ಕರ್ನಾಟಕ

karnataka

ETV Bharat / sports

ಐಪಿಎಲ್ 2021: ಮುಂಬೈಗೆ ಹ್ಯಾಟ್ರಿಕ್​ ಕನಸು, ಹೊಸ ಹುರುಪಿನಲ್ಲಿ ಆರ್​ಸಿಬಿ... ಹೀಗಿದೆ ಎರಡೂ ತಂಡಗಳ ಬಲಾಬಲ! - ಆರ್​ಸಿಬಿ vs ಮುಂಬೈ ವಿಶ್ಲೇಷಣೆ

ಎರಡು ತಂಡಗಳು ಒಟ್ಟು 27 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಮುಂಬೈ 17 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ಆರ್​ಸಿಬಿ ಸೂಪರ್ ಓವರ್​ ಸೇರಿದಂತೆ 10 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. 2015ರಿಂದ ಎರಡು ತಂಡಗಳು 8 ಬಾರಿ ಮುಖಾಮುಖಿಯಾಗಿದ್ದು, ಆರ್​ಸಿಬಿ ಕೇವಲ 2 ರಲ್ಲಿ ಮಾತ್ರ ಜಯಿಸಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಮುಂಬೈ ಇಂಡಿಯನ್ಸ್​
ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಮುಂಬೈ ಇಂಡಿಯನ್ಸ್​

By

Published : Apr 8, 2021, 4:08 PM IST

ಚೆನ್ನೈ:ವಿಶ್ವದಲ್ಲೇ ಅತ್ಯುತ್ತಮ ಲೀಗ್ ಆಗಿರುವ ಐಪಿಎಲ್ ಶುಕ್ರವಾರದಿಂದ ಆರಂಭಗೊಳ್ಳಲಿದೆ. ಹ್ಯಾಟ್ರಿಕ್ ಕನಸಿನಲ್ಲಿರುವ ಮುಂಬೈ ಇಂಡಿಯನ್ಸ್​​ ಬಲಿಷ್ಠ ಆರ್​ಸಿಬಿಯನ್ನು ಉದ್ಘಾಟನಾ ಪಂದ್ಯದಲ್ಲಿ ಎದುರಿಸಲಿದೆ.

ಕೇವಲ 5 ತಿಂಗಳ ಅಂತರದಲ್ಲಿ 2 ಐಪಿಎಲ್​ ಸ್ಟೇಕ್​ ಹೋಲ್ಡರ್ಸ್​ಗಳಿಗೆ ಸೂಕ್ತವಲ್ಲ. ಮತ್ತೊಂದು ಕಡೆ ದಿನಕ್ಕೆ ದೇಶದಲ್ಲಿ ಲಕ್ಷಕ್ಕೂ ಹೆಚ್ಚು ಕೋವಿಡ್​ ಪ್ರಕರಣಗಳು ದಾಖಲಾಗುತ್ತಿವೆ. ಇದರ ಮಧ್ಯೆ ಸಿಕ್ಸರ್​ಗಳ ಹಬ್ಬವಾದ ಮತ್ತು ಹೊಸ ಪ್ರತಿಭೆಗಳನ್ನು ಗುರುತಿಸುವ 7 ವಾರಗಳ ಕ್ರಿಕೆಟ್ ಹಬ್ಬವನ್ನು ಕ್ರಿಕೆಟ್ ಅಭಿಮಾನಿಗಳು ಸ್ವಾಗತ ಮಾಡಲಿದ್ದಾರೆ.

5 ಬಾರಿ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ಐಪಿಎಲ್​ನಲ್ಲಿ ಸಾಧನೆ ರಹಿತವಾಗಿದ್ದರೂ ಪ್ರತಿ ಬಾರಿಯೂ ಪ್ರಬಲ ಪೈಪೋಟಿಯನ್ನು ಮಾತ್ರ ನೀಡುತ್ತಿರುವ ರಾಯಲ್ ಚಾಲೆಂಜರ್ಸ್​ ನಡುವೆ ಬೌಂಡರಿ, ಸಿಕ್ಸರ್​ಗಳ ರಸದೌತಣವನ್ನು ಸವಿಯಲು ಅಭಿಮಾನಿಗಳು ಸಿದ್ಧರಾಗಿದ್ದಾರೆ. ಬೇಸರದ ಸಂಗತಿಯೆಂದರೆ ಸತತ ಎರಡನೇ ಬಾರಿಯೂ ಟೂರ್ನಿಯನ್ನು ಸ್ಟೇಡಿಯಂನಲ್ಲಿ ಕಾಣಲು ಅಸಾಧ್ಯವಾಗಿದೆ.

