರ್, ಮನನ್ ವೊಹ್ರಾ, ಕೆ.ಸಿ.ಕರಿಯಪ್ಪ, ಮಹಿಪಾಲ್ ಲೋಮರ್, ಆಕಾಶ್ ಸಿಂಗ್

ಪಂಜಾಬ್ ಕಿಂಗ್ಸ್ ತಂಡ: ಕೆ.ಎಲ್. ರಾಹುಲ್ (ನಾಯಕ /ವಿಕೀ), ಮಾಯಾಂಕ್ ಅಗರ್ವಾಲ್, ಕ್ರಿಸ್ ಗೇಲ್, ಪ್ರಭಮಸಿರನ್ ಸಿಂಗ್, ನಿಕೋಲಸ್ ಪೂರನ್, ಶಾರುಖ್ ಖಾನ್, ದೀಪಕ್ ಹೂಡಾ, ಜೇ ರಿಚರ್ಡ್ಸನ್, ರಿಲೆ ಮೆರೆಡಿತ್, ರವಿ ಬಿಷ್ಣೋಯ್, ಮೊಹಮ್ಮದ್ ಶಮಿ, ಮೊಯಿಸಸ್ ಹೆನ್ರಿಂಡೆಸ್ , ಡೇವಿಡ್ ಮಲನ್, ಜಲಜ್ ಸಕ್ಸೇನಾ, ಮುರುಗನ್ ಅಶ್ವಿನ್, ಸರ್ಫರಾಜ್ ಖಾನ್, ಫ್ಯಾಬಿಯನ್ ಅಲೆನ್, ಸೌರಭ್ ಕುಮಾರ್, ಇಶಾನ್ ಪೊರೆಲ್, ಉತ್ಕರ್ಶ್ ಸಿಂಗ್, ದರ್ಶನ್ ನಲ್ಕಂಡೆ, ಅರ್ಷ್‌ದೀಪ್ ಸಿಂಗ್, ಹರ್ಪ್ರೀತ್ ಬ್ರಾರ್

ABOUT THE AUTHOR

...view details