ಕರ್ನಾಟಕ

karnataka

ETV Bharat / sports

ಕೊಹ್ಲಿ ಪರ ಪಾಕ್​ ಮಾಜಿ ಕ್ಯಾಪ್ಟನ್​ ಬ್ಯಾಟ್​​... ಮತ್ತಷ್ಟು ಗಟ್ಟಿಗೊಂಡು ಕಮ್​ಬ್ಯಾಕ್​ ಎಂದ ಇಂಜಮಮ್​! - ಇಂಜಮಾಮ್​ ಉಲ್​-ಹಕ್​

ನ್ಯೂಜಿಲ್ಯಾಂಡ್​ ನೆಲದಲ್ಲಿ ಬ್ಯಾಟಿಂಗ್​ ವೈಫಲ್ಯ ಅನುಭವಿಸಿರುವ ಟೀಂ ಇಂಡಿಯಾ ಕ್ಯಾಪ್ಟನ್​ ಪರ ಪಾಕ್​ನ ಮಾಜಿ ಕ್ರಿಕೆಟಿಗ ಬ್ಯಾಟ್​ ಬೀಸಿದ್ದಾರೆ.

inzamam
ಕೊಹ್ಲಿ ಪರ ಪಾಕ್​ ಮಾಜಿ ಕ್ಯಾಪ್ಟನ್​ ಬ್ಯಾಟ್

By

Published : Mar 3, 2020, 10:52 AM IST

ಲಾಹೋರ್​:ನ್ಯೂಜಿಲ್ಯಾಂಡ್​ ವಿರುದ್ಧದ ಏಕದಿನ ಸರಣಿ ಹಾಗೂ ಟೆಸ್ಟ್​​ ಕ್ರಿಕೆಟ್​ನಲ್ಲಿ ಬ್ಯಾಟಿಂಗ್​ ವೈಫಲ್ಯ ಅನುಭವಿಸಿರುವ ಟೀಂ ಇಂಡಿಯಾ ಕ್ಯಾಪ್ಟನ್​ ವಿರಾಟ್​​ ಕೊಹ್ಲಿ ವಿರುದ್ಧವಾಗಿ ಈಗಾಗಲೇ ತರಹೇವಾರಿ ಕಮೆಂಟ್​ ಕೇಳಿ ಬರುತ್ತಿದ್ದು, ಇದರ ಮಧ್ಯೆ ಪಾಕಿಸ್ತಾನದ ಮಾಜಿ ನಾಯಕ ಇಂಜಮಮ್​ ಉಲ್​-ಹಕ್​ ವಿರಾಟ್​​ ಪರ ಬ್ಯಾಟ್​ ಬೀಸಿದ್ದಾರೆ.

ಟೆಸ್ಟ್​ ಸರಣಿಯಲ್ಲಿ ಟೀಂ ಇಂಡಿಯಾ 0-2 ಅಂತರದಿಂದ ಸರಣಿ ಕೈಚೆಲ್ಲಿದ್ದು, ವಿರಾಟ್​​ ಕೊಹ್ಲಿ 2, 19, 3 ಹಾಗೂ 14ರನ್​ಗಳಿಕೆ ಮಾಡಿ ನಿರಾಸೆ ಅನುಭವಿಸಿದ್ದರು. ಇದೇ ವಿಷಯವಾಗಿ ಅವರು ಬ್ಯಾಟಿಂಗ್​ ಸಾಮರ್ಥ್ಯದ ಬಗ್ಗೆ ಇನ್ನಿಲ್ಲದ ಕಮೆಂಟ್​ ಕೇಳಿ ಬಂದಿದ್ದವು. ಇದೀಗ ಇದೇ ವಿಷಯವಾಗಿ ಮಾತನಾಡಿರುವ ಇಂಜಮಮ್​, ಎಲ್ಲರೂ ಕೊಹ್ಲಿ ಬ್ಯಾಟಿಂಗ್​ ಬಗ್ಗೆ ಪ್ರಶ್ನೆ ಮಾಡುತ್ತಾರೆ. ಆದರೆ, ಅವರು ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 70 ಶತಕ ಬಾರಿಸಿದ್ದಾರೆ. ಹಾಗಾದರೆ, ಅವರ ಬ್ಯಾಟಿಂಗ್​ ತಂತ್ರಗಾರಿಕೆ ಪ್ರಶ್ನೆ ಮಾಡುವ ಅವಶ್ಯಕತೆ ಇಲ್ಲ. ಓರ್ವ ಕ್ರಿಕೆಟ್​ರ ಆಗಿ ಎಲ್ಲರೂ ಈ ಸಮಸ್ಯೆ ಎದುರಿಸುತ್ತಾರೆ. ಖಂಡಿತವಾಗಿ ಅವರು ಮತ್ತಷ್ಟು ಗಟ್ಟಿಗೊಂಡು ತಂಡಕ್ಕೆ ಕಮ್​ಬ್ಯಾಕ್​ ಮಾಡಲಿದ್ದಾರೆ ಎಂದಿದ್ದಾರೆ.

ಟೆಸ್ಟ್​ನಲ್ಲಿ ಕೊಹ್ಲಿ ಬ್ಯಾಟಿಂಗ್​ ಬಗ್ಗೆ ಪ್ರಶ್ನೆ ಮಾಡುವ ನೀವು, ಉಳಿದ ಆಟಗಾರರು ಏನು ಮಾಡಿದ್ದರೆ ಎಂದು ಗೊತ್ತಿಲ್ಲವೇ. ಕೊಹ್ಲಿ ತಮ್ಮ ಬ್ಯಾಟಿಂಗ್​ ತಂತ್ರಗಾರಿಕೆಯಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ ಎಂದಿದ್ದಾರೆ.

ABOUT THE AUTHOR

...view details