ಕರ್ನಾಟಕ

karnataka

By

Published : Sep 23, 2019, 12:49 PM IST

ETV Bharat / sports

ಚೇಸಿಂಗ್​ ನಮಗೆ ಸುಲಭ, ಟಾರ್ಗೆಟ್​ ನೀಡಿ ಗೆಲ್ಲುವುದಕ್ಕಾಗಿ ಬ್ಯಾಟಿಂಗ್​ ಆಯ್ಕೆ ಮಾಡಿದ್ವಿ: ವಿರಾಟ್​ ಕೊಹ್ಲಿ

ಚುಟುಕು ಕ್ರಿಕೆಟ್​ನಲ್ಲಿ ನಮಗೆ ಚೇಸಿಂಗ್​ ಆರಾಮದಾಯಕ ವಲಯವಾಗಿದೆ. ಹಾಗಾಗಿ ನಾವು ನಮಗೆ ಬ್ಯಾಟಿಂಗ್​​ ನಡೆಸಿ ಎದುರಾಳಿಗೆ ಉತ್ತಮ ಟಾರ್ಗೆಟ್​ ಸೆಟ್​ ಮಾಡಿ ಗೆಲ್ಲುವುದಕ್ಕೆ ಬಯಸಿ ಮೊದಲು ಬ್ಯಾಟಿಂಗ್​ ನಡೆಸಲು ನಿರ್ಧರಿಸಿದೆವು ಎಂದು ಕೊಹ್ಲಿ ಟಾಸ್​ ಗೆದ್ದರೂ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಕ್ಕೆ ಸ್ಪಷ್ಟನೆ ನೀಡಿದ್ದಾರೆ.

Kohli

ಬೆಂಗಳೂರು:ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟಿ-20 ಪಂದ್ಯದಲ್ಲಿ ಟಾಸ್​ ಗೆದ್ದ ವಿರಾಟ್​ ಕೊಹ್ಲಿ ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದ್ದಕ್ಕೆ ಸ್ಪಷ್ಟನೆ ನೀಡಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣ ಚೇಸಿಂಗ್​ ಹೇಳಿ ಮಾಡಿಸಿದ ಮೈದಾನ ಎಂಬುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇಲ್ಲಿ ಸಾಕಷ್ಟು ಐಪಿಎಲ್​ ಪಂದ್ಯಗಳನ್ನಾಡಿರುವ ವಿರಾಟ್​ ಕೊಹ್ಲಿ ಟಾಸ್​ ಗೆದ್ದ ಕೂಡಲೇ ಬ್ಯಾಟಿಂಗ್​ ಆಯ್ಕೆ ಮಾಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ಆದರೆ, ಅವರೇಕೆ ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡರು ಎಂಬುದಕ್ಕೆ ಪಂದ್ಯದ ನಂತರ ಸ್ಪಷ್ಟನೆ ನೀಡಿದ್ದಾರೆ.

"ಚುಟುಕು ಕ್ರಿಕೆಟ್​ನಲ್ಲಿ ನಮಗೆ ಚೇಸಿಂಗ್​ ಆರಾಮದಾಯಕ ವಲಯವಾಗಿದೆ. ಹಾಗಾಗಿ ನಾವು ನಮಗೆ ಬ್ಯಾಟಿಂಗ್​​ ನಡೆಸಿ ಎದುರಾಳಿಗೆ ಉತ್ತಮ ಟಾರ್ಗೆಟ್​ ಸೆಟ್​ ಮಾಡಿ ಗೆಲ್ಲುವುದಕ್ಕೆ ಬಯಸಿದ್ದೆವು. ಅದೇ ಕಾರಣಕ್ಕೆ ಮೊದಲು ಬ್ಯಾಟಿಂಗ್​ ನಡೆಸಲು ನಿರ್ಧರಿಸಿದೆ. ಆದರೆ, ನಮ್ಮ ಪರೀಕ್ಷೆ ವಿಫಲವಾಯಿತು. 200 ರನ್​ಗಳನ್ನು ನಿರಾಯಾಸವಾಗಿ ಗಳಿಸುವ ಈ ಪಿಚ್​ನಲ್ಲಿ ನಮ್ಮ ಅರಂಭ ಉತ್ತಮವಾಗಿತ್ತು. ಆದರೆ ಪಿಚ್​ ಕಠಿಣವಾಗುತ್ತಿದ್ದಂತೆ 170 ಸಾಕು ಎಂದಿನಿಸಿತ್ತು. ಆದರೆ, ದಕ್ಷಿಣ ಆಫ್ರಿಕಾ ಬೌಲರ್​ಗಳು ಅತ್ಯುತ್ತಮವಾಗಿ ಬೌಲಿಂಗ್​ ಮಾಡಿದರು. ನಿರಂತರ ವಿಕೆಟ್​ ಕಳೆದುಕೊಂಡೆವು" ಎಂದು ಕೊಹ್ಲಿ ತಿಳಿಸಿದ್ದಾರೆ.

ನಮಗೆ ಸುಲಭ ಮಾರ್ಗವನ್ನು ಬಿಟ್ಟು ಹೊರಗೆ ಬರಬೇಕಿತ್ತು. ದೊಡ್ಡ ಟೂರ್ನಿಗಳಲ್ಲಿ ಯಾವುದೂ ನಮ್ಮ ಕೈಯಲ್ಲಿರುವುದಿಲ್ಲ, ಅಲ್ಲಿ ಎಂತಹ ಸವಾಲಿಗಾದರೂ ನಾವು ಸಿದ್ದವಾಗಬೇಕಾಗುತ್ತದೆ. ಆದ್ದರಿಂದ ನಿನ್ನೆ ಮೊದಲು ಬ್ಯಾಟಿಂಗ್​ ಮಾಡುವುದು ನಮ್ಮ ಉದ್ದೇಶವಾಗಿತ್ತು. ಟಿ-20 ವಿಶ್ವಕಪ್​ಗೂ ಮುನ್ನ ನಮ್ಮ ತಂಡ ಕಠಿಣ ಸವಾಲುಗಳನ್ನು ಸ್ವೀಕರಿಸುವುದಕ್ಕೆ ತಯಾರಾಗಬೇಕೆಂದು ವಿರಾಟ್​ ತಿಳಿಸಿದ್ದಾರೆ.

ನಿನ್ನೆ ನಡೆದ ಪಂದ್ಯದಲ್ಲಿ ಭಾರತ ತಂಡ ಮೊದಲು ಬ್ಯಾಟಿಂಗ್​ ನಡೆಸಿ 134 ರನ್​ಗಳಿಸಿತ್ತು. ಈ ಮೊತ್ತವನ್ನು ದಕ್ಷಿಣ ಆಫ್ರಿಕಾ 1 ವಿಕೆಟ್​ ಕಳೆದುಕೊಂಡು ಗೆಲವು ಸಾಧಿಸಿ ಸರಣಿಯಲ್ಲಿ ಸಮಬಲ ಸಾಧಿಸಿತ್ತು.

ABOUT THE AUTHOR

...view details