ಕರ್ನಾಟಕ

karnataka

ETV Bharat / sports

ಐಪಿಎಲ್​ ವೇಳಾಪಟ್ಟಿಗೆ ಅಸಮಾಧಾನ ವ್ಯಕ್ತಪಡಿಸಿದ್ದ ಸ್ಟಾರ್​ ಇಂಡಿಯಾಗೆ ಉತ್ತರ ಕೊಟ್ಟ ಬಿಸಿಸಿಐ

ಆಟಗಾರರು ಅರ್ಹವಾದ ವಿರಾಮ ಪಡೆಯುವುದಲ್ಲದೆ, ದೇಶದ ಅತಿದೊಡ್ಡ ಹಬ್ಬದಂದೂ ತಮ್ಮ ಪ್ರೀತಿ ಪಾತ್ರರಾದವರೊಂದಿಗೆ ಅತ್ಯಮೂಲ್ಯ ಸಮಯ ಕಳೆಯುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ಗೊಂದಲಗಳಿಲ್ಲ. ನಾವು ಯಾವಾಗ ಬೇಕಾದರೂ ಪ್ರಸಾರಕರೊಂದಿಗೆ ಚರ್ಚಿಸಬಹುದು..

ಸ್ಟಾರ್​ ಇಂಡಿಯಾಗೆ ಉತ್ತರ ಕೊಟ್ಟ ಬಿಸಿಸಿಐ
ಸ್ಟಾರ್​ ಇಂಡಿಯಾಗೆ ಉತ್ತರ ಕೊಟ್ಟ ಬಿಸಿಸಿಐ

By

Published : Jul 20, 2020, 5:54 PM IST

ಮುಂಬೈ:ದೀಪಾವಳಿಗೂ ಮುನ್ನ ಐಪಿಎಲ್​ ಮುಗಿಯುವ ವೇಳಾಪಟ್ಟಿ ಪ್ರಕಟಿಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ಐಪಿಎಲ್​ ಬ್ರಾಡ್​ಕಾಸ್ಟ್​ ಹಕ್ಕು ಹೊಂದಿರುವ ಸ್ಟಾರ್​ ಇಂಡಿಯಾಗೆ ಬಿಸಿಸಿಐ ಸಮಾಧಾನಕರವಾಗಿ ವಿವರಣೆ ನೀಡಿದೆ.

ದೀಪಾವಳಿ ಸಂದರ್ಭದಲ್ಲಿ ಹೆಚ್ಚು ಜಾಹೀರಾತುಗಳ ನಿರೀಕ್ಷಯಲ್ಲಿದ್ದ ಸ್ಟಾರ್​ ಇಂಡಿಯಾಗೆ ಬಿಸಿಸಿಐ ಘೋಷಿಸಿದ ತಾತ್ಕಾಲಿಕ ವೇಳಾಪಟ್ಟಿ ಅಸಮಾಧಾನ ತಂದಿತ್ತು. ಯಾಕೆಂದರೆ, ಸೆಪ್ಟೆಂಬರ್​ 26ರಿಂದ ನವೆಂಬರ್​ 7ರವರೆಗೆ ವೇಳಾಪಟ್ಟಿ ನಿಗದಿಗೊಳಿಸಲಾಗಿದೆ. ಆದರೆ, ಸ್ಟಾರ್ ಇಂಡಿಯಾ ದೀಪಾವಳಿ ಕೊನೆಯವಾರದವರೆಗೆ ಐಪಿಎಲ್​ ನಡೆಯುವ ನಿರೀಕ್ಷೆಯಿಟ್ಟುಕೊಂಡಿತ್ತು.

