ಕರ್ನಾಟಕ

karnataka

ETV Bharat / sports

ಐಪಿಎಲ್ 2020: ಒಂದೇ ಸೀಸನ್​ನಲ್ಲಿ ಮಿಂಚಿ ಮರೆಯಾದ ಟಾಪ್​ 5 ಐಪಿಎಲ್ ಸ್ಟಾರ್ಸ್ - ಒಂದು ಸೀಸನ್ ಅದ್ಭುತಗಳು

ಭಾರತ ಟೆಸ್ಟ್​ ತಂಡದ ಸ್ಟಾರ್​ ಬೌಲರ್​ ಆರ್​ ಅಶ್ವಿನ್​ ಸೇರಿದಂತೆ ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ, ಪಾಂಡ್ಯ ಬ್ರದರ್ಸ್, ರಿಷಭ್ ಪಂತ್​ ಹೀಗೆ ಹಲವು ಕ್ರಿಕೆಟಿಗರು ರಾಷ್ಟ್ರೀಯ ತಂಡದ ಪರ ಆಡುವ ಕನಸಿಗೆ ಐಪಿಎಲ್​ ದಾರಿ ದೀಪವಾಗಿದೆ. ಡೇವಿಡ್​ ವಾರ್ನರ್​, ಸ್ಟಿವ್​ ಸ್ಮಿತ್​, ಶಾನ್ ಮಾರ್ಶ್​ಗೂ ಇಂಡಿಯನ್​ ಪ್ರೀಮಿಯರ್​ ಲೀಗ್​ ವೇದಿಕೆಯಾಗಿತ್ತು.

ಒಂದೇ ಸೀಸನ್​ನಲ್ಲಿ ಮಿಂಚಿ ಮರೆಯಾದ ಟಾಪ್​ 5 ಐಪಿಎಲ್ ಸ್ಟಾರ್ಸ್

By

Published : Sep 13, 2020, 5:57 PM IST

ಹೈದರಾಬಾದ್​:ಇಂಡಿಯನ್ ಪ್ರೀಮಿಯರ್ ಲೀಗ್​ ಯುವ ಆಟಗಾರರಿಗೆ ಒಂದು ಅತ್ಯುತ್ತಮ ವೇದಿಕೆ. ಈ ಶ್ರೀಮಂತ ಲೀಗ್ ದೇಶದ ಕ್ರಿಕೆಟಿಗರಿಗಷ್ಟೇ ಅಲ್ಲದೆ ಕೆಲವು ವಿದೇಶದ ಕ್ರಿಕೆಟಿಗರಿಗೂ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅವಕಾಶ ಪಡೆಯುವುದಕ್ಕೆ ದಾರಿ ಮಾಡಿಕೊಟ್ಟಿದೆ.

ಭಾರತ ಟೆಸ್ಟ್​ ತಂಡದ ಸ್ಟಾರ್​ ಬೌಲರ್​ ಆರ್​ ಅಶ್ವಿನ್​ ಸೇರಿದಂತೆ ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ, ಪಾಂಡ್ಯ ಬ್ರದರ್ಸ್, ರಿಷಭ್ ಪಂತ್​ ಹೀಗೆ ಹಲವು ಕ್ರಿಕೆಟಿಗರು ರಾಷ್ಟ್ರೀಯ ತಂಡದ ಪರ ಆಡುವ ಕನಸಿಗೆ ಐಪಿಎಲ್​ ದಾರಿ ದೀಪವಾಗಿದೆ. ಡೇವಿಡ್​ ವಾರ್ನರ್​, ಸ್ಟಿವ್​ ಸ್ಮಿತ್​, ಶಾನ್ ಮಾರ್ಶ್​ಗೂ ಇಂಡಿಯನ್​ ಪ್ರೀಮಿಯರ್​ ಲೀಗ್​ ವೇದಿಕೆಯಾಗಿತ್ತು.

ಆದರೆ ಇಂತಹ ಮಹಾನ್​ ವೇದಿಕೆಯಲ್ಲಿ ಮಿಂಚಿದರೂ ಸಹ ಕೆಲವರು ಮುಂದಿನ ಆವೃತ್ತಿಗಳಲ್ಲಿ ತಂಡದ 11ರ ಬಳಗದಲ್ಲಿ ಅವಕಾಶ ಪಡೆಯುವಲ್ಲಿ ವಿಫಲರಾದರು. ಅಂತಹ 5 ಆಟಗಾರರ ವಿವರ ಇಲ್ಲಿದೆ.

ಪಾಲ್ ವಲ್ತಾಟಿ(ಕಿಂಗ್ಸ್​ ಇಲೆವೆನ್​ ಪಂಜಾಬ್​)

ಪಾಲ್ ವಲ್ತಾಟಿ

2011ರ ಐಪಿಎಲ್​ ಆವೃತ್ತಿಯಲ್ಲಿ ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡದಲ್ಲಿ ಅದ್ಭುತ ಪ್ರದರ್ಶನ ತೋರಿದ್ದರು. ಅವರು 14 ಪಂದ್ಯಗಳಿಂದ 35.61 ರ ಸರಾಸರಿಯಲ್ಲಿ 2 ಶತಕಗಳ ಸಹಿತ 463 ರನ್ ​ಗಳಿಸಿದ್ದರು. ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧ 63 ಎಸೆತಗಳಲ್ಲಿ 120 ರನ್​ ಸಿಡಿಸಿ ಭಾರತದ ಭವಿಷ್ಯದ ಕ್ರಿಕೆಟಿಗ ಆಗಲಿದ್ದಾರೆ ಎಂಬ ಭರವಸೆ ಮೂಡಿಸಿದ್ದರು.

