ಕರ್ನಾಟಕ

karnataka

ETV Bharat / sports

ಐಪಿಎಲ್​ 2020: ತಂಡ ಕೊನೆ ಸ್ಥಾನದಲ್ಲಿದ್ದರೂ ರಾಹುಲ್​​ ಆರೇಂಜ್​ ಕ್ಯಾಪ್​ ಸರದಾರ, ರಬಾಡಾ ಬಳಿ ಪರ್ಪಲ್​! - ಐಪಿಎಲ್​ ಪರ್ಪಲ್​, ಆರೇಂಜ್​ ಕ್ಯಾಪ್​ ಸುದ್ದಿ

13ನೇ ಆವೃತ್ತಿ ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಕೆಲ ಬ್ಯಾಟ್ಸ್​ಮನ್​ ಹಾಗೂ ಬೌಲರ್​ಗಳ ಆರ್ಭಟ ಮುಂದುವರೆದಿದೆ.

IPL 13
IPL 13

By

Published : Oct 9, 2020, 5:35 PM IST

ದುಬೈ: ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್​ ಲೀಗ್​ ಟೂರ್ನಿಯಲ್ಲಿ ವಿವಿಧ ತಂಡದ ಬ್ಯಾಟ್ಸ್​​ಮನ್​ಗಳ ಬ್ಯಾಟಿಂಗ್ ಅಬ್ಬರ ಹಾಗೂ ಬೌಲರ್​ಗಳ ಮಾರಕ ಬೌಲಿಂಗ್​​ ದಾಳಿ ಪ್ರದರ್ಶನ ಮುಂದುವರೆದಿದೆ.

ಕಿಂಗ್ಸ್​​ ಇಲೆವೆಲ್​ ಪಂಜಾಬ್​ ತಂಡದ ಕ್ಯಾಪ್ಟನ್​ ಕೆಎಲ್​ ರಾಹುಲ್​​ ಟೂರ್ನಿಯಲ್ಲಿ ಇಲ್ಲಿಯವರೆಗೆ ಅತಿ ಹೆಚ್ಚು ರನ್​ಗಳಿಕೆ ಮಾಡಿ ಆರೇಂಜ್​ ಕ್ಯಾಪ್​ ಉಳಿಸಿಕೊಂಡಿದ್ದು, ಡೆಲ್ಲಿ ಕ್ಯಾಪಿಟಲ್​​​ ತಂಡದ ವೇಗದ ಬೌಲರ್​ ಕಾಗಿಸೋ ರಬಾಡಾ ಅತಿ ಹೆಚ್ಚು ವಿಕೆಟ್​ ಪಡೆದುಕೊಳ್ಳುವ ಮೂಲಕ ಪರ್ಪಲ್ ಕ್ಯಾಪ್​ ಉಳಿಸಿಕೊಂಡಿದ್ದಾರೆ.

ಆರೇಂಜ್​ ಕ್ಯಾಪ್​ ರಾಹುಲ್​ ಬಳಿ, ರಬಾಡಾ ಬಳಿ ಪರ್ಪಲ್

ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧದ ಪಂದ್ಯದಲ್ಲಿ ರಾಹುಲ್​ ಕೇವಲ 11ರನ್​ಗಳಿಕೆ ಮಾಡಿ ವಿಕೆಟ್​ ಒಪ್ಪಿಸಿದ್ರೂ, ಇಲ್ಲಿಯವರೆಗೆ ತಾವು ಆಡಿರುವ ಆರು ಪಂದ್ಯಗಳಿಂದ 313ರನ್​ಗಳಿಕೆ ಮಾಡಿ ಮೊದಲ ಸ್ಥಾನದಲ್ಲಿದ್ದಾರೆ. ನಂತರದ ಸ್ಥಾನದಲ್ಲಿ ಚೆನ್ನೈ ತಂಡದ ಡುಪ್ಲೆಸಿ(299 ರನ್​​) ಹಾಗೂ ಮೂರನೇ ಸ್ಥಾನದಲ್ಲಿ ಪಂಜಾಬ್​ ತಂಡದ ಮಯಾಂಕ್​ ಅಗರವಾಲ್​​ (281 ರನ್​​) ಇದ್ದಾರೆ.

ಪರ್ಪಲ್​ ಕ್ಯಾಪ್​ ಉಳಿಸಿಕೊಂಡಿರುವ ಕಾಗಿಸೋ ರಬಾಡಾ ಐದು ಪಂದ್ಯಗಳಿಂದ 20 ಓವರ್​ ಮಾಡಿ 12 ವಿಕೆಟ್​ ಪಡೆದುಕೊಂಡಿದ್ದಾರೆ. ಉಳಿದಂತೆ ಮುಂಬೈ ಇಂಡಿಯನ್ಸ್​​ ತಂಡದ ಬುಮ್ರಾ 11ವಿಕೆಟ್​ ಹಾಗೂ ಬೊಲ್ಟ್​​ 10 ವಿಕೆಟ್​ ಪಡೆದು ನಂತರದ ಸ್ಥಾನದಲ್ಲಿದ್ದಾರೆ.

ಐಪಿಎಲ್ ಪಾಯಿಂಟ್ ಟೆಬಲ್​​

ಆಡಿರುವ ಆರು ಪಂದ್ಯಗಳಲ್ಲಿ ನಾಲ್ಕು ಪಂದ್ಯ ಗೆದ್ದಿರುವ ಮುಂಬೈ ಇಂಡಿಯನ್ಸ್​ ಮೊದಲ ಸ್ಥಾನದಲ್ಲಿದ್ದು, ಡೆಲ್ಲಿ ಎರಡನೇ ಹಾಗೂ ಹೈದರಾಬಾದ್​​ ಮೂರನೇ ಸ್ಥಾನದಲ್ಲಿದೆ. ಕೇವಲ ಒಂದು ಪಂದ್ಯ ಗೆದ್ದಿರುವ ಪಂಜಾಬ್​ ತಂಡ ಕೊನೆಯ ಸ್ಥಾನದಲ್ಲಿದೆ.

ABOUT THE AUTHOR

...view details