ಮುಂಬೈ: ಭಾರತದ ಬ್ಯಾಟಿಂಗ್ ಐಕಾನ್ ಸಚಿನ್ ತೆಂಡೂಲ್ಕರ್ ಮಂಗಳವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ ಅದ್ಭುತ ಪ್ರದರ್ಶನ ತೋರಿ 4 ವಿಕೆಟ್ ಪಡೆದಿದ್ದ ಜಸ್ಪ್ರೀತ್ ಬುಮ್ರಾ ಅವರನ್ನು ಹಾಡಿ ಹೊಗಳಿದ್ದಾರೆ.
ಬುಮ್ರಾ ನಿನ್ನೆಯ ಪಂದ್ಯದಲ್ಲಿ ಕೇವಲ 20 ರನ್ಗಳನ್ನು ನೀಡಿ 4 ವಿಕೆಟ್ ಪಡೆದಿದ್ದರು. ಇವರ ಬೌಲಿಂಗ್ ನೆರವಿನಿಂದ ಮುಂಬೈ ತಂಡ ರಾಜಸ್ಥಾನ್ ತಂಡವನ್ನು 136 ರನ್ಗಳಿಗೆ ನಿಯಂತ್ರಿಸಿ 57 ರನ್ಗಳ ಭರ್ಜರಿ ಜಯ ಸಾಧಿಸಿತ್ತು.
ಮುಂಬೈ ಇಂಡಿಯನ್ಸ್ ಆರಂಭಿಕ ವಿಕೆಟ್ ಕಬಳಿಸುವ ಮೂಲಕ ಉತ್ತಮವಾಗಿ ಆರಂಭ ಪಡೆಯಿತು. ಇನ್ನು ಬುಮ್ರಾ "ಅಸಾಧಾರಣ" ಬೌಲಿಂಗ್ ಪ್ರದರ್ಶನ ನೀಡಿದರೆಂದು ಸಚಿನ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
"ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಬಲಿಷ್ಠ ಪ್ರದರ್ಶನ ತೋರಿದೆ. ಅವರು ಬೇಗ ವಿಕೆಟ್ಗಳನ್ನು ಪಡೆಯುವ ಮೂಲಕ ಅದ್ಭುತ ಆರಂಭ ಪಡೆಯುವ ಮೂಲಕ, ಎದುರಾಳಿ ಇನ್ನಿಂಗ್ಸ್ ಬ್ರೇಕ್ ಮಾಡುವುದನ್ನು ಮುಂದುವರಿಸಿದ್ದಾರೆ. ಅದರಲ್ಲೂ ಜಸ್ಪ್ರೀತ್ ಬುಮ್ರಾ ಅವರ ಬೌಲಿಂಗ್ ಅಸಾಧಾರಣವಾಗಿತ್ತು. ಅವರ ಬೌಲಿಂಗ್ ಅನ್ನು ಈ ರಾತ್ರಿ ಆನಂದಿಸಿದ್ದೇನೆ " ಎಂದು ಸಚಿನ್ ಟ್ವೀಟ್ ಮೂಲಕ ಮುಂಬೈ ಇಂಡಿಯನ್ಸ್ಗೆ ಅಭಿನಂದಿಸಿದ್ದಾರೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಮುಂಬೈ ತಂಡಕ್ಕೆ ಸೂರ್ಯ ಕುಮಾರ್ ಯಾದವ್ 79, ಪಾಂಡ್ಯ 30 ಹಾಗೂ ರೋಹಿತ್ 33 ರನ್ಗಳಿಸಿ ಸತತ 5ನೇ ಪಂದ್ಯದಲ್ಲಿ 190 ಕ್ಕೂ ಹೆಚ್ಚು ರನ್ ದಾಖಲಿಸಿತ್ತು.
ಬುಮ್ರಾ, ಬೌಲ್ಟ್ ಹಾಗೂ ಜೇಮ್ಸ್ ಪ್ಯಾಟಿನ್ಸನ್ ಅವರ ಅದ್ಭುತ ಬೌಲಿಂಗ್ ನೆರವಿನಿಂದ ರಾಯಲ್ಸ್ ತಂಡವನ್ನು 18.1 ಓವರ್ಗಳಲ್ಲಿ 136 ರನ್ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಗಿ 57 ರನ್ಗಳ ಜಯ ಸಾಧಿಸಿತ್ತು.