ಆದರೆ 2012ರ ಆವೃತ್ತಿಯಲ್ಲಿ ಕೇವಲ 6 ಪಂದ್ಯ ಹಾಗೂ 2013ರಲ್ಲಿ ಕೇವಲ ಒಂದೇ ಪಂದ್ಯವನ್ನಾಡಿದ ವಲ್ತಾಟಿ ಐಪಿಎಲ್​ನಿಂದಲೇ ಮರೆಯಾದರು. ಪ್ರಸ್ತುತ ಅವರು ಏರ್​ ಇಂಡಿಯಾ ತಂಡದ ಉದ್ಯೋಗಿಗಳ ಜೊತೆ ಕ್ರಿಕೆಟ್​ ಆಡುತ್ತಿದ್ದಾರೆ.

ರಾಹುಲ್ ಶರ್ಮಾ(ಡೆಕ್ಕನ್​ ಚಾರ್ಜಸ್​)

ರಾಹುಲ್ ಶರ್ಮಾ

ಈ ಯುವ ಸ್ಪಿನ್ನರ್​ ತಮ್ಮ ಅದ್ಭುತ ಬೌಲಿಂಗ್ ಕೌಶಲ್ಯವನ್ನು ನೋಡಿದವರು ಅಶ್ವಿನ್​ ಜೊತೆ ಹೋಲಿಕೆ ಮಾಡುತ್ತಿದ್ದರು. ಅವರು 2011ರಲ್ಲಿ ಡೆಕ್ಕನ್​ ಚಾರ್ಜಸ್​ ಪರ 14 ಪಂದ್ಯಗಳಲ್ಲಿ 13 ವಿಕೆಟ್​ ಪಡೆದು ಮಿಂಚಿದ್ದರು. ನಂತರ ಪುಣೆ ವಾರಿಯರ್ಸ್​ ತಂಡಕ್ಕೆ ವರ್ಗಾವಣೆಗೊಂಡರು. 2012ರಲ್ಲಿ ಭಾರತ ತಂಡಕ್ಕೂ ಪಾದಾರ್ಪಣೆ ಮಾಡಿ 4 ಏಕದಿನ ಹಾಗೂ 2 ಟಿ20 ಪಂದ್ಯಗಳನ್ನಾಡಿದರು.

ದಕ್ಷಿಣ ಆಫ್ರಿಕಾದ ವೇಯ್ನ್ ಪಾರ್ನೆಲ್​ ಮತ್ತು ಪ್ರಸಿದ್ಧ ಸೆಲೆಬ್ರಿಟಿಗಳೊಂದಿಗೆ ಮುಂಬೈ ಪಾರ್ಟಿಯೊಂದರಲ್ಲಿ ಮಾದಕ ವಸ್ತುವನ್ನು ಸೇವಿಸಿರುವುದು ಖಚಿತವಾದ ಮೇಲೆ ಅವರ ವೃತ್ತಿ ಜೀವನ ಮೊಟುಕುಗೊಂಡಿತು. ಪ್ರಸ್ತುತ ಶರ್ಮಾ ಪಂಜಾಬ್​ನ ಅಂತರ್​ ಜಿಲ್ಲಾ ಪಂದ್ಯಗಳನ್ನಾಡುತ್ತಿದ್ದಾರೆ. ಮತ್ತು ಪಂಜಾಬ್ ತಂಡದ ಪರ ದೇಶಿಯ ಕ್ರಿಕೆಟ್​ಗೆ ಮರಳಲು ಪ್ರಯತ್ನಿಸುತ್ತಿದ್ದಾರೆ.

ಸ್ವಪ್ನಿಲ್ ಆಸ್ನೋಡಕರ್​(ರಾಜಸ್ಥಾನ್ ರಾಯಲ್ಸ್​)

ಸ್ವಪ್ನಿಲ್ ಅಸ್ನೋಡಕರ್​

ಸ್ವಪ್ನಿಲ್​ 2008ರ ಚೊಚ್ಚಲ ಆವೃತ್ತಿಯ ಐಪಿಎಲ್​ ಗೆದ್ದ ರಾಜಸ್ಥಾನ್​ ತಂಡದ ಪ್ರಮುಖ ಆಟಗಾರರಾಗಿದ್ದರು. ಬಲಗೈ ಆಟಗಾರನಾಗಿದ್ದ ಅವರು 9 ಪಂದ್ಯಗಳಿಂದ 311 ರನ್​ ಸಿಡಿಸುವ ಮೂಲಕ ಭಾರತ ತಂಡಕ್ಕೆ ಆಡಲಿರುವ ಆಟಗಾರ ಎಂದು ಗುರುತಿಸಿಕೊಂಡರು. ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಗ್ರೇಮ್​ ಸ್ಮಿತ್ ಜೊತೆಗೂಡಿ 59.71 ರ ಸರಾಸರಿಯಲ್ಲಿ 418 ರನ್​ ಆರಂಭಿಕ ಜೊತೆಯಾಟ ನೀಡಿ ಟೂರ್ನಮೆಂಟ್​ ಗೆಲ್ಲಲು ನೆರವಾಗಿದ್ದರು.

