ಕರ್ನಾಟಕ

karnataka

ETV Bharat / sports

ಐಪಿಎಲ್​ 2020.. 20ನೇ ಓವರ್​ನಲ್ಲಿ ಬ್ಯಾಟ್ಸ್​ಮನ್​ಗಳ ಪ್ರದರ್ಶನ ಹೀಗಿದೆ..

ಬೌಲಿಂಗ್ ಪರ ನೋಡುವುದಾದ್ರೆ 16 ಮತ್ತು 20ನೇ ಓವರ್​ಗಳಲ್ಲಿ ಅತಿ ಹೆಚ್ಚು ವಿಕೆಟ್​ ಬಿದ್ದಿವೆ. ಈ ಎರಡು ಓವರ್​ಗಳಲ್ಲಿ ಕಳೆದ 8 ಪಂದ್ಯಗಳಿಂದ ತಲಾ 11 ಬ್ಯಾಟ್ಸ್​ಮನ್​ಗಳು ಔಟಾಗಿದ್ದಾರೆ. 13ನೇ ಐಪಿಎಲ್​ನ 2ನೇ ಓವರ್​ನಲ್ಲಿ 6ಕ್ಕಿಂತ ಹೆಚ್ಚು ಬ್ಯಾಟ್ಸ್​ಮನ್​ಗಳು ಔಟಾಗಿದ್ದಾರೆ..

ಐಪಿಎಲ್​ 2020
ಐಪಿಎಲ್​ 2020

By

Published : Sep 27, 2020, 6:13 PM IST

ಶಾರ್ಜಾ: ಟಿ20 ಕ್ರಿಕೆಟ್​ನಲ್ಲಿ 20ನೇ ಓವರ್‌ನಲ್ಲಿ ಸಾಮಾನ್ಯವಾಗಿ ಬ್ಯಾಟ್ಸ್​ಮನ್​ಗಳು ಅತಿ ಹೆಚ್ಚು ರನ್​ಗಳಿಕೆ ಮಾಡಲು ಬಯಸುತ್ತಾರೆ. ಅದು 13ನೇ ಆವೃತ್ತಿಯಲ್ಲೂ ಭಿನ್ನವಾಗಿಲ್ಲ. ಈ ವರ್ಷ ಮುಗಿದಿರುವ 8 ಪಂದ್ಯಗಳಲ್ಲಿ 13 ಇನ್ನಿಂಗ್ಸ್​ಗಳಲ್ಲಿ 20 ಓವರ್​ಗಳ ಆಟ ಕಂಡು ಬಂದಿದ್ದು, ಇದರಲ್ಲಿ ವಿವಿಧ ತಂಡಗಳು 14.54ರ ಸರಾಸರಿಯಲ್ಲಿ ರನ್​ಗಳಿಸಿವೆ.

ಹಿರಿಯ ಕ್ರಿಕೆಟ್​ ಅಂಕಿ ಅಂಶ ತಜ್ಞ ಮೋಹನ್ ದಾಸ್​ ಮೆನನ್​ ಅವರ ಪ್ರಕಾರ, 8 ಪಂದ್ಯಗಳಿಂದ ಕೊನೆಯ ಓವರ್​ನ 78(13 ಓವರ್​) ಎಸೆತಗಳಲ್ಲಿ ಬ್ಯಾಟ್ಸ್​ಮನ್​ಗಳು 189 ರನ್​ ಸೂರೆಗೈದಿದ್ದಾರೆ. ಈ ಓವರ್​ ಹೊರತು ಪಡಿಸಿದ್ರೆ ಅತಿ ಹೆಚ್ಚು ರನ್​ ಕಂಡು ಬಂದಿರುವುದು 18ನೇ ಓವರ್​ನಲ್ಲಿ. ಈ ಓವರ್​ನಲ್ಲಿ 11.80 ಸರಾಸರಿ ರನ್​ ಕಂಡು ಬಂದಿದೆ. 17 ನೇ ಓವರ್​ನಲ್ಲಿ 10.44 ಸರಾಸರಿಯಲ್ಲಿ ರನ್​ ಬರುತ್ತಿದೆ.

ಕೆಎಲ್​ ರಾಹುಲ್​

ಸ್ಲಾಗ್​ ಓವರ್​ಗಳಲ್ಲಿ ನೋಡುವುದಾದ್ರೆ 19ನೇ ಓವರ್​ನಲ್ಲಿ ಬೌಲರ್​ಗಳಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿದ್ದಾರೆ. ಈ ಓವರ್​ನಲ್ಲಿ 9.14 ಸರಾಸರಿಯಲ್ಲಿ ರನ್​ ದಾಖಲಾಗಿದೆ ಎಂದು ಮೆನನ್​ ಮಾಧ್ಯಮಕ್ಕೆ ಹೇಳಿದ್ದಾರೆ.

ಮಾರ್ಕಸ್​ ಸ್ಟೋಯ್ನಿಸ್​

ಬೌಲಿಂಗ್ ಪರ ನೋಡುವುದಾದ್ರೆ 16 ಮತ್ತು 20ನೇ ಓವರ್​ಗಳಲ್ಲಿ ಅತಿ ಹೆಚ್ಚು ವಿಕೆಟ್​ ಬಿದ್ದಿವೆ. ಈ ಎರಡು ಓವರ್​ಗಳಲ್ಲಿ ಕಳೆದ 8 ಪಂದ್ಯಗಳಿಂದ ತಲಾ 11 ಬ್ಯಾಟ್ಸ್​ಮನ್​ಗಳು ಔಟಾಗಿದ್ದಾರೆ. 13ನೇ ಐಪಿಎಲ್​ನ 2ನೇ ಓವರ್​ನಲ್ಲಿ 6ಕ್ಕಿಂತ ಹೆಚ್ಚು ಬ್ಯಾಟ್ಸ್​ಮನ್​ಗಳು ಔಟಾಗಿದ್ದಾರೆ.

ಮೊದಲ ಓವರ್​ನಲ್ಲಿ ಕೇವಲ 2 ವಿಕೆಟ್​ ಮಾತ್ರ ಬಿದ್ದಿವೆ ಎಂದು ಮೋಹನ್​ ಹೇಳಿದ್ದಾರೆ. 1 ,8 ಹಾಗೂ 13 ನೇ ಓವರ್​ಗಳಲ್ಲಿ ಅತ್ಯಂತ ಕಡಿಮೆ ಅಂದ್ರೆ ಕೇವಲ 2 ವಿಕೆಟ್​ ಮಾತ್ರ ಬೌಲರ್​ಗಳು ಪಡೆಯುವಲ್ಲಿ ಸಫಲರಾಗಿದ್ದಾರೆ.

ABOUT THE AUTHOR

...view details