ಕರ್ನಾಟಕ

karnataka

ETV Bharat / sports

ಐಪಿಎಲ್​ಗಾಗಿ ರೋಹಿತ್ ಶರ್ಮಾ ಯುಎಇಗೆ ಕೊಂಡೊಯ್ದಿರುವ ಬ್ಯಾಟ್​ಗಳೆಷ್ಟು ಗೊತ್ತಾ? - ಐಪಿಎಲ್​ 2020 ಲೇಟೆಸ್ಟ್​ ನ್ಯೂಸ್​

ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧ ಸೋಲು ಕಂಡಿದ್ದ ಮುಂಬೈ ಇಂಡಿಯನ್ಸ್​, ಎರಡನೇ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ರೋಹಿತ್ ಅವರ 80 ರನ್​ಗಳ ಸೂಪರ್​ ಬ್ಯಾಟಿಂಗ್ ನೆರವಿನಿಂದ ಮೊದಲ ಜಯ ಸಾಧಿಸಿದೆ. ತನ್ನ ಮುಂದಿನ ಪಂದ್ಯದಲ್ಲಿ ರೋಹಿತ್ ಪಡೆ ಸೆಪ್ಟೆಂಬರ್​ 28ರಂದು ರಾಯಲ್ ಚಾಲೆಂಜರ್ಸ್​ ಬೆಂಗಳೂರು ವಿರುದ್ಧ ಕಾದಾಡಲಿದೆ..

ರೋಹಿತ್ ಶರ್ಮಾ
ರೋಹಿತ್ ಶರ್ಮಾ

By

Published : Sep 26, 2020, 8:59 PM IST

ಅಬುಧಾಬಿ :ಮುಂಬೈ ಇಂಡಿಯನ್ಸ್​ ತಂಡದ ನಾಯಕ ರೋಹಿತ್ ಶರ್ಮಾ ದುಬೈನಲ್ಲಿ ನಡೆಯುತ್ತಿರುವ ಐಪಿಎಲ್​ಗಾಗಿ 9 ಬ್ಯಾಟ್​ಗಳನ್ನು ಕೊಂಡೊಯ್ದಿರುವುದಾಗಿ ಬಹಿರಂಗಪಡಿಸಿದ್ದಾರೆ.

ಚುಟುಕು ಕ್ರಿಕೆಟ್​ ಆಡುವಾಗ ಒಂದು ಬ್ಯಾಟ್​ನಲ್ಲಿ ಸುಮಾರು ಒಂದು ಅಥವಾ ಎರಡು ತಿಂಗಳು ಕಾಲ ಆಡಬಹುದು. ಆದರೆ, ಬ್ಯಾಟ್​ ಅಗತ್ಯವಾದ ಸಂದರ್ಭದಲ್ಲಿ ದೊರೆಯದಿರಬಹುದು ಎಂಬ ಕಾರಣಕ್ಕೆ 9 ಬ್ಯಾಟ್​ಗಳನ್ನು ತಮ್ಮ ಜೊತೆ ಕೊಂಡೊಯ್ದಿರುವುದಾಗಿ ರೋಹಿತ್ ಹೇಳಿದ್ದಾರೆ. ಬ್ಯಾಟ್​ಗಳ ದೀರ್ಘಾಯುಷ್ಯ ನಾವು ಆಡುವ ಕ್ರಿಕಟ್​ ಸ್ವರೂಪವನ್ನು ಅವಲಂಬಿಸಿರುತ್ತದೆ ಎಂದು ಮುಂಬೈ ಇಂಡಿಯನ್ಸ್​ ನಾಯಕ ಅಭಿಪ್ರಾಯಪಟ್ಟಿದ್ದಾರೆ.

"ನಾನು ಉಪಯೋಗಿಸುವ ಬ್ಯಾಟ್​ ತುಂಬಾ ದಿನಗಳವರೆಗೆ ಬರುತ್ತದೆ. ದೀರ್ಘ ಸಮಯದವರೆಗೆ, ಅಂದರೆ ನಾನು ನಾಲ್ಕೈದು ತಿಂಗಳು ಎಂದು ಹೇಳುತ್ತಿದ್ದೇನೆ. ಆದರೆ, ಬ್ಯಾಟ್​ಗಳ ಆಯಸ್ಸು ನಾವು ಆಡುತ್ತಿರುವ ಕ್ರಿಕೆಟ್​ನ ಸ್ವರೂಪದ ಮೇಲೆ ಅವಲಂಬಿತವಾಗಿರುತ್ತದೆ. ನೀವು ಟಿ20 ಕ್ರಿಕೆಟ್​ ಆಡುತ್ತಿರುವಾಗ ಸಾಕಷ್ಟು ದೊಡ್ಡ ಹೊಡೆತಗಳನ್ನು ಪ್ರಯೋಗಿಸಬೇಕಾಗಿರುತ್ತದೆ.

ಹೊಸ ಹೊಸ ಹೊಡೆತಗಳನ್ನು ಅಭ್ಯಾಸ ಮಾಡಬೇಕಾಗಿರುವುದರಿಂದ ಬ್ಯಾಟ್​ಗಳು ಮುರಿಯುವ ಸಾಧ್ಯತೆಯಿದೆ" ಎಂದು ಮುಂಬೈ ಇಂಡಿಯನ್ಸ್​ ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿರುವ ವಿಡಿಯೋದಲ್ಲಿ ಹಿಟ್​ಮ್ಯಾನ್ ಹೇಳಿದ್ದಾರೆ. "ಟಿ20 ಸ್ವರೂಪವಾಗಿರುವ ಐಪಿಎಲ್​ ನಡೆಯುವಾಗ, ಸಾಮಾನ್ಯವಾಗಿ ನನ್ನ ಬ್ಯಾಟ್​ ಒಂದು ಅಥವಾ ಎರಡು ತಿಂಗಳು ಬರುತ್ತದೆ. ಆದರೆ, ಈಗ ಕಠಿಣ ಪರಿಸ್ಥಿತಿಯಲ್ಲಿದ್ದೇವೆ. ಕೊರಿಯರ್​ ಸಮಯಕ್ಕೆ ಸರಿಯಾಗಿ ತಲುಪುತ್ತದೆ ಎಂದು ನಮಗೆ ಗೊತ್ತಿಲ್ಲ. ಹಾಗಾಗಿ, ನನ್ನೊಂದಿಗೆ 9 ಬ್ಯಾಟ್​ಗಳನ್ನು ತೆಗೆದುಕೊಂಡು ಬಂದಿದ್ದೇನೆ" ಎಂದು ರೋಹಿತ್ ಹೇಳಿದ್ದಾರೆ.

ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧ ಸೋಲು ಕಂಡಿದ್ದ ಮುಂಬೈ ಇಂಡಿಯನ್ಸ್​, ಎರಡನೇ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ರೋಹಿತ್ ಅವರ 80 ರನ್​ಗಳ ಸೂಪರ್​ ಬ್ಯಾಟಿಂಗ್ ನೆರವಿನಿಂದ ಮೊದಲ ಜಯ ಸಾಧಿಸಿದೆ. ತನ್ನ ಮುಂದಿನ ಪಂದ್ಯದಲ್ಲಿ ರೋಹಿತ್ ಪಡೆ ಸೆಪ್ಟೆಂಬರ್​ 28ರಂದು ರಾಯಲ್ ಚಾಲೆಂಜರ್ಸ್​ ಬೆಂಗಳೂರು ವಿರುದ್ಧ ಕಾದಾಡಲಿದೆ.

ರೋಹಿತ್ ಶರ್ಮಾ

ABOUT THE AUTHOR

...view details