ಆದರೆ ಮುಂದಿನ 11 ಐಪಿಎಲ್​ ಪಂದ್ಯಗಳಿಂದ 112 ರನ್​ ಮಾತ್ರ ಗಳಿಸಿದ ಅವರು ಮುಂದೆಂದು ಟಿ20 ಲೀಗ್​ನಲ್ಲಿ ಕಾಣಿಸಿಕೊಳ್ಳಲಿಲ್ಲ. ಐಪಿಎಲ್​ ಅಷ್ಟೇ ಅಲ್ಲ, ಅವರು 2011ರಿಂದ ಗೋವಾ ತಂಡದಲ್ಲೂ ಕಾಣಿಸಿಕೊಂಡಿಲ್ಲ.

ಮನ್ವಿಂದರ್​ ಬಿಸ್ಲಾ(ಕೆಕೆಆರ್​)

ಮನ್ವಿಂದರ್​ ಬಿಸ್ಲಾ

2012 ಐಪಿಎಲ್ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ 89 ರನ್​ ಸಿಡಿಸಿ ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡಕ್ಕೆ ಚೊಚ್ಚಲ ಐಪಿಎಲ್ ಪ್ರಶಸ್ತಿ ತಂದುಕೊಟ್ಟಿದ್ದರು. ಬಿಸ್ಲಾರನ್ನು 2009ರಲ್ಲಿ ಡೆಕ್ಕನ್​ ಜಾರ್ಜಸ್​ ಖರೀದಿಸಿತ್ತು. ಆದರೆ ಕೇವಲ 6 ಪಂದ್ಯಗಳನ್ನಷ್ಟೇ ಆಡಿದರು. ನಂತರ 2012ರ ಫೈನಲ್​ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರಿದ್ದರಿಂದ 2013ರಲ್ಲೂ ಕೆಕೆಆರ್​ ತಂಡದಲ್ಲೇ ಉಳಿದುಕೊಂಡು 14 ಪಂದ್ಯಗಳಿಂದ 255 ರನ್​ ಸಿಡಿಸಿದರು. 2015ರಲ್ಲಿ ತಂಡದಿಂದ ಬಿಡುಗಡೆ ಹೊಂದಿದ ಅವರನ್ನು ಆರ್​ಸಿಬಿ ತಂಡ ಖರೀದಿಸಿದರೂ ಬಹುತೇಕ ಬೆಂಚ್​ ಕಾಯಿಸಿತು. ಪರಿಣಾಮ ಅವರು 2016, 2017ರಲ್ಲಿ ಅನ್​ಸೋಲ್ಡ್ ಆಗುವುದರೊಂದಿಗೆ ಐಪಿಎಲ್​ಗೆ ಕಮ್​ಬ್ಯಾಕ್​ ಆಗಲು ವಿಫಲರಾದರು.

ಡಾಗ್ ಬೊಲಿಂಜರ್​(ಚೆನ್ನೈ ಸೂಪರ್ ಕಿಂಗ್ಸ್​)

ಡಾಗ್​ ಬೊಲಿಂಜರ್​

ಡಾಗ್ ಬೊಲಿಂಜರ್​ ಐಪಿಎಲ್​ನಲ್ಲಿ ಭರವಸೆಯ ಬೌಲರ್​ ಎನಿಸಿಕೊಂಡಿದ್ದರು. 2010ರಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ಗೆ ತಮ್ಮ ಮೊದಲ ಪ್ರಶಸ್ತಿಯನ್ನು ಗೆದ್ದ ತಂಡದಲ್ಲಿದ್ದ ಬೊಲಿಂಜರ್​ 2011ರಲ್ಲಿ ತಂಡ ಸತತ ಎರಡು ಪ್ರಶಸ್ತಿಗಳನ್ನು ಗೆಲ್ಲಲು ನೆರವಾಗಿದ್ದರು. ಅವರು 27 ಪಂದ್ಯಗಳಿಂದ 37 ವಿಕೆಟ್​ ಪಡೆದಿದ್ದರು. ಆಶ್ಚರ್ಯಕರ ಸಂಗತಿಯೆಂದರೆ ನಂತರದ ಆವೃತ್ತಿಗಳಲ್ಲಿ ಅವರು ಉತ್ತಮ ದಾಖಲೆ ಪ್ರದರ್ಶನದ ಹೊರತಾಗಿಯೂ ಹರಾಜಿನಲ್ಲಿ ಕಡೆಗಣಿಸಲ್ಪಟ್ಟರು.

ABOUT THE AUTHOR

...view details