ಸಿಡ್ನಿ :ಆಸ್ಟ್ರೇಲಿಯಾ ವಿರುದ್ಧ ಮೂರನೇ ಟೆಸ್ಟ್ ಪಂದ್ಯದ ವೇಳೆ ಹ್ಯಾಮ್ಸ್ಟ್ರಿಂಗ್ ಗಾಯಕ್ಕೊಳಗಾಗಿರುವ ಹನುಮ ವಿಹಾರಿ ಅವರು ಬ್ರಿಸ್ಬೇನ್ನಲ್ಲಿ ನಡೆಯುವ 4ನೇ ಟೆಸ್ಟ್ ಪಂದ್ಯದಿಂದ ಹೊರ ಬಿದ್ದಿದ್ದಾರೆ. 3ನೇ ಟೆಸ್ಟ್ ಪಂದ್ಯದ ನಂತರ ಅವರನ್ನು ಸ್ಕ್ಯಾನಿಂಗ್ಗೆ ಒಳಪಡಿಸಲಾಗಿದ್ದು, ಇಂದು ಸಂಜೆ ಅಥವಾ ಮಂಗಳವಾರ ಬೆಳಗ್ಗೆ ವರದಿ ಬರುವ ನಿರೀಕ್ಷೆಯಿದೆ.
ಆದಾಗ್ಯೂ, ಹನುಮ ವಿಹಾರಿ ನಾಲ್ಕನೇ ಪಂದ್ಯದಲ್ಲಿ ಆಡುವ ಸಾಧ್ಯತೆ ಕಡಿಮೆ ಎಂದು ಬಿಸಿಸಿಐ ಪಿಟಿಐಗೆ ಮಾಹಿತಿ ನೀಡಿದೆ. ಅವರು ಮುಂದಿನ ಮೂರು ದಿನಗಳಲ್ಲಿ ಮತ್ತೊಂದು ಪಂದ್ಯ ಆರಂಭವಾಗಲಿದ್ದು, ಈ ವೇಳೆಗೆ ಅವರು ಸಂಪೂರ್ಣ ಗುಣಮುಖರಾಗುವ ಸಾಧ್ಯತೆಯಿಲ್ಲ ಎಂದು ತಿಳಿಸಿದೆ. ಆಂಧ್ರ ಕ್ರಿಕೆಟಿಗ ಸೋಮವಾರ 161 ಎಸೆತಗಳನ್ನು ಎದುರಿಸಿ 23 ರನ್ಗಳಿಸಿ ಸಿಡ್ನಿ ಟೆಸ್ಟ್ ಡ್ರಾ ಆಗುವಂತೆ ಮಾಡಿದ್ದರು.
ಸ್ಕ್ಯಾನ್ ವರದಿಗಳು ಬಂದ ನಂತರವೇ ವಿಹಾರಿ ಅವರ ಗಾಯದ ಪ್ರಮಾಣವನ್ನು ಕಂಡು ಹಿಡಿಯಬಹುದು. ಆದರೆ, ಅದು ಗ್ರೇಡ್ 1 ಗಾಯವಾಗಿದ್ದರೂ ಸಹಾ ಅವರು ಕನಿಷ್ಠ ನಾಲ್ಕು ವಾರಗಳ ಕಾಲ ಹೊರಗಿರಬೇಕಾಗಿರುತ್ತದೆ. ಜೊತೆಗೆ ನಂತರ ಎನ್ಸಿಎನಲ್ಲಿ ಪುನರ್ವಸತಿಗೆ ಒಳಗಾಗಬೇಕಿದೆ.