ತಂಡಗಳ ಬಲಾಬಲ

ಐಪಿಎಲ್​ನ ಯಶಸ್ವಿ ತಂಡವಾಗಿರುವ ಮುಂಬೈ ಇಂಡಿಯನ್ಸ್​ಗೆ ರೋಹಿತ್ ಮತ್ತು ಕ್ವಿಂಟನ್ ಡಿಕಾಕ್​ ಸ್ಫೋಟಕ ಆರಂಭ ಒದಗಿಸಲಿದ್ದಾರೆ. ಒಂದು ವೇಳೆ ಇವರಿಬ್ಬರು ವಿಫಲರಾದರೆ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಕೀರನ್ ಪೊಲಾರ್ಡ್ ಮತ್ತು ಹಾರ್ದಿಕ್​ ಪಾಂಡ್ಯರಂತಹ ಸ್ಫೋಟಕ ಆಟಗಾರರ ದಂಡೇ ಇದೆ.

ಇತ್ತ ಆರ್​​ಸಿಬಿ ತಂಡದಲ್ಲಿ ಕೊಹ್ಲಿ 2016ರ ಆವೃತ್ತಿಯಂತೆ ಆರಂಭಿಕರಾಗಿ ವಿಜೃಂಭಿಸಲು ತಯಾರಿದ್ದಾರೆ. ಯುವ ಆಟಗಾರ ಪಡಿಕ್ಕಲ್​ ಇವರಿಗೆ ಸಾಥ್ ನೀಡಲಿದ್ದಾರೆ. ನಂತರ ಸ್ಫೋಟಕ ಆಟಗಾರ ಎಬಿ ಡಿ ವಿಲಿಯರ್ಸ್ ಅಥವಾ ಭಾರತದ ರಜತ್ ಪಾಟಿದಾರ್ ಕಣಕ್ಕಿಳಿಯುವ ಸಾಧ್ಯತೆಯಿದೆ. ಮಧ್ಯಮ ಕ್ರಮಾಂಕದಲ್ಲಿ ಗ್ಲೇನ್ ಮ್ಯಾಕ್ಸ್​ವೆಲ್​ರಂತಹ ಸ್ಫೋಟಕ ಬ್ಯಾಟ್ಸ್​ಮನ್​ಗಳ ಬಲವಿದೆ. ಈ ಬಾರಿ ವಿಕೆಟ್​ ಕೀಪರ್​ ಸ್ಥಾನದಲ್ಲಿ ಕೇರಳದ ಮೊಹಮ್ಮದ್ ಅಜರುದ್ದೀನ್​ ತಂಡದಲ್ಲಿ ಕಾಯಂ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಿದೆ.

ಬೌಲಿಂಗ್​ನಲ್ಲಿ ಮುಂಬೈ ಮೇಲುಗೈ

ಬೌಲಿಂಗ್ ವಿಭಾಗದಲ್ಲಿ ನೋಡುವುದಾದರೆ ಆರ್​ಸಿಬಿಗಿಂತ ಮುಂಬೈ ಪ್ರಬಲವಾಗಿದೆ. ಟಿ-20ಗೆ ಹೇಳಿ ಮಾಡಿಸಿದಂತಿರುವ ಜಸ್ಪ್ರೀತ್ ಬುಮ್ರಾ, ಟ್ರೆಂಟ್​ ಬೌಲ್ಟ್​ ಜೊತೆಗೆ ಮಿಲ್ನೆ ಅಥವಾ ಜಿಮ್ಮಿ ನಿಶಾಮ್ ಆಡುವ ಸಾಧ್ಯತೆ ಇದೆ. ಸ್ಪಿನ್​ ವಿಭಾಗದಲ್ಲಿ ಆಲ್​ರೌಂಡರ್​ ಕೃನಾಲ್ ಪಾಂಡ್ಯ ಮತ್ತು ರಾಹುಲ್ ಚಹಾರ್ ಇದ್ದಾರೆ.