ಇದರ ಬಗ್ಗೆ ಪ್ರತಿಕ್ರಿಯೆ ನೀಡಿದರುವ ಬಿಸಿಸಿಐ ಅಧಿಕಾರಿಯೊಬ್ಬರು, ಕಳೆದ ಕೆಲವು ವರ್ಷಗಳಲ್ಲಿ ದೀಪಾವಳಿ ಪರಿಕಲ್ಪನೆ ಬದಲಾಗಿದೆ. ಬಾರ್ಕ್​(ಬ್ರೋಡ್​​ಕಾಸ್ಟ್​ ಆಡಿಯನ್ಸ್​ ರೀಸರ್ಚ್​ ಕೌನ್ಸಿಲ್​)ನ ರೇಟಿಂಗ್ಗಳು ವಾರಂತ್ಯದಲ್ಲಿ ಅಷ್ಟೊಂದು ಫಲಪ್ರದವಾಗಿಲ್ಲ. ಅದಕ್ಕಾಗಿಯೇ ನಾವು ಕಳೆದ ಕೆಲವು ವರ್ಷಗಳಿಂದ ಟೀಮ್​ ಇಂಡಿಯಾ ಆಟಗಾರರಿಗೆ ಕುಟುಂಸ್ಥರೊಂದಿಗೆ ಆನಂದಿಸಲು ದೀಪಾವಳಿ ಬ್ರೇಕ್​ ನೀಡುತ್ತಿದ್ದೇವೆ ಎಂದು ತಿಳಿಸಿದ್ದಾರೆ. ​

ನಾವು ಯಾವಾಗಲೂ ಸ್ಟಾರ್​ ಇಂಡಿಯಾದೊಂದಿಗೆ ಕುಳಿತು ಚರ್ಚಿಸಬಹುದು. ಆದರೆ, ಈ ಹಿಂದೆ ಅವರೊಂದಿಗೆ ಬಾರ್ಕ್​ ರೇಟಿಂಗ್​ ಬಗ್ಗೆ ಚರ್ಚಿಸಿದ್ದೇವೆ. ಮತ್ತು ಅವರು ಐಪಿಎಲ್​ ಪ್ರಸಾರ ಮಾಡುವುದಲ್ಲದೆ, ಭಾರತೀಯ ಕ್ರಿಕೆಟ್​ ಪಂದ್ಯಗಳನ್ನು ಪ್ರಸಾರ ಮಾಡುವ ಹಕ್ಕನ್ನು ಹೊಂದಿದೆ. ದೀಪಾವಳಿ ವಾರಾಂತ್ಯಗಳಲ್ಲಿ ಬಾರ್ಕ್​ ರೇಟಿಂಗ್​ ಕುಸಿಯುವುದರಿಂದ ನಾವು ನಮ್ಮ ರಾಷ್ಟ್ರೀಯ ತಂಡ ಆ ಸಮಯದಲ್ಲಿ ಬ್ರೇಕ್​ ತೆಗೆದುಕೊಳ್ಳುವುದನ್ನು ನೋಡಿದ್ದೇವೆ ಎಂದು ಅವರು ವಿವರಿಸಿದ್ದಾರೆ.

ಆಟಗಾರರು ಅರ್ಹವಾದ ವಿರಾಮ ಪಡೆಯುವುದಲ್ಲದೆ, ದೇಶದ ಅತಿದೊಡ್ಡ ಹಬ್ಬದಂದೂ ತಮ್ಮ ಪ್ರೀತಿ ಪಾತ್ರರಾದವರೊಂದಿಗೆ ಅತ್ಯಮೂಲ್ಯ ಸಮಯ ಕಳೆಯುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ಗೊಂದಲಗಳಿಲ್ಲ. ನಾವು ಯಾವಾಗ ಬೇಕಾದರೂ ಪ್ರಸಾರಕರೊಂದಿಗೆ ಚರ್ಚಿಸಬಹುದು. ದೀಪಾವಳಿ​ ವಾರಾಂತ್ಯಕ್ಕೆ ಐಪಿಎಲ್ ವಿಸ್ತರಿಸದಿರುವುದಕ್ಕೆ ಇದು ಏಕೈಕ ಕಾರಣ ಎಂದು ತಿಳಿಸಿದ್ದಾರೆ.

ಇನ್ನು, ಸ್ಟಾರ್ ಸ್ಫೋರ್ಟ್ಸ್​ ಸಮೂಹ ಐಪಿಎಲ್ ಪ್ರಸಾರದ ಹಕ್ಕನ್ನು 2018ರಲ್ಲಿ 16,437 ಕೋಟಿ ರೂ. ನೀಡಿ ಪಡೆದಿದೆ. ಇದು ಐದು ವರ್ಷಗಳ ಒಪ್ಪಂದವಾಗಿದ್ದು, ಬಿಸಿಸಿಐಗೆ ವಾರ್ಷಿಕ 3,500 ರಿಂದ 4,000 ಕೋಟಿ ರೂ.ಗಳನ್ನ ಪಡೆದುಕೊಳ್ಳುತ್ತಿದೆ.

ABOUT THE AUTHOR

...view details