ಕರ್ನಾಟಕ

karnataka

ETV Bharat / sports

2021, 22ರ IPL ಟೈಟಲ್‌ ಪ್ರಾಯೋಜಕತ್ವದ 'ಡ್ರೀಮ್'ಗೆ‌ ನಿರಾಶೆ: ಬಿಸಿಸಿಐ ಕೊಟ್ಟ ಕಾರಣ ಇಲ್ಲಿದೆ - ಇಂಡಿಯನ್​ ಪ್ರೀಮಿಯರ್​ ಲೀಗ್​

13ನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್ ಲೀಗ್​ ಟೈಟಲ್​ ಪ್ರಾಯೋಜಕತ್ವ ಹಕ್ಕು ಪಡೆದುಕೊಳ್ಳುವಲ್ಲಿ ಭಾರತೀಯ ಕಂಪನಿ ಡ್ರೀಮ್​ 11 ಯಶಸ್ವಿಯಾಗಿದೆ. ಆದ್ರೆ ಇದು ಒಂದು ವರ್ಷಕ್ಕೆ ಟೂರ್ನಿಗೆ ಮಾತ್ರ ಸೀಮಿತವಾಗಿದೆ.

Dream11 as title sponsor
Dream11 as title sponsor

By

Published : Aug 19, 2020, 9:24 PM IST

ಮುಂಬೈ:ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್​ ಲೀಗ್​ನ ಟೈಟಲ್​ ಪ್ರಾಯೋಜಕತ್ವ ಪಡೆದುಕೊಳ್ಳಲು ಭಾರತೀಯ ಕಂಪನಿ ಡ್ರೀಮ್​ 11 ಯಶಸ್ವಿಯಾಗಿದೆ. ಬರೋಬ್ಬರಿ 222 ಕೋಟಿ ರೂ. ನೀಡಿ ಈ ಹರಾಜು ತನ್ನದಾಗಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ಇದೀಗ ಐಪಿಎಲ್​ ಮುಖ್ಯಸ್ಥ ಬ್ರಿಜೇಶ್​ ಪಟೇಲ್​ ಅಧಿಕೃತ ಮಾಹಿತಿ ನೀಡಿದ್ದಾರೆ.

ಬ್ರಿಜೇಶ್​ ಪಟೇಲ್​

ಆದರೆ ಇದೀಗ ಲಭ್ಯವಾಗಿರುವ ಮಾಹಿತಿ ಪ್ರಕಾರ, ಡ್ರೀಮ್​ 11, 2020ರ ಪ್ರಾಯೋಜಕತ್ವ ಹಕ್ಕುಗಳ ಜತೆಗೆ 2021 ಹಾಗೂ 2022ರ ಐಪಿಎಲ್​ ಟೈಟಲ್​ ಪ್ರಾಯೋಜಕತ್ವ ಪಡೆದುಕೊಳ್ಳಲು ನಿರ್ಧಾರ ಮಾಡಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಚೀನಾ ಮೊಬೈಲ್​ ಕಂಪನಿ ಒಂದು ವೇಳೆ ಮುಂದಿನ ಪ್ರಾಯೋಜಕತ್ವದ ವೇಳೆಗೆ ಕಮ್​ಬ್ಯಾಕ್​ ಮಾಡದೇ ಹೋದರೆ ತಾವು 240 ಕೋಟಿ ರೂ. ನೀಡಿ ಬಿಡ್​​ ಪಡೆದುಕೊಳ್ಳುವುದಾಗಿ ಹೇಳಿದ್ದಾಗಿ ತಿಳಿದು ಬಂದಿದೆ.

ವಿವೋ ಟೈಟಲ್‌ ಪ್ರಾಯೋಜಕತ್ವಕ್ಕೆ ವಾರ್ಷಿಕವಾಗಿ ಬಿಸಿಸಿಐಗೆ 440 ಕೋಟಿ ರೂ ನೀಡುತ್ತಿದೆ. ಹಾಗಾಗಿ, ನಾವೇಕೆ ನಿಮಗೆ (ಡ್ರೀಮ್‌ 11) 240 ಕೋಟಿ ರೂಗೆ ಪ್ರಾಯೋಜಕತ್ವ ಹಕ್ಕು ನೀಡಬೇಕು ಎಂದು ಪ್ರಶ್ನೆ ಮಾಡಿದೆ ಎನ್ನಲಾಗಿದೆ.

ಡ್ರೀಮ್​ 11

ಕೇವಲ ಒಂದು ವರ್ಷದಲ್ಲಿ ಡ್ರೀಮ್​ 11 ಒಟ್ಟು 19 ಲೀಗ್​ಗಳಲ್ಲಿ ಪ್ರಾಯೋಜಕತ್ವ ಹೊಂದಿದ್ದು, ಅದರಲ್ಲಿ ಆರು ಇಂಡಿಯನ್​ ಪ್ರೀಮಿಯರ್​​ ಲೀಗ್ ಫ್ರಾಂಚೈಸಿಗಳಿವೆ. ಐಪಿಎಲ್​ ಪ್ರಾಯೋಜಕತ್ವಕ್ಕಾಗಿ ಅನ್ ಅಕಾಡೆಮಿ 210 ಕೋಟಿ ರೂ., ಟಾಟಾ ಸಂಸ್ಥೆ (180 ಕೋಟಿ), ಬೈಜುಸ್​​ (125 ಕೋಟಿ) ರೂ.ಗೆ ಬಿಡ್ ಮಾಡಿದ್ದವು. ಆದರೆ ಡ್ರೀಮ್​ 11 222 ಕೋಟಿ ರೂ. ಬಿಡ್​ ಸಲ್ಲಿಕೆ ಮಾಡಿ ಪ್ರಾಯೋಜಕತ್ವ ಪಡೆದುಕೊಂಡಿದೆ. ಡ್ರೀಮ್​ 11 ಪಡೆದುಕೊಂಡಿರುವ ಪ್ರಾಯೋಜಕತ್ವದ ಹಕ್ಕುಗಳು 4 ತಿಂಗಳು 13 ದಿನಗಳವರೆಗೆ ಇರಲಿದೆ.

ABOUT THE AUTHOR

...view details