ಮುಂಬೈ: ನವೆಂಬರ್ 27ರಿಂದ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಸ್ನಾಯು ಸೆಳೆತಕ್ಕೊಳಗಾಗಿರುವ ಭಾರತ ತಂಡದ ಉಪನಾಯಕ ರೋಹಿತ್ ಶರ್ಮಾ ಅವರನ್ನು ಬಿಸಿಸಿಐ ಆಯ್ಕೆ ಸಮಿತಿ ಕಡೆಗಣಿಸಿದೆ. ಆದರೆ, ಅವರ ಲಭ್ಯತೆ ನಾಳೆ ನಿರ್ಧಾರವಾಗಲಿದೆ.
ಕಳೆದ ಸೋಮವಾರ ಬಿಸಿಸಿಐ ಆಯ್ಕೆ ಸಮಿತಿ ಮೂರು ಮಾದರಿಯ ತಂಡವನ್ನು ಆಯ್ಕೆ ಮಾಡಿತ್ತು. ಆ ತಂಡದಲ್ಲಿ ಹಿಟ್ಮ್ಯಾನ್ ಹಾಗೂ ಇಶಾಂತ್ ಶರ್ಮಾ ಅವರನ್ನು ಕೈಬಿಟ್ಟಿದ್ದ ಆಯ್ಕೆ ಸಮಿತಿ, ಅವರಿಬ್ಬರನ್ನು ವೈದ್ಯಕೀಯ ವೀಕ್ಷಣೆಯಲ್ಲಿಟ್ಟಿದ್ದು, ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸ್ ಆದರೆ, ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆ ಮಾಡುವುದಾಗಿ ಹೇಳಿತ್ತು.
ಇದೀಗ ಭಾನುವಾರ ಬಿಸಿಸಿಐ ವೈದ್ಯಕೀಯ ತಂಡ ರೋಹಿತ್ ಶರ್ಮಾ ಫಿಟ್ ಇದ್ದಾರೆಯೇ ಎಂದು ನಾಳೆ ನಡೆಯುವ ಪರೀಕ್ಷೆಯಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ.
" ರೋಹಿತ್ ಅವನ್ನು ನಾಳೆ ಬಿಸಿಸಿಐ ವೈದ್ಯಕೀಯ ತಂಡ ಮೌಲ್ಯ ಮಾಪನ ಮಾಡಲಿದೆ. ಮಂಡಿರಜ್ಜು ಗಾಯದ ಜೊತೆಗೆ ಅವರು ರನ್ನಿಂಗ್ ಮಾಡಲು ಸಮರ್ಥರಿದ್ದಾರೆಯೇ, ಮತ್ತು ಗಾಯದಿಂದ ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರಾ ಅಥವಾ ಅದಕ್ಕೆ ಇನ್ನು ಹೆಚ್ಚು ಸಮಯ ಬೇಕಾಗಬಹುದೇ? ಎನ್ನುವುದರ ಬಗ್ಗೆ ನಾಳೆ ತಿಳಿಯಲಿದೆ" ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಎಎನ್ಐಗೆ ಮಾಹಿತಿ ನೀಡಿದ್ದಾರೆ.
ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಈಗಾಗಲೇ ಮುಂಬೈ ಇಂಡಿಯನ್ಸ್ ತಂಡ ಪೊಲಾರ್ಡ್ ನಾಯಕತ್ವದಲ್ಲಿ 4ನೇ ಪಂದ್ಯವನ್ನಾಡುತ್ತಿದೆ. ಮುಂಬೈ ಇಂಡಿಯನ್ಸ್ ಮೂಲಗಳ ಪ್ರಕಾರ ರೋಹಿತ್ ಚೇತರಿಸಿಕೊಂಡಿದ್ದು, ಪ್ಲೇ ಆಫ್ನಲ್ಲಿ ಆಡಲಿದ್ದಾರೆ ಎನ್ನಲಾಗುತ್ತಿದೆ.