ದುಬೈ:13ನೇ ಆವೃತ್ತಿಯ ಐಪಿಎಲ್ ಆಯೋಜನೆಗೆ ಸಿದ್ಧವಾಗಿರುವ ಯುಎಇನ ಎಲ್ಲಾ ಮೂರು ಸ್ಥಳಗಳಲ್ಲಿನ ಸೌಲಭ್ಯಗಳ ಸಮೀಕ್ಷೆಗಾಗಿ ಆಗಸ್ಟ್ ಮೂರನೇ ವಾರ ಯುಎಇಗೆ ಬಿಸಿಸಿಐನ ಉನ್ನತ ದರ್ಜೆಯ ತಂಡ ಭೇಟಿ ನೀಡಲಿದೆ.
ಗಲ್ಫ್ ಟೈಮ್ಸ್ನ ವರದಿಯ ಪ್ರಕಾರ, ದುಬೈಗೆ ತೆರಳಲಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ತಂಡದಲ್ಲಿ ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್, ಬಿಸಿಸಿಐನ ಮಧ್ಯಂತರ ಸಿಇಒ ಹೇಮಂಗ್ ಅಮೀನ್ ಮತ್ತು ಐಪಿಎಲ್ನ ಸಿಒಒ ಇದ್ದಾರೆ. ಈ ವೇಳೆ ಆರು ದಿನಗಳ ಕಾಲ ಹೋಟೆಲ್ನಲ್ಲಿ ಕ್ವಾರಂಟೈನ್ ಆಗಲಿದ್ದು, ನಂತರ ತಮ್ಮ ಕಾರ್ಯ ಚಟುವಟಿಕೆ ಆರಂಭಿಸಲಿದ್ದಾರೆ ಎಂಬ ಮಾಹಿತಿ ದೊರೆತಿದೆ.
ಶೀರ್ಷಿಕೆ ಪ್ರಾಯೋಜಕತ್ವ ಪಡೆಯಲು ಪೈಪೋಟಿಯಲ್ಲಿರುವ ಕಂಪನಿಗಳು ಭಾರತದಲ್ಲಿ ಕೋವಿಡ್-19 ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಪ್ರಸಕ್ತ ವರ್ಷದ ಐಪಿಎಲ್ ಟೂರ್ನಿಯನ್ನು ಯುಎಇನಲ್ಲಿ ಆಯೋಜಿಸಲು ಬಿಸಿಸಿಐಗೆ ಗ್ರೀನ್ ಸಿಗ್ನಲ್ ನೀಡಿದೆ.
ಈಗಾಗಲೆ ಬಿಸಿಸಿಐ ವಿವೋದಿಂದ ತೆರವಾಗಿರುವ ಶೀರ್ಷಿಕೆ ಪ್ರಾಯೋಜಕತ್ವಕ್ಕೂ ಟೆಂಡರ್ ಕರೆದಿದೆ. ಜಿಯೋ ಅಮೇಜಾನ್, ಬೈಜುಸ್, ಟಾಟ್ ಗ್ರೂಪ್ಸ್ , ಅದಾನಿ ಗ್ರೂಪ್ಸ್ ಹಾಗೂ ಪತಂಜಲಿ ಐಪಿಎಲ್ ಪ್ರಾಯೋಜಕತ್ವ ಪಡೆಯಲು ಆಸಕ್ತಿ ತೋರಿಸುತ್ತಿವೆ. ಆಗಸ್ಟ್ 18ರಂದು ಫೈನಲ್ ಬಿಡ್ ನಡೆಯಲಿದೆ ಎಂದು ತಿಳಿದುಬಂದಿದೆ.
ಈ ಸಲದ ಟೂರ್ನಿ ಅಬುದಾಬಿ, ಶಾರ್ಜಾ ಹಾಗೂ ದುಬೈನಲ್ಲಿ ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ ನಡೆಯಲಿದೆ.