ಮುಂಬೈಗೆ ಹೋಲಿಸಿದರೆ ಆರ್​ಸಿಬಿಯ ಸ್ಪಿನ್​ ಬೌಲಿಂಗ್ ಪ್ರಬಲವಾಗಿದೆ. ಭಾರತದ ಮುಂಚೂಣಿ ಬೌಲರ್ ಯುಜ್ವೇಂದ್ರ ಚಹಾಲ್ ಜೊತೆ ವಾಷಿಂಗ್ಟನ್ ಸುಂದರ್​ ಇದ್ದಾರೆ. ಆದರೆ ವೇಗದ ಬೌಲಿಂಗ್ ವಿಭಾಗದಲ್ಲಿ ಪರಿಪಕ್ವತೆಯುಳ್ಳ ಬೌಲರ್​ಗಳಿಲ್ಲ. ದುಬಾರಿ ಬೌಲರ್ ಕೈಲ್ ಜೆಮೀಸನ್​, ಕೇನ್ ರಿಚರ್ಡ್ಸನ್​ ಪ್ರಥಮ ಆಯ್ಕೆಯಾಗಲಿದ್ದಾರೆ. ಇವರನ್ನು ಹೊರೆತುಪಡಿಸಿದರೆ ಆಲ್​ರೌಂಡರ್​ ಡೇನಿಯಲ್ ಸ್ಯಾಮ್ಸ್​ ಮೂರನೇ ಆಯ್ಕೆಯಾಗಿದ್ದಾರೆ. ಭಾರತೀಯ ಬೌಲರ್​ಗಳ ಪೈಕಿ ಸಿರಾಜ್ ಅಥವಾ ಸೈನಿ ಅವಕಾಶ ಪಡೆಯುವ ಸಾಧ್ಯತೆಯಿದೆ.

ಐಪಿಎಲ್ ಮುಖಾಮುಖಿ

ಎರಡು ತಂಡಗಳು ಒಟ್ಟು 27 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಮುಂಬೈ 17 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ಆರ್​ಸಿಬಿ ಸೂಪರ್ ಓವರ್​ ಸೇರಿದಂತೆ 10 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. 2015ರಿಂದ ಎರಡು ತಂಡಗಳು 8 ಬಾರಿ ಮುಖಾಮುಖಿಯಾಗಿದ್ದು, ಆರ್​ಸಿಬಿ ಕೇವಲ 2 ರಲ್ಲಿ ಮಾತ್ರ ಜಯಿಸಿದೆ.

ಮುಂಬೈ vs ಆರ್​ಸಿಬಿ ಟಾಪ್ ಸ್ಕೋರರ್​

ಎರಡು ತಂಡಗಳ ಮುಖಾಮುಖಿ ವೇಳೆ ಆರ್​ಸಿಬಿ ತಂಡದ ನಾಯಕ ವಿರಾಟ್​ ಕೊಹ್ಲಿ ಗರಿಷ್ಠ ರನ್​ ಬಾರಿಸಿದ ದಾಖಲೆ ಹೊಂದಿದ್ದಾರೆ. ಕೊಹ್ಲಿ 695 ರನ್​ ಗಳಿಸಿದ್ದರೆ, ಎಬಿಡಿ 634 ರನ್​ ಗಳಿಸಿದ್ದಾರೆ. ಮುಂಬೈ ಪರ ಪೊಲಾರ್ಡ್​ 539 ರನ್ ​ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದಾರೆ.

