ಹೈದರಾಬಾದ್:ಕಳೆದ ಕೆಲ ದಿನಗಳಿಂದ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಲ್ಲಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗುತ್ತಿದೆ. ಇದರ ಮಧ್ಯೆ ಸೆಪ್ಟೆಂಬರ್ 19ರಿಂದ 13ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಗೊಳ್ಳಲಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸದಸ್ಯರು ಹೀಗಾಗಿ ಭಾರತೀಯ ಕ್ರಿಕೆಟ್ ಮಂಡಳಿ ಎಲ್ಲ ಫ್ರಾಂಚೈಸಿಗಳ ಪ್ಲೇಯರ್ಸ್ಗೆ ಎಚ್ಚರಿಕೆ ನೀಡಿದ್ದು, ಯಾವುದೇ ಕಾರಣಕ್ಕೂ ಕೋವಿಡ್ ಪ್ರೋಟೋಕಾಲ್ ಮುರಿಯುವ ಧೈರ್ಯ ಮಾಡಬೇಡಿ ಎಂದಿದೆ.
ಐಪಿಎಲ್ಗೋಸ್ಕರ ಈಗಾಗಲೇ ಕೆಲವು ತಂಡಗಳು ಈಗಾಗಲೇ ದುಬೈಗೆ ಪ್ರಯಾಣ ಬೆಳೆಸಿದ್ದು, ಮುಂದಿನ ಕೆಲ ದಿನಗಳಲ್ಲಿ ಉಳಿದ ತಂಡಗಳು ಅಲ್ಲಿಗೆ ತೆರಳಲಿವೆ.
ಇಂಡಿಯನ್ ಪ್ರೀಮಿಯರ್ ಲೀಗ್ ಐಪಿಎಲ್ನಲ್ಲಿ ಭಾಗಿಯಾಗುತ್ತಿರುವ ಆಟಗಾರರು ಕಾಳಜಿ ವಹಿಸುವಂತೆ ಈಗಾಗಲೇ ಫ್ರಾಂಚೈಸಿಗಳ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಇದರ ಜತೆಗೆ ಎಲ್ಲ ಪ್ಲೇಯರ್ಸ್, ಕೋಚ್, ಸಹಾಯಕ ಸಿಬ್ಬಂದಿ ಹಾಗೂ ತಂಡದ ಮಾಲೀಕರು ಯಾವುದೇ ಕಾರಣಕ್ಕೂ ಪ್ರೋಟೋಕಾಲ್ ಬ್ರೇಕ್ ಮಾಡದಂತೆ ತಿಳಿಸಲಾಗಿದೆ ಎಂದು ಬಿಸಿಸಿಐ ತಿಳಿಸಿದೆ.
ಮುಂಬೈ ಇಂಡಿಯನ್ಸ್ ಪ್ಲೇಯರ್ಸ್ ಪಂದ್ಯಗಳಿಲ್ಲದ ವೇಳೆ ಬೇರೆ ಬೇರೆ ಸ್ಥಳಗಳಲ್ಲಿ ಓಡಾಟ ಮಾಡುವುದಕ್ಕೆ ಸಂಪೂರ್ಣವಾಗಿ ನಿರ್ಬಂಧ ಹೇರಲಾಗಿದೆ. ಬಿಸಿಸಿಐ ಹೊರಡಿಸಿರುವ ಮಾರ್ಗಸೂಚಿಯನ್ನು ಎಲ್ಲರೂ ಪಾಲಿಸಬೇಕು. ಕಳೆದ ತಿಂಗಳು ಇಂಗ್ಲೆಂಡ್ ತಂಡದ ವೇಗಿ ಜೋಫ್ರಾ ಆರ್ಚರ್ ಪ್ರೋಟೋಕಾಲ್ ಬ್ರೇಕ್ ಮಾಡಿದ್ದರಿಂದ ಎರಡನೇ ಟೆಸ್ಟ್ನಿಂದ ಅವರನ್ನು ಕೈಬಿಟ್ಟು ಕ್ವಾರಂಟೈನ್ ಮಾಡಲಾಗಿತ್ತು.