ಗರಿಷ್ಠ ವಿಕೆಟ್

ಹರ್ಭಜನ್ ಸಿಂಗ್ 22 ವಿಕೆಟ್ ಪಡೆದಿದ್ದು, ಎರಡು ತಂಡಗಳ ಮುಖಾಮುಖಿ ವೇಳೆ ಗರಿಷ್ಠ ವಿಕೆಟ್ ಪಡೆದ ಬೌಲರ್​ ಎನಿಸಿಕೊಂಡಿದ್ದಾರೆ. ನಂತರದ ಸ್ಥಾನದಲ್ಲಿ ಆರ್​ಸಿಬಿಯ ಯುಜ್ವೇಂದ್ರ ಚಹಾಲ್​ ಮತ್ತು ಬುಮ್ರಾ ಇದ್ದು, ಈ ಇಬ್ಬರೂ ತಲಾ 21 ವಿಕೆಟ್ ಪಡೆದಿದ್ದಾರೆ.

ಮುಂಬೈ ಇಂಡಿಯನ್ಸ್​

ರೋಹಿತ್ ಶರ್ಮಾ (ನಾಯಕ), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಕ್ರಿಸ್ ಲಿನ್, ಹಾರ್ದಿಕ್ ಪಾಂಡ್ಯ, ಅ್ಯಡಮ್ ಮಿಲ್ನೆ, ಆದಿತ್ಯ ತಾರೆ, ಅನ್ಮೋಲ್‌ಪ್ರೀತ್ ಸಿಂಗ್, ಅನುಕುಲ್ ರಾಯ್, ಅರ್ಜುನ್ ತೆಂಡೂಲ್ಕರ್, ಧವಲ್ ಕುಲಕರ್ಣಿ, ಜೇಮ್ಸ್ ನೀಶಮ್, ಜಸ್ಪ್ರೀತ್ ಬುಮ್ರಾ, ಜಯಂತ್ ಪೊಲಾರ್ಡ್, ಕೀರನ್ ಪೊಲಾರ್ಡ್​, ಕೃನಾಲ್ ಪಾಂಡ್ಯ, ಮಾರ್ಕೊ ಜಾನ್ಸೆನ್, ಮೊಹ್ಸಿನ್ ಖಾನ್, ನಥನ್ ಕೌಲ್ಟರ್-ನೈಲ್, ಪಿಯೂಷ್ ಚಾವ್ಲಾ, ರಾಹುಲ್ ಚಹರ್, ಸೌರಭ್ ತಿವಾರಿ, ಟ್ರೆಂಟ್ ಬೌಲ್ಟ್, ಯುಧ್ವೀರ್ ಸಿಂಗ್.

ಆರ್​ಸಿಬಿ ತಂಡ

ವಿರಾಟ್ ಕೊಹ್ಲಿ (ನಾಯಕ), ದೇವದತ್ ಪಡಿಕ್ಕಲ್, ಫಿನ್ ಅಲೆನ್ (ವಿಕೆಟ್​ ಕೀಪರ್), ಎಬಿ ಡಿ ವಿಲಿಯರ್ಸ್, ಪವನ್ ದೇಶಪಾಂಡೆ, ವಾಷಿಂಗ್ಟನ್ ಸುಂದರ್, ಡೇನಿಯಲ್ ಸ್ಯಾಮ್ಸ್, ಯುಜ್ವೇಂದ್ರ ಚಾಹಲ್, ಆ್ಯಡಮ್ ಜಂಪಾ, ಶಹಬಾಜ್ ಅಹ್ಮದ್, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ಕೇನ್ ರಿಚರ್ಡ್ಸನ್ ಪಟೇಲ್, ಹರ್ಷೆಲ್ ಪಟೇಲ್, ಗ್ಲೆನ್ ಮ್ಯಾಕ್ಸ್‌ವೆಲ್, ಸಚಿನ್ ಬೇಬಿ, ರಜತ್ ಪಾಟಿದಾರ್, ಮೊಹಮ್ಮದ್ ಅಜರುದ್ದೀನ್, ಕೈಲ್ ಜೆಮೀಸನ್, ಡೇನಿಯಲ್ ಕ್ರಿಸ್ಚಿಯನ್, ಸುಯಾಶ್ ಪ್ರಭುದೇಸಾಯಿ, ಕೆ.ಎಸ್.ಭರತ್.

ABOUT THE AUTHOR

...view details